ಬೆಂಗಳೂರು : ಯಾವುದೇ ಸಾಲದ ಮೇಲಿನ ಬಡ್ಡಿ ದರ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗೃಹ ಸಾಲ ಪಡೆಯುವುದಾದರೆ ಅದರ ಮೇಲೆ ವಿಧಿಸುವ ಬಡ್ಡಿ ದರಗಳು ಕೂಡಾ ಕಾಲ ಕಾಲಕ್ಕೆ ಬದಲಾಗುತ್ತಿರುತ್ತದೆ. ನಿಮ್ಮ ಆದಾಯ ಮತ್ತು ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯವು ನಿಮ್ಮ ಸಾಲದ ಅರ್ಹತೆಯನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ಬ್ಯಾಂಕ್‌ಗಳ ಗೃಹ ಸಾಲದ ಬಡ್ಡಿ ದರಗಳು ಕ್ರೆಡಿಟ್ ಸ್ಕೋರ್, ಮೊತ್ತ, ಸಾಲದ ಅವಧಿ ಮತ್ತು ಬಡ್ಡಿಯ ಪ್ರಕಾರವನ್ನು ಅವಲಂಬಿಸಿ ಭಿನ್ನವಾಗಿರುತ್ತವೆ.
ನಿಮ್ಮ ವಯಸ್ಸು, ವಿದ್ಯಾರ್ಹತೆ, ನಿಮ್ಮ ಮೇಲೆ ಅವಲಂಬಿತರಾಗಿರುವವರ ಸಂಖ್ಯೆ, ನಿಮ್ಮ ಸಂಗಾತಿಯ ಆದಾಯ ನಿಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳು, ನಿಮ್ಮ ಸೇವಿಂಗ್ ಹಿಸ್ಟರಿ, ಉದ್ಯೋಗದ ಭದ್ರತೆ ಈ ಎಲ್ಲಾ ಅಂಶಗಳನ್ನು ಸಾಲ ವಿತರಣೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ : ಚಿನ್ನದ ಬೆಲೆ 36 ಸಾವಿರ ರೂ. ಇಳಿಕೆ..! ಸಾರ್ವಕಾಲಿಕ ಕುಸಿತ ಕಂಡ ಬಂಗಾರದ 10 ಗ್ರಾಂ ದರ ಎಷ್ಟಾಗಿದೆ ಗೊತ್ತಾ?
ಬೇರೆ ಬೇರೆ ಬ್ಯಾಂಕ್ ಗಳು ಬೇರೆ ಬೇರೆ ರೀತಿಯಲ್ಲಿ ಗೃಹ ಸಾಲದ ಬಡ್ಡಿ ದರವನ್ನು ನಿಗದಿ ಮಾಡಿರುತ್ತದೆ. ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ. ಹಾಗಿದ್ದರೆ ಯಾವ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದ ಮೇಲೆ ಗೃಹ ಸಾಲ ನೀಡುತ್ತದೆ ನೋಡೋಣ :
ಅಗ್ಗದ ಗೃಹ ಸಾಲದ ಬಡ್ಡಿ ದರಗಳು 2023 :
"EMI" ಎಂದರೆ "ಸಮಾನ ಮಾಸಿಕ ಕಂತು". ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವವರೆಗೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನೀವು ಪಾವತಿಸಬೇಕಾದ ಮೊತ್ತವಾಗಿರುತ್ತದೆ. EMIಯ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಸಾಲದ ಆರಂಭಿಕ ವರ್ಷಗಳಲ್ಲಿ, ಬಡ್ಡಿ ಅಂಶವೇ ಅಸಲಿಗಿಂತ ಹೆಚ್ಚಾಗಿ ಹೋಗುತ್ತದೆ. ಆದರೆ ನಂತರದ ವರ್ಷಗಳಲ್ಲಿ ಸಾಲದ ಅಸಲು ಮೊತ್ತವೇ ಹೆಚ್ಚಾಗಿ ಕಟ್ ಆಗುತ್ತದೆ.
