ದೇವಸ್ಥಾನದಲ್ಲಿ ಶಿವನ ಕೊರಳಿಗೆ ಸುತ್ತಿಕೊಂಡ ನಾಗಪ್ಪ! ಅದ್ಬುತ ಸನ್ನಿವೇಶದ ಅಪರೂಪದ ದೃಶ್ಯ

Snake gets rolled up to shiva idol: ಶ್ರೀಶೈಲದಲ್ಲಿ ಅಪರೂಪದ ಘಟನೆ ನಡೆದಿದೆ. ಮೊದಲ ಏಕಾದಶಿಗೂ ಮುನ್ನ ಈ ಘಟನೆ ನಡೆದಿದ್ದು ಭಕ್ತರು ಈ ಅಪರೂಪ ದೃಷ್ಯವನ್ನು ಕಣ್ತುಂಬಿಕೊಂಡರು. ಹಾವೊಂದು ಶಿವನ ಲಿಂಗದ ಸುತ್ತ ಸುತ್ತಿ ತನ್ನ ಭಕ್ತಿಯನ್ನು ಪ್ರದರ್ಶಿಸಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Zee Kannada News Desk | Last Updated : Sep 1, 2024, 08:46 AM IST
  • ಶ್ರೀಶೈಲದಲ್ಲಿ ಅಪರೂಪದ ಘಟನೆ ನಡೆದಿದೆ.
  • ಏಕಾದಶಿಗೂ ಮುನ್ನ ಈ ಘಟನೆ ನಡೆದಿದ್ದು ಭಕ್ತರು ಈ ಅಪರೂಪ ದೃಷ್ಯವನ್ನು ಕಣ್ತುಂಬಿಕೊಂಡರು.
  • ಹಾವೊಂದು ಶಿವನ ಲಿಂಗದ ಸುತ್ತ ಸುತ್ತಿ ತನ್ನ ಭಕ್ತಿಯನ್ನು ಪ್ರದರ್ಶಿಸಿತು.
ದೇವಸ್ಥಾನದಲ್ಲಿ ಶಿವನ ಕೊರಳಿಗೆ ಸುತ್ತಿಕೊಂಡ ನಾಗಪ್ಪ! ಅದ್ಬುತ ಸನ್ನಿವೇಶದ ಅಪರೂಪದ ದೃಶ್ಯ title=

Snake gets rolled up to shiva idol: ಶ್ರೀಶೈಲದಲ್ಲಿ ಅಪರೂಪದ ಘಟನೆ ನಡೆದಿದೆ. ಮೊದಲ ಏಕಾದಶಿಗೂ ಮುನ್ನ ಈ ಘಟನೆ ನಡೆದಿದ್ದು ಭಕ್ತರು ಈ ಅಪರೂಪ ದೃಷ್ಯವನ್ನು ಕಣ್ತುಂಬಿಕೊಂಡರು. ಹಾವೊಂದು ಶಿವನ ಲಿಂಗದ ಸುತ್ತ ಸುತ್ತಿ ತನ್ನ ಭಕ್ತಿಯನ್ನು ಪ್ರದರ್ಶಿಸಿತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಳೆಗಾಲದಲ್ಲಿ ಹಾವುಗಳು ಹೆಚ್ಚು ಹೊರಬರುತ್ತವೆ. ಆಹಾರ ಭೇಟೆಯಾಲು ಸರ್ಪಗಳು ಕೆಲವೊಮ್ಮೆ ನಮ್ಮ ಮನೆಗಳಿಗೂ ನುಸುಳಿರುವ ಉದಾಹರಣೆಗಳಿದೆ. ಈ ರೀತಿಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲಾತಾನದಲ್ಲಿ ಹರಿದಾಡುತ್ತಿರುತ್ತದೆ. ಈ ವಿಡಿಯೋಗಳು ಕೆಲವೊಮ್ಮೆ ಭಯ ಹುಟ್ಟಿಸುವಂತಿದ್ದರೆ, ಇನ್ನೂ ಕೆಲವೊಮ್ಮೆ ಅಚ್ಚರಿ ಪಡಿಸುತ್ತವೆ. ಅಂತಹದರಲ್ಲಿ ಇಲ್ಲೊಂದು ಹಾವಿನ ವಿಡಿಯೋ ನೆಟ್ಟಿಗರ ಹೃದಯ ಕದ್ದಿದೆ.

ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು

ಶ್ರೀ ಶೈಲದಲ್ಲಿ ಪ್ರಥಮ ಏಕಾದಶಿಗೆ ಮುನ್ನ ಅಪರೂಪದ ಘಟನೆಯೊಂದು ನಡೆದಿತ್ತು.  ವಜ್ರ ಗಂಗಮ್ಮ ದೇವಸ್ಥಾನದ ಬಳಿ  ಶ್ರೀ ಶೈಲಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗುತ್ತು. 

ದೇವಸ್ಥಾನದ ಆವರನದಲ್ಲಿದ್ದ ಶಿವನ ಬಳಿ ಹೋಗಿ  ಹಾವು ಶಿವಲಿಂಗವನ್ನು ಸುತ್ತಿಕೊಂಡು ಕೂತಿತ್ತು. ಅತಿ ಪುರಾತನವಾದ ಶಿವಲಿಂಗವನ್ನು ಸುತ್ತಿಕೊಂಡು ಬಹಳ ಹೊತ್ತು ಅಲ್ಲೇ ಚಲನರಹಿತವಾಗಿತ್ತು. ಇದನ್ನು ಕಂಡ ಸ್ಥಳೀಯರು ಭಕ್ತಿ ಪರವಶತೆಯಲ್ಲಿ ಮುಳುಗಿದ್ದರು.

ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು

ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು, ಈ ವಿಶೇಷ ಸಂದರ್ಭವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾನದಲ್ಲಿ ಹರಿ ಬಿಟ್ಟಿದ್ದರು. ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಈ ಅಪರೂಪದ ದೃಶ್ಯ ಕಂಡು ಭಕ್ತಿಯಿಂದ ಪುಳಕಿತರಾಗಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News