ಬಾಲಿವುಡ್‍ನ ಈ ಸ್ಟಾರ್ ನಟನ ಮೇಲೆ ಕಾಜೋಲ್‍ಗೆ ಕ್ರಶ್ ಆಗಿತ್ತು: ಕರಣ್ ಜೋಹರ್

ನಟ-ಪತಿ ಅಜಯ್ ದೇವಗನ್ ಹೊರತುಪಡಿಸಿ ನಟಿ ಕಾಜೋಲ್ ಅವರಿಗೆ ಬೇರೆ ಯಾವ ನಟರ ಮೇಲಾದರೂ ಕ್ರಶ್ ಆಗಿತ್ತಾ ಅಂತಾ ಡ್ಯಾನ್ಸ್ ಕಾರ್ಯಕ್ರಮದ ಹೋಸ್ಟ್ ಮನೀಶ್ ಪೌಲ್‍ ಅವರು ಕರಣ್ ಜೋಹರ್ಗೆ ಕೇಳಿದ್ದಾರೆ​.

Written by - Puttaraj K Alur | Last Updated : Nov 19, 2022, 11:55 AM IST
  • ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೇಲೆ ಕಾಜೋಲ್‍ಗೆ ಕ್ರಶ್ ಆಗಿತ್ತಂತೆ
  • ಪ್ರಸಿದ್ಧ ಡ್ಯಾನ್ಸ್ ಶೋ ‘Jhalak Dikhhlaa Jaa 10’ನಲ್ಲಿ ಬಹಿರಂಗಪಡಿಸಿದ ಕರಣ್ ಜೋಹರ್
  • ಅಜಯ್ ದೇವಗನ್‍ಗೂ ಮೊದಲು ಬಾಲಿವುಡ್ ಕಿಲಾಡಿ ಮೇಲೆ ಕಾಜೋಲ್‍ಗೆ ಕ್ರಶ್
ಬಾಲಿವುಡ್‍ನ ಈ ಸ್ಟಾರ್ ನಟನ ಮೇಲೆ ಕಾಜೋಲ್‍ಗೆ ಕ್ರಶ್ ಆಗಿತ್ತು: ಕರಣ್ ಜೋಹರ್ title=
ನಟಿ ಕಾಜೋಲ್ ಕ್ರಶ್ ಯಾರು ಗೊತ್ತಾ?

ನವದೆಹಲಿ: ಬಾಲಿವುಡ್‍ನ ಸ್ಟಾರ್ ನಟ, ಕಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್ ಮೇಲೆ ನಟಿ ಕಾಜೋಲ್‍ಗೆ ಕ್ರಶ್ ಆಗಿತ್ತು ಅಂತಾ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಹೇಳಿದ್ದಾರೆ. ಪ್ರಸಿದ್ಧ ಡ್ಯಾನ್ಸ್ ಶೋ ‘Jhalak Dikhhlaa Jaa 10’ ಸಂಚಿಕೆಯಲ್ಲಿ ಈ ವಿಷಯವನ್ನು ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಮೇಲೆ ನಟಿ ಕಾಜೋಲ್ ಮೋಹ ಹೊಂದಿದ್ದರು ಎಂದು ಅವರು ಹೇಳಿದ್ದಾರೆ.

