ಬೆಂಗಳೂರು: ನನಗೆ ಸರ್ವಿಸ್ ಕೊಡುತ್ತೀರಾ, ದಿನಕ್ಕೆ 50 ಸಾವಿರ ಕೊಡುತ್ತೇನೆ ಎಂದು ಮಹಿಳೆಯ ಫ್ಲಾಟ್ ಡೋರ್ ಮುಂದೆ ಪತ್ರ ಬರೆದಿಟ್ಟು ಕಾಲಿಂಗ್ ಬೆಲ್ ಬಾತಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಅಪಾರ್ಟ್‍ಮೆಂಟ್‍ಯೊಂದರಲ್ಲಿ ವಾಸವಿರುವ ಮಹಿಳೆಗೆ ಆಸಾಮಿಯೊಬ್ಬ ಫ್ಲಾಟ್‍ನ ಡೋರ್‌ನಲ್ಲಿ ಲೇಟರ್ ಇಟ್ಟು ಕಾಲಿಂಗ್ ಬೆಲ್ ಬಾರಿಸಿದ್ದಾನೆ.
ಇದನ್ನೂ ಓದಿ : ಸ್ನಾನದ ಬಳಿಕ ಟವಲ್ ಸುತ್ತಿಕೊಳ್ಳುವ ಅಭ್ಯಾಸ ನಿಮಗೂ ಇದೆಯಾ ? ಈ ರೋಗಗಳ ಅಪಾಯ ತಪ್ಪಿದ್ದಲ್ಲ
ಮಹಿಳೆ ಹೊರ ಬಂದು ಯಾರೆಂದು ನೋಡಿದಾಗ ಸಿಕ್ಕಿದೆ. ಪತ್ರದಲ್ಲಿ ನನಗೆ ಸರ್ವಿಸ್ ಕೊಡುತ್ತೀರಾ,ಹಾಗಾದ್ರೆ ಬೇಸ್ಮೆಂಟ್‍ಗೆ ಬನ್ನಿ. ಒಂದು ದಿನಕ್ಕೆ 50 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಅಸಭ್ಯವಾಗಿ ಬರೆದಿಟ್ಟು ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಅಪರಿಚಿತ. ಇನ್ನೂ ಪತ್ರವನ್ನು ಮಹಿಳೆ ಕೂಡಲೇ ಅಪಾರ್ಟ್‍ಮೆಂಟ್‍ನ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬಳಿಕ ಈ ಬಗ್ಗೆ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಸದ್ಯ ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಮಹಿಳೆ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಅಪಾರ್ಟ್‍ಮೆಂಟ್‍ನಲ್ಲಿರುವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದೆನೇ ಇರ್ಲಿ ಅಪರಿಚಿತನೊಬ್ಬ ಈ ರೀತಿ ಪತ್ರದ ಮುಖೇನ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಸ್ಥಳೀಯರು ಭಯಭೀತಗೊಂಡಿದ್ದಾರೆ.
ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ತಗ್ಗಿದ ಟ್ರಾಫಿಕ್: ಸಂಚಾರ ಪೊಲೀಸರಿಗೆ ಹರಿದು ಬಂತು ಧನ್ಯವಾದಗಳ ಮಹಾಪೂರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.