Kiccha Sudeep: ಸುದೀಪ್ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ

EC refuses to ban Sudeep films: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಕನ್ನಡ ನಟ ಕಿಚ್ಚ ಸುದೀಪ್ ಹೇಳಿದ ಕೆಲ ದಿನಗಳ ನಂತರ ಚುನಾವಣಾ ಆಯೋಗ ಈ ಘೋಷಣೆ ಮಾಡಿದೆ.

Written by - Chetana Devarmani | Last Updated : Apr 10, 2023, 12:11 PM IST
  • ಕರ್ನಾಟಕ ವಿಧಾನಸಭೆ ಚುನಾವಣೆ 2023
  • ಸುದೀಪ್ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ಅನುಮತಿ
  • ಚುನಾವಣಾ ಆಯೋಗದಿಂದ ಸಿಕ್ತು ಗ್ರೀನ್‌ ಸಿಗ್ನಲ್‌
Kiccha Sudeep: ಸುದೀಪ್ ಸಿನಿಮಾ, ಜಾಹೀರಾತುಗಳ ಪ್ರದರ್ಶನಕ್ಕೆ ಚುನಾವಣಾ ಆಯೋಗ ಅನುಮತಿ  title=
Kiccha Sudeep

ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪರ ಪ್ರಚಾರ ಮಾಡುತ್ತಿರುವ ಕನ್ನಡ ನಟ ಸುದೀಪ್ ಅವರಿರುವ ಸಿನಿಮಾ, ಟಿವಿ ಶೋಗಳು, ಜಾಹೀರಾತುಗಳ ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. ಚುನಾವಣೆಗೆ ಸ್ಪರ್ಧಿಸುವ ಅಥವಾ ಸಾರ್ವಜನಿಕ ಹಣದಿಂದ ದೂರದರ್ಶನದಲ್ಲಿ ಪ್ರಚಾರ ಮಾಡುವ ನಟರನ್ನು ಮಾತ್ರ ವಾಣಿಜ್ಯ ಪ್ರದರ್ಶನದಿಂದ ನಿರ್ಬಂಧಿಸಬಹುದು ಎಂದು ಇಸಿಐ ಹೇಳಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮಾಡುವುದಾಗಿ ಏಪ್ರಿಲ್ 5ರ ಬುಧವಾರದಂದು ಸುದೀಪ್ ಘೋಷಿಸಿದ್ದಾರೆ. ಚುನಾವಣೆಗಳು ಮುಗಿಯುವವರೆಗೆ ಸುದೀಪ್ ಅವರನ್ನು ಒಳಗೊಂಡ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಜಾಹೀರಾತುಗಳ ಪ್ರದರ್ಶನ ಮತ್ತು ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾದ ನಂತರ ECI ಪ್ರಕಟಣೆ ಹೊರಬಿದ್ದಿದೆ. ಜೆಡಿಎಸ್ ರಾಷ್ಟ್ರೀಯ ವಕ್ತಾರ ತನ್ವೀರ್ ಅಹಮದ್ ಅವರು ನಿರ್ದಿಷ್ಟ ಪಕ್ಷಕ್ಕೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿಯನ್ನು ದೊಡ್ಡ ಪರದೆಯಲ್ಲಿ ಅಥವಾ ಯಾವುದೇ ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿ ತೋರಿಸಬಾರದು ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ತಮ್ಮ ಬೆಂಬಲು ನೀಡುವ ಇಂಗಿತವನ್ನು ಘೋಷಿಸಿದ ಹಿನ್ನೆಲೆಯಲ್ಲಿ ಅವರ ಅಭಿನಯದ ಜಾಹೀರಾತು, ಸಿನಿಮಾ, ಟಿವಿ ಶೋ ಪ್ರದರ್ಶನವನ್ನು ನಿರ್ಬಂಧಿಸುವಂತೆ ಕೋರಿ ಕರ್ನಾಟಕದ ಜನತಾ ದಳ ಪಕ್ಷವು ಕರ್ನಾಟಕದಲ್ಲಿ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದೆ. 2023 ರ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ಸುದೀಪ್‌ ಆಗಿದ್ದಾರೆ. ಮುಂಬರುವ ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದು ಮತದಾರರ ಮೇಲೆ ಪ್ರಭಾವ ಬೀರಬಹುದು ಎಂದು ಪಕ್ಷ ಹೇಳಿದ್ದರು. 