ಡ್ಯಾನ್ಸ್ ಶೋ ಪ್ರೋಮೋದಲ್ಲಿಯೇ ಈ ವಿಷಯವನ್ನು ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ನಟ-ಪತಿ ಅಜಯ್ ದೇವಗನ್ ಹೊರತುಪಡಿಸಿ ನಟಿ ಕಾಜೋಲ್ ಅವರಿಗೆ ಬೇರೆ ಯಾವ ನಟರ ಮೇಲಾದರೂ ಕ್ರಶ್ ಆಗಿತ್ತಾ ಅಂತಾ ಡ್ಯಾನ್ಸ್ ಕಾರ್ಯಕ್ರಮದ ಹೋಸ್ಟ್ ಮನೀಶ್ ಪೌಲ್‍ ಅವರು ಕೇಳುತ್ತಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಕಾರ್ಯಕ್ರಮದ ತೀರ್ಪುಗಾರರೂ ಆಗಿರುವ ನಿರ್ಮಾಪಕ ಕರಣ್ ಜೋಹರ್, ‘ಅಕ್ಷಯ್ ಕುಮಾರ್ ಮೇಲೆ ಕಾಜೋಲ್‍ಗೆ ದೊಡ್ಡ ಮಟ್ಟದ ಕ್ರಶ್ ಇತ್ತು’ ಅಂತಾ ಹೇಳಿದ್ದಾರೆ. ಈ ವೇಳೆ ಮನೀಶ್ ಅವರು ಖುಷಿಯಿಂದ ‘ಸಿಂಗಮ್’ ಹುಕ್ ಸ್ಟೆಪ್ ಹಾಕಿದರು.

 
 
 
 

 
 
 
 
 
 
 
 
 
 
 

A post shared by ColorsTV (@colorstv)

ಇದನ್ನೂ ಓದಿ: ಕನ್ನಡ ಸಿನಿರಂಗಕ್ಕೆ ಯಂಗ್‌ ಟೈಗರ್‌ ಎಂಟ್ರಿ : ಪ್ರಶಾಂತ್‌ ನೀಲ್‌ NTR31ನಲ್ಲಿ ಬಾದ್ ಶಾ..! 

‘ನಿಮ್ಮ ಕ್ರಶ್ ಯಾರು ಅಂತಾ ಅಜಯ್ ದೇವಗನ್ ಸರ್‍ಗೆ ಗೊತ್ತಾಗಬೇಕಾ..?’ ಅಂತಾ ಮನೀಶ್ ಅವರು ನಟಿ ಕಾಜೋಲ್‍ಗೆ ಕೇಳುತ್ತಾರೆ. ಇದರಿಂದ ಕಾಜೋಲ್ ನಗೆಗಡಲಲ್ಲಿ ತೇಲಿದರು.

ಬಾಲಿವುಡ್‌ನ ಪವರ್ ಕಪಲ್ ಎಂದೇ ಖ್ಯಾತಿಯಾಗಿರುವ ಕಾಜೋಲ್ ಮತ್ತು ಅಜಯ್ ದೇವಗನ್ ಮದುವೆಯಾಗಿ ಸುಮಾರು 2 ದಶಕಗಳು ಕಳೆದಿವೆ. ಈ ಜೋಡಿಯ ಪ್ರೇಮಕಥೆಯು ಯಾವುದೇ ಕಾಲ್ಪನಿಕ ಕಥೆಗಿಂತಲೂ ಕಡಿಮೆಯಿಲ್ಲ. ನಟಿ ಕಾಜೋಲ್ ತನ್ನ ಮುಂಬರುವ ಚಿತ್ರ ‘ಸಲಾಮ್ ವೆಂಕಿ’ ಪ್ರಚಾರಕ್ಕಾಗಿ ‘Jhalak Dikhhlaa Jaa 10’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಧರ್ಮ ಪ್ರೊಡಕ್ಷನ್ಸ್‌ನ ಮುಖ್ಯಸ್ಥ ಹೊಂಚೋ ಮತ್ತು ಚಿತ್ರ ನಿರ್ಮಾಪಕ ಕೆಜೋ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: What An Idea.! ಸ್ಮಾರ್ಟ್‌ಫೋನ್ ಹೀಗೂ ಬಳಸಬಹುದೆಂದು ತೋರಿಸಿ ಕೊಟ್ಟ ಉರ್ಫಿ

ನಟಿ ಕಾಜೋಲ್ ಮತ್ತು ಅಕ್ಷಯ್ ಕುಮಾರ್ 90ರ ದಶಕದಿಂದಲೂ ಅತ್ಯಂತ ಜನಪ್ರಿಯ ಜೋಡಿಯಾಗಿದೆ. 1994ರಲ್ಲಿ ಬಿಡುಗಡೆಯಾದ ‘ಯೇ ದಿಲ್ಲಗಿ’ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News