Viral News: 30 ವರ್ಷಗಳಿಂದ ಹೇರ್ ಕಟ್ ಮಾಡಿಲ್ಲ, ಈ ಮಹಿಳೆಗೆ ಏನಾಗಿದೆ ನೋಡಿ..!

ಇಡೀ ದೇಹವನ್ನೇ ಆವರಿಸಿರುವ ಕೂದಲನ್ನು ಕತ್ತರಿಸುವಂತೆ ಅನೇಕ ಜನರು ಅಲೋನಾರಿಗೆ ಸಾವಿರಾರು ಡಾಲರ್‌ಗಳ ದೇಣಿಗೆ ನೀಡಿದ್ದಾರೆ.

Written by - Puttaraj K Alur | Last Updated : Nov 9, 2021, 05:04 PM IST
  • ಉಕ್ರೇನ್‌ನ 35 ವರ್ಷದ ಅಲೋನಾ ಕ್ರಾವ್ಚೆಂಕೊ 30 ವರ್ಷಗಳಿಂದ ತನ್ನ ಕೂದಲಿಗೆ ಕತ್ತರಿ ಹಾಕಿಲ್ಲ
  • ಡಿಸ್ನಿ ರಾಜಕುಮಾರಿಯಂತೆ ಪೋಸು ಕೊಡುವ ಅಲೋನಾ 6.5 ಅಡಿ ಉದ್ದದ ಕೂದಲು ಹೊಂದಿದ್ದಾರೆ
  • ಅಲೋನಾರ ಉದ್ದದ ಕೂದಲು ತೊಳೆಯಲು ಸುಮಾರು 40-60 ನಿಮಿಷಗಳು ಬೇಕಂತೆ
Viral News: 30 ವರ್ಷಗಳಿಂದ ಹೇರ್ ಕಟ್ ಮಾಡಿಲ್ಲ, ಈ ಮಹಿಳೆಗೆ ಏನಾಗಿದೆ ನೋಡಿ..!
ಅಲೋನಾ ಕ್ರಾವ್ಚೆಂಕೊ 6.5 ಅಡಿ ಉದ್ದದ ಕೂದಲು

ನವದೆಹಲಿ: ಪ್ರಪಂಚದಲ್ಲಿ ಅನೇಕರು ವಿಚಿತ್ರ ಹವ್ಯಾಸಗಳನ್ನು ರೂಢಿಸಿಕೊಂಡು ಸುದ್ದಿಯಲ್ಲಿರುತ್ತಾರೆ. ಕೆಲವರು ತಮ್ಮ ಕೂದಲು ಉದ್ದವಾಗಿ ಬೆಳೆಯಲು ತುಂಬಾ ಇಷ್ಟಪಡುತ್ತಾರೆ. ಇಂತಹವರು ಕೂದಲು ಎಷ್ಟೇ ಉದ್ದ ಬೆಳೆದರೂ ಕತ್ತರಿಸುವ ಗೋಜಿಗೆ ಹೋಗುವುದಿಲ್ಲ. ಹೀಗೆ ತನ್ನ ಕೂದಲನ್ನು ಬೆಳೆಸುವ ಮೂಲಕ ನಾನು ಡಿಸ್ನಿ ರಾಜಕುಮಾರಿಗಿಂತ ಕಡಿಮೆ ಇಲ್ಲವೆಂದು ಬೀಗುತ್ತಿರುವ ಮಹಿಳೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ. ಈ ಮಹಿಳೆ ಯಾರು..? ಉದ್ದ ಕೂದಲು ಬೆಳೆಸಿರುವ ಈಕೆ ಈಗ ಹೇಗಿದ್ದಾಳೆ? ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಯಾರು ಈ ಉದ್ದ ಕೂದಲಿನ ಮಹಿಳೆ..?

ಈಕೆಯ ಹೆಸರು ಅಲೋನಾ ಕ್ರಾವ್ಚೆಂಕೊ(Alona Kravchenko). ಉಕ್ರೇನ್‌ನ 35 ವರ್ಷದ ಈಕೆ ಕಳೆದ 30 ವರ್ಷಗಳಿಂದ ತನ್ನ ಕೂದಲಿಗೆ ಕತ್ತರಿಯನ್ನೇ ಹಾಕಿಲ್ಲ. ಹೀಗಾಗಿ ಈಕೆ ಚಿನ್ನದಂತೆ ಹೊಳೆಯುವ ಉದ್ದದ ಕೂದಲನ್ನು ಹೊಂದಿದ್ದಾಳೆ. ನೋಡಲು ಈಕೆ ಈಗ ಡಿಸ್ನಿ ರಾಜಕುಮಾರಿಯಂತೆ ಕಾಣುತ್ತಾಳೆ. ಅಲೋನಾರ 6.5 ಅಡಿ ಉದ್ದದ ಚಿನ್ನದ ಕೂದಲನ್ನು ಕಂಡು ಅನೇಕರಿಗೆ ಅಚ್ಚರಿಯ ಜೊತೆಗೆ ಆಶ್ಚರ್ಯವೂ ಆಗುತ್ತಿದೆ.

