EPF ಮೇಲಿನ ಬಡ್ಡಿಯಲ್ಲಿ ಇಳಿಕೆ : 6 ಕೋಟಿ ಗ್ರಾಹಕರಿಗೆ ಆಘಾತ

2020-21ನೇ ಸಾಲಿನ  ನೌಕರರ ಭವಿಷ್ಯ ನಿಧಿ-ಇಪಿಎಫ್‌ನ ಬಡ್ಡಿ ಮತ್ತೆ ಕಡಿಮೆಯಾಗಲಿದೆ. ಈ ಬಗ್ಗೆ ಮಾರ್ಚ್ 4ಕ್ಕೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. 

Written by - Ranjitha R K | Last Updated : Feb 16, 2021, 05:09 PM IST
  • ಇಪಿಎಫ್ ಮೇಲಿನ ಬಡ್ಡಿದರದಲ್ಲಿ ಇಳಿಕೆ
  • ಮಾರ್ಚ್ 4 ರ ಸಭೆಯಲ್ಲಿ ಹೊರ ಬೀಳಲಿದೆ ಸ್ಪಷ್ಟ ನಿರ್ಧಾರ
  • ಇಪಿಎಫ್ ದೇಶಾದ್ಯಂತ 6 ಕೋಟಿ ಗ್ರಾಹಕರನ್ನು ಹೊಂದಿದೆ
EPF ಮೇಲಿನ ಬಡ್ಡಿಯಲ್ಲಿ ಇಳಿಕೆ : 6 ಕೋಟಿ ಗ್ರಾಹಕರಿಗೆ ಆಘಾತ title=
ಇಪಿಎಫ್ ಮೇಲಿನ ಬಡ್ಡಿದರದಲ್ಲಿ ಇಳಿಕೆ (file photo)

ನವದೆಹಲಿ : 2020-21ನೇ ಸಾಲಿನ  ನೌಕರರ ಭವಿಷ್ಯ ನಿಧಿ-ಇಪಿಎಫ್‌ನ (EPF)ಬಡ್ಡಿ ಮತ್ತೆ ಕಡಿಮೆಯಾಗಲಿದೆ. ಈ ಬಗ್ಗೆ ಮಾರ್ಚ್ 4ಕ್ಕೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಒಂದು ವೇಳೆ ಇಪಿಎಫ್ ನ ಬಡ್ಡಿ ಕಡಿತಗೊಳಿಸಿದರೆ, ವೇತನ ಪಡೆಯುವ ವರ್ಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ. ಕಳೆದ ವರ್ಷದವರೆಗೂ ಬಡ್ಡಿ (Interest) ಸಿಗುತ್ತಿಲ್ಲ ಎಂಬ ಆತಂಕದಲ್ಲಿದ್ದ ಇಪಿಎಫ್ ಚಂದಾದಾರರು, ಈಗ ಮತ್ತೊಂದು ಆಘಾತ ಎದುರಿಸುವಂತಾಗಿದೆ.  

ಕಡಿಮೆಯಾಗಲಿದೆ ಇಪಿಎಫ್ ಮೇಲಿನ ಬಡ್ಡಿ :
ಲಭ್ಯ ಮಾಹಿತಿಯ ಪ್ರಕಾರ, ಕರೋನಾ (Coronavirus) ಬಿಕ್ಕಟ್ಟಿನ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಚಂದಾದಾರರು,  ಇಪಿಎಫ್ (EPF)ಹಿಂಪಡೆದಿದ್ದಾರೆ.  ಈ ಸಮಯದಲ್ಲಿ ಇಪಿಎಫ್ ಖಾತೆಗೆ ಹಾಕಲಾಗಿದ್ದಹಣವೂ ಕಡಿಮೆಯಾಗಿತ್ತು. ಇದರಿಂದಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಬಡ್ಡಿದರಗಳನ್ನು ಕಡಿತಗೊಳಿಸಲು ನಿರ್ಧರಿಸಬಹುದು. ಇಪಿಎಫ್‌ಒ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (CBT) ಮಾರ್ಚ್ 4 ರಂದು ಸಭೆ ಸೇರಿ ಹೊಸ ದರಗಳನ್ನು ನಿರ್ಧರಿಸಲಿದೆ. 

