18 ತಿಂಗಳ ಬಾಕಿ ಡಿಎ ಬಗ್ಗೆ ಹೊರ ಬಿತ್ತು ಮಾಹಿತಿ ! ಬಜೆಟ್ ಗೂ ಮುನ್ನ ಸರ್ಕಾರದಿಂದ ಬಂದಿದೆ ಅಪ್ಡೇಟ್

Dearness Allowance Arrear: ಇದೀಗ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಸಿಂಗ್  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. 18 ತಿಂಗಳ ಬಾಕಿ ಇರುವ ಡಿಎ ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

Written by - Ranjitha R K | Last Updated : Jan 26, 2024, 03:51 PM IST
  • 18 ತಿಂಗಳ DA ಮತ್ತು DR ಅನ್ನು ನಿಲ್ಲಿಸಲಾಯಿತು.
  • ಬಾಕಿ ಇರುವ ಡಿಎ ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಮನವಿ
  • ಸರ್ಕಾರಕ್ಕೆ ಬರೆದ ಪತ್ರದಲ್ಲಿ ಏನಿದೆ ?
18 ತಿಂಗಳ ಬಾಕಿ ಡಿಎ ಬಗ್ಗೆ ಹೊರ ಬಿತ್ತು ಮಾಹಿತಿ ! ಬಜೆಟ್ ಗೂ ಮುನ್ನ ಸರ್ಕಾರದಿಂದ  ಬಂದಿದೆ ಅಪ್ಡೇಟ್   title=

Dearness Allowance Arrear : COVID-19 ಸಾಂಕ್ರಾಮಿಕ ಸಮಯದಲ್ಲಿ, ಕೇಂದ್ರ ನೌಕರರು ಮತ್ತು ಪಿಂಚಣಿದಾರರ 18 ತಿಂಗಳ DA  ಮತ್ತು DR ಅನ್ನು ನಿಲ್ಲಿಸಲಾಯಿತು. ಬಾಕಿ ಉಳಿದಿರುವ ಡಿಎ ನೀಡುವಂತೆ ಸರ್ಕಾರಿ ನೌಕರರು ಬಹುದಿನಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಇದೀಗ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಸಿಂಗ್  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. 18 ತಿಂಗಳ ಬಾಕಿ ಇರುವ ಡಿಎ ಬಿಡುಗಡೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

COVID-19 ಸಾಂಕ್ರಾಮಿಕ ಸಮಯದಲ್ಲಿ, ಕೇಂದ್ರ ಸರ್ಕಾರವು ಜನವರಿ 2020 ರಿಂದ ಜೂನ್ 2021 ರವರೆಗೆ ಒಟ್ಟು  18 ತಿಂಗಳವರೆಗಿನ DA ಮತ್ತು DR ಅನ್ನು ತಡೆ ಹಿಡಿದಿತ್ತು.ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ,  ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯ ಮೇಲಾದ ಋಣಾತ್ಮಕ ಪರಿಣಾಮ ಮತ್ತು ಕಲ್ಯಾಣ ಕ್ರಮಗಳ ಮೇಲೆ ಭಾರಿ ವೆಚ್ಚದ ಕಾರಣ  ತುಟ್ಟಿಭತ್ಯೆ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದಿದ್ದರು. 

ಇದನ್ನೂ ಓದಿ : ನಿಮ್ಮ PF ಕೊಡುಗೆಯನ್ನು 12% ಕ್ಕಿಂತ ಹೆಚ್ಚಿಸುವುದು ಹೇಗೆ? ಇಲ್ಲಿವೆ ಸಂಪೂರ್ಣ ವಿವರ