ಹೊಸ ಆಸ್ತಿಯನ್ನು ಖರೀದಿಸುವ ಮೊದಲು ಪರಿಶೀಲಿಸಬೇಕಾದ ಮೂಲ ದಾಖಲೆಗಳು :
ಮಾರಾಟ ಪತ್ರ
ಟೈಟಲ್ ಡೀಡ್
ಅಪ್ರೋವ್ದ್ ಬಿಲ್ಡಿಂಗ್ ಪ್ಲಾನ್ಸ್
ಕಂಪ್ಲಿಶನ್ ಸರ್ಟಿಫಿಕೆಟ್
ಕಮೆನ್ಸ್ ಮೆಂಟ್ ಸರ್ಟಿಫಿಕೆಟ್ (
ಕನ್ವರ್ಷನ್ ಸರ್ಟಿಫಿಕೆಟ್
ಖಾತಾ ಪ್ರಮಾಣಪತ್ರ
ಎನ್ಕಂಬರೆನ್ಸ್ ಪ್ರಮಾಣಪತ್ರ
ಇತ್ತೀಚಿನ ತೆರಿಗೆ ರಶೀದಿಗಳು
ಆಕ್ಯುಪೆನ್ಸಿ ಸರ್ಟಿಫಿಕೇಟ್.
ಇದನ್ನೂ ಓದಿ : Business Concept: ಮನೆಯ ಜಾಗವನ್ನೇ ಬಳಸಿ ಈ ನಾಲ್ಕು ವ್ಯಾಪಾರ ಆರಂಭಿಸಿ ಕೈತುಂಬಾ ಗಳಿಕೆ ಮಾಡಬಹುದು
ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ?
ಹೋಮ್ ಲೋನ್‌ಗಳ ಮೇಲಿನ ಬಡ್ಡಿಯನ್ನು ಸಾಮಾನ್ಯವಾಗಿ ಬ್ಯಾಂಕ್‌ನಿಂದ ಮಾಸಿಕ ಕಡಿತ ಅಥವಾ ವಾರ್ಷಿಕ ಕಡಿತ ಅಥವಾ ದಿನನಿತ್ಯದ ಸಮತೋಲನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಎಸ್‌ಬಿಐ ದಿನನಿತ್ಯದ ಬ್ಯಾಲೆನ್ಸ್‌ಗೆ ಬಡ್ಡಿ ವಿಧಿಸುತ್ತದೆ.
ವಾರ್ಷಿಕ ಕಡಿಮೆಗೊಳಿಸುವ ವಿಧಾನ : ಅಸಲಿನ ಮೇಲೆ ನೀವು ಪಾವತಿಸುವ ಬಡ್ಡಿ ಈ ವಿಧಾನದ ಅಡಿಯಲ್ಲಿ ವರ್ಷದ ಕೊನೆಯಲ್ಲಿ ಕಡಿಮೆಯಾಗುತ್ತದೆ. ನೀವು ಈಗಾಗಲೇ ಬ್ಯಾಂಕ್ ಗೆ ಪಾವತಿಸಿರುವ ಅಸಲು ಮೊತ್ತದ ಮೇಲೆ ಬಡ್ಡಿ ಪಾವತಿಸುತ್ತಿರುತ್ತೀರಿ.
ಮಾಸಿಕ ಕಡಿಮೆಗೊಳಿಸುವ ವಿಧಾನ : ಈ ವ್ಯವಸ್ಥೆಯಲ್ಲಿ, ನೀವು EMI ಪಾವತಿಸುತ್ತಿರುವಂತೆಯೇ ಪ್ರತಿ ತಿಂಗಳು ಕಅಸಲಿನ ಮೊತ್ತ ಕಡಿಮೆಯಾಗುತ್ತಾ ಬರುತ್ತದೆ.
ಇದನ್ನೂ ಓದಿ : RBI MPC Meeting: 16 ದಿನಗಳಲ್ಲಿ 2000 ಮುಖಬೆಲೆಯ ಶೇ. 50 ರಷ್ಟು ನೋಟುಗಳನ್ನು ಬ್ಯಾಂಕಿಂಗ್ ಸಿಸ್ಟಂನಿಂದ ಹಿಂಪಡೆಯಲಾಗಿದೆ
ದೈನಂದಿನ ಕಡಿತ ವಿಧಾನ: ಈ ವಿಧಾನದಲ್ಲಿ, EMI ಅನ್ನು ಪೂರ್ತಿಯಾಗಿ ಪಾವತಿಸಿದ ತಕ್ಷಣ ಬಡ್ಡಿ ಪಾವತಿಸಬೇಕಾದ ಅಸಲು ಕಡಿಮೆಯಾಗುತ್ತದೆ. ಇದರ ಪ್ರಕಾರ ಒಂದು ವರ್ಷವನ್ನು 365 ದಿನ ಎನದೆ ಪರಿಗಣಿಸಲಾಗುತ್ತದೆ. ಅಧಿಕ ವರ್ಷವಾಗಿದ್ದರೂ ವರ್ಷಕ್ಕೆ 365 ದಿನ ಎಂದೇ ಪರಿಗಣಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.