/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಇಸ್ಲಾಮಾಬಾದ್: ಕೊರೊನಾವೈರಸ್‌ನಿಂದಾಗಿ ವಿಶ್ವದಾದ್ಯಂತದ ಆರ್ಥಿಕತೆಯು ಸ್ಥಗಿತಗೊಂಡಿದೆ. ಒಂದು ಕಡೆ ಕೊರೊನಾವೈರಸ್ ವಿರುದ್ಧ ಹೋರಾಡುವ ಸವಾಲುಗಳು ಎದುರಾಗಿದ್ದರೆ, ಇನ್ನೊಂದು ಕಡೆ ಆರ್ಥಿಕತೆಯನ್ನು ನಿರ್ವಹಿಸುವುದು ಕಠಿಣವಾಗಿದೆ. ಏತನ್ಮಧ್ಯೆ ಈಗಾಗಲೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಜನರು ಹಸಿವಿನಿಂದ ಸಾಯುತ್ತಿದ್ದಾರೆ ದಯವಿಟ್ಟು ಸಹಾಯ ಮಾಡಿ ಸಾಲದಲ್ಲಿ ಪರಿಹಾರ ನೀಡಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ಸಹಾಯಕ್ಕಾಗಿ ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

 ಕೊರೊನಾವೈರಸ್  (Coronavirus)  ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುವಂತೆ ನಾನು ಅಂತರರಾಷ್ಟ್ರೀಯ ಸಮುದಾಯ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಮನವಿ ಮಾಡಿ ಇಮ್ರಾನ್ ಖಾನ್ ಭಾನುವಾರ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ತಮ್ಮ ವೀಡಿಯೊ ಸಂದೇಶದಲ್ಲಿ ಇಂದು ನಾನು ಜಾಗತಿಕ ಸಮುದಾಯದ ಮುಂಭಾಗವನ್ನು ತಲುಪಲು ಬಯಸುತ್ತೇನೆ. ಕೋವಿಡ್ -19 ವಿರುದ್ಧ ನಾವು ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇವೆ - ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು ಒಂದು ರೀತಿಯಾಗಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇನ್ನೊಂದು ರೀತಿಯಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಮೊದಲು ಲಾಕ್‌ಡೌನ್ ಜಾರಿಗೊಳಿಸುವ ಮೂಲಕ  ಕರೋನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ನಂತರ ಅದರಿಂದ ಪ್ರಭಾವಿತವಾದ ಆರ್ಥಿಕತೆಯನ್ನು ನಿರ್ವಹಿಸುತ್ತಿವೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕರೋನಾ ವೈರಸ್ ಮತ್ತು ಆರ್ಥಿಕ ಸವಾಲನ್ನು ಎದುರಿಸುವುದರ ಜೊತೆಗಿನ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಜನರು ಇಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ.

ಜನರು ಮೊದಲು ವೈರಸ್‌ನಿಂದ ಸಾಯುವುದನ್ನು ತಡೆಯುವುದು ಇಲ್ಲಿನ ಸವಾಲು, ಮತ್ತೊಂದೆಡೆ   ಲಾಕ್​​ಡೌನ್ (Lockdown)  ನಂತರ ಉದ್ಭವಿಸಿದ ಪರಿಸ್ಥಿತಿಗಳು ಅಂದರೆ ಹಸಿವಿನಿಂದ ಅವರನ್ನು ರಕ್ಷಿಸಬೇಕು." ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಲಭ್ಯವಿರುವ ಸಂಪನ್ಮೂಲಗಳಲ್ಲಿ ಭಾರಿ ಅಸಮಾನತೆಯಿದೆ ಎಂಬುದು ಇನ್ನೊಂದು ಸಮಸ್ಯೆ ಎಂದು ತಿಳಿಸಿರುವ ಇಮ್ರಾನ್ ಖಾನ್ ತಮ್ಮ ಸರ್ಕಾರವು ಪಾಕಿಸ್ತಾನದ ನಿರ್ಗತಿಕ ಜನರಿಗೆ ಹಸಿವನ್ನು ನೀಗಿಸಲು 8 ಬಿಲಿಯನ್ ಡಾಲರ್ ಪ್ಯಾಕೇಜ್ ನೀಡಿದೆ ಎಂದು ಹೇಳಿದ್ದಾರೆ