ಸರ್ಕಾರಕ್ಕೆ ಬರೆದ ಪತ್ರದಲ್ಲಿ ಏನಿದೆ ? : 
ಕೋವಿಡ್ -19 ಸಾಂಕ್ರಾಮಿಕವು ಸೃಷ್ಟಿಸಿದ ಸವಾಲುಗಳು ಮತ್ತು ಅದು ಬೀರಿದ ಆರ್ಥಿಕ ಪರಿಣಾಮವನ್ನು ನಾವು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. 2020ರ ಆರ್ಥಿಕ ವರ್ಷಕ್ಕೆ ಡಿಎ ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್)ನ ಮೂರು ಕಂತುಗಳನ್ನು ನಿಲ್ಲಿಸಲಾಗಿದೆ. ಆದರೆ, ಸಾಂಕ್ರಾಮಿಕ ರೋಗದ ಪ್ರಭಾವದಿಂದ ದೇಶ ಈಗ ಚೇತರಿಸಿಕೊಳ್ಳುತ್ತಿದ್ದು, ದೇಶದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತಿದೆ. ಸಾಂಕ್ರಾಮಿಕ ರೋಗದಂತಹ ಸವಾಲಿನ ಸಮಯದಲ್ಲಿ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರು ನೀಡಿದ ಕೊಡುಗೆ ಅಪಾರವಾದುದು ಎಂದು ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಮುಖೇಶ್ ಸಿಂಗ್  ಸರ್ಕಾರದ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

ತಡೆ ಹಿಡಿದಿದ್ದ ಮೂರು ಕಂತುಗಳನ್ನು ಬಿಡುಗಡೆ ಮಾಡಲು ಮನವಿ:
ಆರ್ಥಿಕ ಸ್ಥಿತಿಯ ಸುಧಾರಣೆ ಮತ್ತು ಸರ್ಕಾರಿ ನೌಕರರ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಬಜೆಟ್‌ನಲ್ಲಿ ಮೂರು ಕಂತುಗಳ ತುಟ್ಟಿ ಭತ್ಯೆ (ಡಿಎ) ಬಿಡುಗಡೆ ಮಾಡುವ ನಿರ್ಧಾರವನ್ನು ಪರಿಶೀಲಿಸುವಂತೆ ಸರ್ಕಾರವನ್ನು ವಿನಂತಿಸಲಾಗಿದೆ.   ತಡೆಹಿಡಿಯಲಾದ ಡಿಎಯ ಬಾಕಿ ಕಂತುಗಳನ್ನು ಬಿಡುಗಡೆ ಮಾಡುವುದರಿಂದ ಸರ್ಕಾರಿ ನೌಕರರು ಮತ್ತು ನಿವೃತ್ತರ ಕಲ್ಯಾಣಕ್ಕೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : February 2024 Bank Holidays: ಫೆಬ್ರವರಿಯಲ್ಲಿ ಇಷ್ಟು ದಿನ ಬ್ಯಾಂಕ್‌ಗಳಿಗೆ ರಜೆ

ತುಟ್ಟಿ ಭತ್ಯೆ ಎಂದರೇನು? : 
ತುಟ್ಟಿಭತ್ಯೆ (ಡಿಎ) ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನದ ಒಂದು ಭಾಗವಾಗಿದೆ. ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಏರುತ್ತಿರುವ ಹಣದುಬ್ಬರವನ್ನು ಎದುರಿಸಲು, ಸರ್ಕಾರಿ ನೌಕರರ ವೇತನವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಎರಡು ಬಾರಿ ಡಿಎ ಬದಲಾಯಿಸುತ್ತದೆ. ಕಳೆದ ಬಾರಿ ಕೇಂದ್ರ ಸರ್ಕಾರ ನೌಕರರ ಡಿಎ ಮತ್ತು ಡಿಆರ್ ಅನ್ನು ಶೇ.42ರಿಂದ ಶೇ.46ಕ್ಕೆ ಹೆಚ್ಚಿಸಿತ್ತು. ಅಕ್ಟೋಬರ್‌ನಲ್ಲಿ ಮಾಡಿದ ಘೋಷಣೆಯನ್ನು ಜುಲೈ 1, 2023 ರಿಂದ ಜಾರಿಗೊಳಿಸಲಾಗಿದೆ. ಸರ್ಕಾರದ ಈ ಕ್ರಮದಿಂದ 48.67 ಲಕ್ಷ ಕೇಂದ್ರ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆದಿದ್ದಾರೆ. ಮುಂದಿನ ಡಿಎ ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಿಸಿದ ಪ್ರಕಟಣೆಯು ಮಾರ್ಚ್ 2024 ರಲ್ಲಿ ಹೊರ ಬೀಳುವ ಸಾಧ್ಯತೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News