ಇದನ್ನೂ ಓದಿ : Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್‌

ಸ್ಯಾಂಡಲ್‌ವುಡ್ ಸ್ಟಾರ್ 'ಕಿಚ್ಚ' ಸುದೀಪ್ ಅವರು ಆಡಳಿತಾರೂಢ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಕುರಿತು ಜೆಡಿಎಸ್‌ನ ಬೇಡಿಕೆಯಂತೆ ಅವರ ಚಲನಚಿತ್ರ ಮತ್ತು ದೂರದರ್ಶನ ಪ್ರದರ್ಶನಗಳಲ್ಲಿ ಹಸ್ತಕ್ಷೇಪ ಮಾಡಲು ಕರ್ನಾಟಕದ ಚುನಾವಣಾ ಅಧಿಕಾರಿಗಳು ನಿರಾಕರಿಸಿದ್ದಾರೆ. ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಅಂತಹ ಯಾವುದೇ ಪ್ರಸಾರವನ್ನು ನಿಷೇಧಿಸುವ ಕಾನೂನು ಇಲ್ಲ ಎಂದು ಹೇಳಿದ್ದಾರೆ.

ಮೇ 10 ರ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರು ಗುರುತಿಸಿರುವ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಕನ್ನಡದ ಸೂಪರ್ ಸ್ಟಾರ್ ಏಪ್ರಿಲ್ 5 ರಂದು ಘೋಷಿಸಿದರು. ಸುದೀಪ್ ತಮ್ಮ ಬೆಂಬಲ ಸಿಎಂ ಬೊಮ್ಮಾಯಿಗೆ ಮಾತ್ರವೇ ಹೊರತು ಬಿಜೆಪಿಗೆ ಅಲ್ಲ ಎಂದು ಒತ್ತಿ ಹೇಳಿದ್ದಾರೆ. ನಟ ಬೊಮ್ಮಾಯಿ ಅವರೊಂದಿಗೆ ವೈಯಕ್ತಿಕ ಸಂಪರ್ಕವಿದೆ ಮತ್ತು ಅವರ ಬೆಂಬಲದೊಂದಿಗೆ ಸಿಎಂ ಮತ್ತು ಇತರರ ಬೆಂಬಲಕ್ಕೆ ನಿಂತಿದ್ದೇನೆ ಎಂದು ಹೇಳಿದ್ದರು. 

ನಟ, ನಿರ್ದೇಶಕ ಮತ್ತು ನಿರ್ಮಾಪಕ ಸುದೀಪ್, ಶಿವಮೊಗ್ಗ ಜಿಲ್ಲೆಯಿಂದ ಬಂದವರು ಮತ್ತು ಕನ್ನಡ ಚಲನಚಿತ್ರೋದ್ಯಮದ ಅಗ್ರ ಐದು ತಾರೆಗಳಲ್ಲಿ ಒಬ್ಬರಾಗಿ ತಮ್ಮ ಸ್ಥಾನಮಾನ ಪಡೆದಿರುವ ಕಾರಣದಿಂದಾಗಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು 1997 ರಲ್ಲಿ ತಾಯವ್ವ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಅವರ ಮೊದಲ ಹಿಟ್ ಚಲನಚಿತ್ರ 2001 ರಲ್ಲಿ ಬಿಡಿಗಡೆಯಾದ ಹುಚ್ಚ, ಇದು ತಮಿಳಿನ ಬ್ಲಾಕ್ಬಸ್ಟರ್ ಸೇತುವಿನ ರಿಮೇಕ್ ಆಗಿದೆ.  

ಇದನ್ನೂ ಓದಿ : ಪುಷ್ಪ 2 ಟೀಸರ್‌ನಲ್ಲಿ ಇದನ್ನು ಗಮನಿಸಿದ್ದೀರಾ? ಅತಿದೊಡ್ಡ Clue ಬಿಟ್ಟು ಕೊಟ್ಟ ಡೈರೆಕ್ಟರ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News