ಇದನ್ನೂ ಓದಿ : NPSನಲ್ಲಿ ಹೂಡಿಕೆ ಮಾಡುವವರಿಗೆ ಗುಡ್ ನ್ಯೂಸ್ ..! ಆನ್ ಲೈನ್ ನಲ್ಲಿಯೇ ನಡೆಯಲಿದೆ ಸಂಪೂರ್ಣ ಪ್ರಕ್ರಿಯೆ

ಮಾರ್ಚ್ 4 ರಂದು ಬಡ್ಡಿದರಗಳ ಬಗ್ಗೆ ನಿರ್ಧಾರ : 
2020 ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಗಳಿಕೆಯ ಮೇಲೆ ಪರಿಣಾಮ ಬೀರಿದೆ.  ಮಾರ್ಚ್ 4 ರಂದು ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಸಭೆ ಬಗ್ಗೆ ಇಪಿಎಫ್‌ಒ ಟ್ರಸ್ಟಿ ಕೆ.ಇ.ರಘುನಾಥನ್ ಅವರು ಮಾಹಿತಿ ನೀಡಿದ್ದಾರೆ. ಆದರೆ ಇಪಿಎಫ್ ಮೇಲಿನ ಬಡ್ಡಿ (Interest) ಕಡಿತಗೊಳಿಸುವ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. 

7 ವರ್ಷಗಳಲ್ಲಿ ಇಪಿಎಫ್ ಮೇಲೆ ಕಡಿಮೆ ಬಡ್ಡಿ:
2020 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಮೇಲೆ 8.5% ನಷ್ಟು ಬಡ್ಡಿಯನ್ನು ನೀಡಲಾಗಿತ್ತು. 7 ವರ್ಷಗಳಲ್ಲಿ ನೀಡಿದ ಕಡಿಮೆ ಬಡ್ಡಿ ಇದಾಗಿದೆ. ಈ ಮೊದಲು 2013 ರ ಹಣಕಾಸು ವರ್ಷದಲ್ಲಿ ಇಪಿಎಫ್ ಮೇಲಿನ ಬಡ್ಡಿದರಗಳು 8.5% ಆಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಇಪಿಎಫ್‌ಒಬಡ್ಡಿಯನ್ನು ರಿವೈಸ್ ಮಾಡಲಾಗಿತ್ತು. ಈ ಮೊದಲು, 2019 ರ ಹಣಕಾಸು ವರ್ಷದಲ್ಲಿ, 8.65% 2018 8.55%, ಮತ್ತು  2016 ರಲ್ಲಿ 8.8% ಬಡ್ಡಿ ನೀಡಲಾಗಿತ್ತು. ಇದಕ್ಕೂ ಮೊದಲು 2014 ರ ಹಣಕಾಸು ವರ್ಷದಲ್ಲಿ ಇಪಿಎಫ್ ಮೇಲಿನ ಬಡ್ಡಿ ಶೇ 8.75 ರಷ್ಟಿತ್ತು.

ಇದನ್ನೂ ಓದಿ : ಒಂದು ಕಾರಿನ FASTag ಅನ್ನು ಇನ್ನೊಂದು ಕಾರಿನಲ್ಲಿ ಹಾಕಬಹುದೇ?

ಇಪಿಎಫ್ ದೇಶಾದ್ಯಂತ 6 ಕೋಟಿ ಗ್ರಾಹಕರನ್ನು ಹೊಂದಿದೆ.  2020 ರ ಹಣಕಾಸು ವರ್ಷದಲ್ಲಿ ಕೆವೈಸಿಯಲ್ಲಿನ (KYC)ಅವ್ಯವಸ್ಥೆಯಿಂದಾಗಿ  ಕೋಟ್ಯಂತರ ಜನರಿಗೆ  ಬಡ್ಡಿ ಸಿಗುವುದು ತಡವಾಗಿತ್ತು.  ಈಗ ಬಡ್ಡಿದರಗಳನ್ನು ಕಡಿತಗೊಳಿಸಿದರೆ  ಈ ವರ್ಗಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News