ಕಂದಕಕ್ಕೆ ಉರುಳಿದ ಬಸ್: 29 ಪ್ರಯಾಣಿಕರ ದುರ್ಮರಣ..!

ಬೆಳಗಿನ ಜಾವ ಸ್ಥಳೀಯ ಸಮಯ 4 ಗಂಟೆಗೆ ರಾಧಾನಿ ಲಿಮಾವನ್ನು ಹುವಾನುಕೋಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ.

Written by - Zee Kannada News Desk | Last Updated : Sep 1, 2021, 11:25 AM IST
  • ಕಂದಕಕ್ಕೆ ಬಸ್ ಉರುಳಿಬಿದ್ದು 29 ಪ್ರಯಾಣಿಕರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ
  • ಲಿಮಾದಿಂದ 60 ಕಿ.ಮೀ ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ
  • ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ
ಕಂದಕಕ್ಕೆ ಉರುಳಿದ ಬಸ್: 29 ಪ್ರಯಾಣಿಕರ ದುರ್ಮರಣ..! title=
ಕಂದಕಕ್ಕೆ ಬಸ್ ಉರುಳಿ 29 ಪ್ರಯಾಣಿಕರ ಸಾವನ್ನಪ್ಪಿದ್ದಾರೆ (Photo Courtesy: @Zee news/Representative Images)

ಲಿಮಾ: ಕಂದಕಕ್ಕೆ ಬಸ್ ಉರುಳಿ(Bus Accident)ದ ಪರಿಣಾಮ 29 ಪ್ರಯಾಣಿಕರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪೆರುವಿನಲ್ಲಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೇರುವಿನ ರಾಜಧಾನಿ ಲಿಮಾ(Lima)ದಿಂದ 60 ಕಿ.ಮೀ ಪೂರ್ವಕ್ಕೆ ಕ್ಯಾರೆಟೆರಾ ಸೆಂಟ್ರೆಲ್ ರಸ್ತೆಯ ಕಿರಿದಾದ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ. ಬಸ್ ನಲ್ಲಿ ಒಟ್ಟು 63 ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. 6 ವರ್ಷದ ಬಾಲಕ ಮತ್ತು 3 ವರ್ಷದ ಬಾಲಕಿ ಸೇರಿ 29 ಮಂದಿ ಸಾವನ್ನಪ್ಪಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್

ಚಾಲಕ ಅತಿವೇಗದಲ್ಲಿ ಬಸ್ ಚಲಾಯಿಸಿದ್ದರಿಂದ ಅವಘಡ(Bus Crash)ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅತಿವೇಗದಲ್ಲಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಬಂಡೆಕಲ್ಲಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ 650 ಅಡಿ ಆಳದ ಕಮರಿಗೆ ಉರುಳಿಬಿದ್ದಿದೆ ಅಂತಾ ಘಟನೆಯಲ್ಲಿ ಬದುಕುಳಿದವರು ತಿಳಿಸಿದ್ದಾರೆ.

ಬೆಳಗಿನ ಜಾವ ಸ್ಥಳೀಯ ಸಮಯ 4 ಗಂಟೆಗೆ ರಾಧಾನಿ ಲಿಮಾವನ್ನು ಹುವಾನುಕೋಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಈ ಅಪಘಾತ ನಡೆದಿದೆ. ಈ ವೇಳೆ ಬಹುತೇಕ ಪ್ರಯಾಣಿಕರು ನಿದ್ರೆಯ ಮಂಪರಿನಲ್ಲಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಕಾರಣ ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೀಡಾದ ವಾಹನವು ಅಧಿಕ ವೇಗದಲ್ಲಿ ಚಲಿಸುತ್ತಿತ್ತು ಅಂತಾ ಜಿಯೋಲೋಕಲೈಸೇಶನ್ ಡೇಟಾ ತೋರಿಸಿದೆ. ಅಪಘಾತದ ಬಳಿಕ ಅಧಿಕಾರಿಗಳು ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಅತಿಯಾದ ವೇಗ, ಕಳಪೆ ಹೆದ್ದಾರಿಗಳ ನಿರ್ವಹಣೆಯಿಂದ ಪೆರುವಿನಲ್ಲಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Pakistan ಚಿತ್ರಣವನ್ನು ಬದಲಾಯಿಸಲು ಪತ್ರಕರ್ತರ ಮೊರೆ ಹೋದ ಪಾಕಿಸ್ತಾನ, ನೀಡಿದೆ ಈ ದೊಡ್ಡ ಜವಾಬ್ದಾರಿ

2 ದಿನಗಳ ಹಿಂದಷ್ಟೇ ಪೆರು(Peru)ವಿನ ಆಗ್ನೇಯ ಪ್ರದೇಶದಲ್ಲಿ ಬಸ್ ಪ್ರಪಾತ(Bus Crash)ಕ್ಕೆ ಉರುಳಿಬಿದ್ದು 17 ಮಂದಿ ಮೃತಪಟ್ಟಿದ್ದರು. ಇದಲ್ಲದೆ ಭಾನುವಾರ(ಆಗಸ್ಟ್ 29) ಪೆರುವಿನಲ್ಲಿ ಅಮೆಜಾನ್ ನದಿಯಲ್ಲಿ 2 ದೋಣಿಗಳು ಮುಖಾಮುಖಿ ಡಿಕ್ಕಿ ಹೊಡೆದು 22 ಮಂದಿ ಸಾವನ್ನಪ್ಪಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News