ಇದನ್ನೂ ಓದಿ: Hindu Temple: ಪಾಕಿಸ್ತಾನದಲ್ಲಿ ಮತ್ತೆ ಹಿಂದೂಗಳ ವಿರುದ್ಧ ತಾರತಮ್ಯ, ದೇವಸ್ಥಾನಕ್ಕೆ ಭೂಮಿ ನೀಡಲು ನಿರಾಕರಿಸಿದ ಸರ್ಕಾರ 

5ನೇ ವರ್ಷದಿಂದಲೇ ಕೂದಲು ಬೆಳೆಯುತ್ತಿದೆ

ಅಲೋನಾ 5ನೇ ವಯಸ್ಸಿನಿಂದಲೇ ತನ್ನ ಕೂದಲನ್ನು ಕತ್ತರಿಸಿಲ್ಲ. ಉದ್ದನೆಯ ಕೂದಲನ್ನು ನಿಭಾಯಿಸುವುದು ಮತ್ತು ಕಾಪಾಡಿಕೊಳ್ಳುವುದು ಸುಲಭವಲ್ಲ. ತಾನು ಸಾಂದರ್ಭಿಕವಾಗಿ ಮಾತ್ರ ಟ್ರಿಮ್ಮಿಂಗ್ ಮಾಡುತ್ತೇನೆ. ಉದ್ದ ಕೂದಲು ಕಾಪಾಡಿಕೊಳ್ಳಲು ನಾನು ಭಾರೀ ಕಷ್ಟಪಟ್ಟಿದ್ದೇನೆ ಅಂತಾ ಅಲೋನಾ ಹೇಳುತ್ತಾಳೆ.   

ಅಲೋನಾಗಿಂತಲೂ ಎತ್ತರವಾಗಿರುವ ಕೂದಲು

ಅಲೋನಾ ತಮ್ಮ ಹಲವು ಫೋಟೋಶೂಟ್‌(Photoshoot)ಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆಯ ಇತ್ತೀಚಿನ ಚಿತ್ರಗಳಲ್ಲಿ ಅವಳ ಕೂದಲನ್ನು ನೀವು ನೋಡಬಹುದು. ಆಕೆಗಿಂತಲೂ ಎತ್ತರವಾಗಿರುವ ಕೂದಲನ್ನು ಅಲೋನಾ ಹೊಂದಿದ್ದಾಳೆ. ಆಕೆಯ ಕೂದಲು ಇಡೀ ದೇಹವನ್ನೇ ಆವರಿಸಿದೆ.

ಕೂದಲು ಕತ್ತರಿಸುವಂತೆ ದೇಣಿಗೆ ನೀಡಿದ್ದ ಜನರು

Alona-Kravchenko-2.jpg

ಇಡೀ ದೇಹವನ್ನೇ ಆವರಿಸಿರುವ ಕೂದಲನ್ನು ಕತ್ತರಿಸುವಂತೆ ಅನೇಕ ಜನರು ಅಲೋನಾರಿಗೆ ಸಾವಿರಾರು ಡಾಲರ್‌ಗಳ ದೇಣಿಗೆ ನೀಡಿದ್ದಾರೆ. ಆದರೆ ಅಲೋನಾ ಮಾತ್ರ ಎಂದಿಗೂ ಕೂಡ ತನ್ನ ಉದ್ದನೆಯ ಕೂದಲನ್ನು ಕತ್ತರಿಸುವುದಿಲ್ಲವೆಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆಕೆಯ ಸೌಂದರ್ಯವೇ ಅವಳ ಕೂದಲಿನಲ್ಲಿ ಅಡಗಿದೆ ಎಂದು ಅಲೋನಾರ ತಾಯಿ ಹೇಳುತ್ತಾರೆ. ಪ್ರತಿ 6 ತಿಂಗಳಿಗೊಮ್ಮೆ ಮಾತ್ರ ಅಲೋನಾ ತಮ್ಮ ಕೂದಲನ್ನು ಟ್ರಿಮ್ ಮಾಡಿಕೊಳ್ಳುತ್ತಾರಂತೆ.

ಇದನ್ನೂ ಓದಿ: China: ಈ ನಗರದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇರ್ತಾರೆ ಒಂದಕ್ಕಿಂತ ಹೆಚ್ಚು Girl Friend, ಕಾರಣ ಏನು ಗೊತ್ತಾ?

ಕೂದಲು ತೊಳೆಯಲು 1 ಗಂಟೆ ಬೇಕು..!

ತನ್ನ ಆರೋಗ್ಯಕರ ಮತ್ತು ಹೊಳೆಯುವ ಕೂದಲನ್ನು ಕಾಪಾಡಿಕೊಳ್ಳಲು ಅಲೋನಾ ಹೆಚ್ಚಾಗಿ ನೈಸರ್ಗಿಕ ಉತ್ಪನ್ನ(Natural product)ಗಳನ್ನು ಬಳಸುತ್ತಾರಂತೆ. ದಿನಕ್ಕೆ 2 ಬಾರಿ ಬಾಚಿಕೊಳ್ಳುತ್ತಾಳಂತೆ. ಕೂದಲು ತುಂಬಾ ಉದ್ದವಾಗಿರುವ ಕಾರಣ ವಾರಕ್ಕೊಮ್ಮೆ ಮಾತ್ರ ತೊಳೆಯುತ್ತಾಳಂತೆ. ಏಕೆಂದರೆ ಅವಳ ಕೂದಲನ್ನು ಒಮ್ಮೆ ತೊಳೆಯಲು ಸುಮಾರು 40-60 ನಿಮಿಷಗಳು ಬೇಕಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News