ಗುಡ್ ಬೈ Cheems.. ಮೀಮ್ಸ್ ಮೂಲಕ ಜನರನ್ನು ಸೆಳೆದ ನಾಯಿ ಇನ್ನಿಲ್ಲ!

Cheems Dog Died: ಸೋಶಿಯಲ್ ಮೀಡಿಯಾದಲ್ಲಿ ಪ್ರಪಂಚದಾದ್ಯಂತ ತಿಳಿದಿರುವ ಚೀಮ್ಸ್ ಎಂಬ ನಾಯಿ ನಿನ್ನೆ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ.   

Written by - Chetana Devarmani | Last Updated : Aug 19, 2023, 07:51 PM IST
  • ಮೀಮ್ಸ್ ಮೂಲಕ ಜನರನ್ನು ಸೆಳೆದ ಶ್ವಾನ
  • ನೆಟ್ಟಿಗರ ಮನಗೆದ್ದಿದ್ದ ನಾಯಿ ಇನ್ನಿಲ್ಲ
  • ಅನಾರೋಗ್ಯದಿಂದ ಕೊನೆಯುಸಿರೆಳೆದ ಚೀಮ್ಸ್‌
ಗುಡ್ ಬೈ Cheems.. ಮೀಮ್ಸ್ ಮೂಲಕ ಜನರನ್ನು ಸೆಳೆದ ನಾಯಿ ಇನ್ನಿಲ್ಲ! title=

Cheems Dog Died: ನೀವು ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಪ್ರತಿದಿನ ಬಳಸುವವರಾಗಿದ್ದರೆ  ಈ ನಾಯಿಯ ಬಗ್ಗೆ ಪರಿಚಿತರಾಗಿರುವ ಸಾಧ್ಯತೆಗಳಿವೆ. ವಿವಿಧ ಹಾಸ್ಯಮಯ ಸನ್ನಿವೇಶಗಳಲ್ಲಿ ನಾಯಿಗಳ ನಡುವಿನ ಸಂಭಾಷಣೆಯ ಶೈಲಿಯಲ್ಲಿ ರಚಿಸಲಾದ ಈ ಮೀಮ್‌ಗಳು ನೆಟಿಜನ್‌ಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ.  

ಈ ಮೀಮ್‌ಗಳಲ್ಲಿ ಮುಖ್ಯ ಪಾತ್ರವಾಗಿರುವ ಚೀಮ್ಸ್ ಎಂಬ ನಾಯಿ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದೆ ಎಂಬ ವರದಿಗಳು ಹೊರಬಂದಿದ್ದವು. ಚೀಮ್ಸ್‌‌ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತದೆ ಎಂದು ಭರವಸೆ ಇತ್ತು. ಆದರೆ ಇದೀಗ ಈ ನಾಯಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅದರ ಮಾಲೀಕರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಗೂಢ ಬಾಹ್ಯಾಕಾಶದಲ್ಲಿ ನಿಜವಾಗಿಯೂ ʼಬಿಳಿ ರಂಧ್ರʼ ಇದೆಯೇ..! ಇಲ್ಲಿದೆ ನೋಡಿ ಉತ್ತರ

ಚೀಮ್ಸ್ ನಾಯಿಯ ಮಾಲೀಕರು ತಮ್ಮ Instagram ಪುಟದಲ್ಲಿ ಅದರ ಸಾವಿನ ದುಃಖದ ಸುದ್ದಿಯನ್ನು ಪ್ರಕಟಿಸಿದ್ದಾರೆ. ಚೀಮ್ಸ್ ತನ್ನ ಕೊನೆಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿತು ಎಂದು ಅವರು ಹೇಳಿದ್ದಾರೆ.

"ಆರಂಭದಲ್ಲಿ ಈ ನಾವು ಚೀಮ್ಸ್‌ಗೆ ಕೀಮೋಥೆರಪಿ ಅಥವಾ ಇತರ ಸಂಭವನೀಯ ಚಿಕಿತ್ಸೆಯನ್ನು ವ್ಯವಸ್ಥೆ ಮಾಡಲು ಬಯಸಿದ್ದೆವು. ಆದರೆ ಈಗ ಅದು ತುಂಬಾ ತಡವಾಗಿದೆ" ಎಂದು ಅವರು ಪೋಸ್ಟ್‌ನಲ್ಲಿ ಶೇರ್‌ ಮಾಡಿದ್ದಾರೆ. ಅವರು Instagram ನಲ್ಲಿ ಚೀಮ್ಸ್‌ನ ಕೆಲವು ಸಂತೋಷದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Most dangerous road: ಇದೇ ನೋಡಿ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ..!

ಚೀಮ್ಸ್‌ ಸಾವು ಲಕ್ಷಾಂತರ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ. ಚೀಮ್ಸ್‌ ಕೆಲವು ಕಷ್ಟದ ತಿಂಗಳುಗಳನ್ನು ಎದುರಿಸುತ್ತಿರುವಾಗ ಚಿಕಿತ್ಸೆ ನೀಡಿದ ವೆಟ್ಸ್‌ಗೆ ಅದರ ಮಾಲೀಕರು ಧನ್ಯವಾದ ಹೇಳಿದ್ದಾರೆ. ಚೀಮ್ಸ್‌ನ ವೈದ್ಯಕೀಯ ವೆಚ್ಚಕ್ಕಾಗಿ ಸಂಗ್ರಹಿಸಿದ ಹಣವನ್ನು ಈಗ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News