Jo Lindner: ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಬಾಡಿಬಿಲ್ಡರ್ ಅನುಮಾನಾಸ್ಪದ ಸಾವು!

Body builder Jo Lindner Death: ಜರ್ಮನ್ ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗಿದ್ದ ಖ್ಯಾತ ಬಾಡಿ ಬಿಲ್ಡರ್ ಜೋ ಲಿಂಡ್ನರ್​ ಸಾವಿನ ಸುದ್ದಿಯನ್ನು ಅವರ ಪ್ರೇಯಸಿ ನಿಚಾ(Nicha)ತಿಳಿಸಿದ್ದಾರೆ.

Written by - Puttaraj K Alur | Last Updated : Jul 2, 2023, 06:16 PM IST
  • ಖ್ಯಾತ ಬಾಡಿ ಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ
  • ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದಲ್ಲಿ ನಟಿಸಿದ್ದದ್ದ ಜೋ ಲಿಂಡ್ನರ್
  • ಆಕರ್ಷಕ ಮೈಕಟ್ಟು ಹೊಂದಿದ್ದ ಜೋ ಲಿಂಡ್ನರ್ 30ನೇ ವಯಸ್ಸಿನಲ್ಲಿ ಹಠಾತ್ ನಿಧನ
Jo Lindner: ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಬಾಡಿಬಿಲ್ಡರ್ ಅನುಮಾನಾಸ್ಪದ ಸಾವು! title=
ಜೋ ಲಿಂಡ್ನರ್ ಅನುಮಾನಾಸ್ಪದ ಸಾವು!

ಬೆಂಗಳೂರು: ಆಕ್ಷನ್‌ ಫ್ರಿನ್ಸ್‌ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಬಾಡಿ ಬಿಲ್ಡರ್ ಜೋ ಲಿಂಡ್ನರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಬಾಡಿ ಬಿಲ್ಡಿಂಗ್‍ನಲ್ಲಿ ದೊಡ್ಡ ಹೆಸರು ಗಳಿಸಿದ್ದ ಜೋ ಲಿಂಡ್ನರ್ ಕೇವಲ 30ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.

ಆಕರ್ಷಕ ಮೈಕಟ್ಟು ಹೊಂದಿದ್ದ ಜೋ ಲಿಂಡ್ನರ್ ಹಠಾತ್ ನಿಧನರಾಗಿರುವುದು ಹವಲು ಅನುಮಾನ ಮೂಡಿಸಿದೆ. ಇತ್ತೀಚೆಗಷ್ಟೇ ಅವರ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು. ರಕ್ತನಾಳದ ಸಮಸ್ಯೆಯಿಂದ ಅವರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪವನ್‌ ಕುಮಾರ್‌ 'ಧೂಮಂ' ಒಟಿಟಿ ರಿಲೀಸ್‌ಗೆ ರೆಡಿ..! ಯಾವಾಗ, ಎಲ್ಲಿ..? ಇಲ್ಲಿದೆ ಮಾಹಿತಿ 

ಜರ್ಮನ್ ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗಿದ್ದ ಜೋ ಲಿಂಡ್ನರ್​ ಸಾವಿನ ಸುದ್ದಿಯನ್ನು ಅವರ ಪ್ರೇಯಸಿ ನಿಚಾ(Nicha)ತಿಳಿಸಿದ್ದಾರೆ. ‘ಪೊಗರು’ ಸಿನಿಮಾದಲ್ಲಿ ನಟಿಸಿದ್ದ ಜೋ ಲಿಂಡ್ನರ್​ ನಟ ಧ್ರುವ ಸರ್ಜಾ ಜೊತೆಗೆ ಫೈಟ್​ ಮಾಡಿದ್ದರು. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಕಾಣಿಸಿಕೊಂಡು ರೋಮಾಂಚನಕಾರಿ ಫೈಟ್ ಮಾಡಿದ್ದ ಜೋ ಲಿಂಡ್ನರ್​ ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದಾರೆ. ಜೋ ಲಿಂಡ್ನರ್ ಸಾವಿನ ಸುದ್ದಿ ಕೇಳಿ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಶಾಕ್ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಸಂತಾಪ ಸೂಚಿಸಿದ್ದಾರೆ. 

ಅಪಾರ ಜನಪ್ರಿಯತೆ ಹೊಂದಿದ್ದ ಜೋ ಲಿಂಡ್ನರ್​ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ 87 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದರು. ‘ಜೋಎಸ್ತೆಟಿಕ್​’ ಎಂಬ ಹೆಸರಿನಿಂದ ಫೇಮಸ್​ ಆಗಿದ್ದ ಅವರು ಫಿಟ್ನೆಸ್​ ಬಗ್ಗೆ ಟಿಪ್ಸ್​ ನೀಡುತ್ತಿದ್ದರು. ಯುಟ್ಯೂಬ್‍ನಲ್ಲಿ 9 ಲಕ್ಷ 52 ಸಾವಿರ subscribers ಹೊಂದಿದ್ದರು. ಅವರ ಫಿಟ್ನೇಸ್ ವಿಡಿಯೋಗಳು 500 ಮಿಲಿಯನ್ ವೀಕ್ಷಣೆ ಕಂಡಿವೆ.  

ಇದನ್ನೂ ಓದಿ: ‘ಟೋಬಿ’ಯಾಗಿ ಬಂದ ರಾಜ್ ಬಿ… ರಕ್ತಸಿಕ್ತ ಫಸ್ಟ್ ಲುಕ್’ನಲ್ಲೇ ಹವಾ ಸೃಷ್ಟಿ: ದುಪ್ಪಟ್ಟಾಯ್ತು ನಿರೀಕ್ಷೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News