ಅಭಿವೃದ್ಧಿಶೀಲ ರಾಷ್ಟ್ರಗಳು ಆರೋಗ್ಯ ಸೇವೆಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಸಾಕಷ್ಟು ಹಣವನ್ನು ಹೊಂದಿಲ್ಲ ಮತ್ತು ಮತ್ತೊಂದೆಡೆ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅದಕ್ಕಾಗಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕರೋನಾ ವೈರಸ್ ಸಾವುಗಳನ್ನು ತಡೆಯುವ ಉಪಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಹಣಕಾಸು ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ವಿನಂತಿಸುತ್ತೇನೆ ಎಂದು ಇಮ್ರಾನ್ ಹೇಳಿದ್ದಾರೆ.

ಪಾಕಿಸ್ತಾನ (Pakistan)ದಲ್ಲಿ ಲಾಕ್‌ಡೌನ್ ಜಾರಿಗೆ ತರಲಾಗಿದ್ದು ಇಲ್ಲಿಯವರೆಗೆ ದೇಶದಲ್ಲಿ 5,183 ಜನರಿಗೆ ಕರೋನಾ  COVID-19 ಸೋಂಕು ಹರಡಿರುವುದು ದೃಢಪಟ್ಟಿದೆ. ಅದರಲ್ಲಿ ಅರ್ಧದಷ್ಟು ಪ್ರಕರಣಗಳು ಪಂಜಾಬ್ ಪ್ರಾಂತ್ಯದಿಂದ ಮಾತ್ರ ದಾಖಲಾಗಿವೆ. ಅದೇ ಸಮಯದಲ್ಲಿ 86 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ತನ್ನ ಆದಾಯದ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುತ್ತಿದೆ ಎಂದು ಸಚಿವ ಅಸಾದ್ ಒಮರ್ ಮಾಧ್ಯಮಗಳಿಗೆ ಬಹಿರಂಗಪಡಿಸಿದರು. ಸಾಂಕ್ರಾಮಿಕ ರೋಗದಿಂದಾಗಿ ರಫ್ತು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಈಶಾ ತುರ್ತು ನಗದು ಕಾರ್ಯಕ್ರಮದ (ಇಇಸಿಪಿ) ಅಡಿಯಲ್ಲಿ 12 ಮಿಲಿಯನ್ ಕುಟುಂಬಗಳಿಗೆ 144 ಮಿಲಿಯನ್ ಪಿಕೆಆರ್ ನೀಡಲಾಗುವುದು. ಇದು ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಪರಿಹಾರ ಪ್ಯಾಕೇಜ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

Section: 
English Title: 
Coronavirus: People are dying of hunger in Pakistan, PM Imran Khan seeks debt relief from world community
News Source: 
Home Title: 

Covid-19: ಜನರು ಹಸಿವಿನಿಂದ ಸಾಯುತ್ತಿದ್ದಾರೆ ದಯವಿಟ್ಟು ಸಹಾಯ ಮಾಡಿ, ಪಾಕ್ ಪ್ರಧಾನಿ ಮನವಿ

Covid-19: ಜನರು ಹಸಿವಿನಿಂದ ಸಾಯುತ್ತಿದ್ದಾರೆ ದಯವಿಟ್ಟು ಸಹಾಯ ಮಾಡಿ, ಪಾಕ್ ಪ್ರಧಾನಿ ಮನವಿ
Yes
Is Blog?: 
No
Tags: 
Facebook Instant Article: 
Yes
Mobile Title: 
Covid-19: ಜನರು ಹಸಿವಿನಿಂದ ಸಾಯುತ್ತಿದ್ದಾರೆ ದಯವಿಟ್ಟು ಸಹಾಯ ಮಾಡಿ, ಪಾಕ್ ಪ್ರಧಾನಿ ಮನವಿ
Publish Later: 
No
Publish At: 
Monday, April 13, 2020 - 09:32
Created By: 
Yashaswini V
Updated By: 
Yashaswini V
Published By: 
Yashaswini V