ಹುಚ್ಚ 2 ಸಿನಿಮಾ ಏಪ್ರಿಲ್ 6ಕ್ಕೆ ಬಿಡುಗಡೆ

 'ಹುಚ್ಚ-2' ಸಿನಿಮಾ ಇದೇ ಏಪ್ರಿಲ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

Last Updated : Mar 29, 2018, 03:44 PM IST
ಹುಚ್ಚ 2 ಸಿನಿಮಾ ಏಪ್ರಿಲ್ 6ಕ್ಕೆ ಬಿಡುಗಡೆ title=

ಬೆಂಗಳೂರು : ಕಳೆದ 17 ವರ್ಷಗಳ ಹಿಂದೆ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಬಿಡುಗಡೆಯಾಗಿದ್ದ 'ಹುಚ್ಚ' ಸಿನಿಮಾದ ಮುಂದುವರೆದ ಭಾಗವಾದ 'ಹುಚ್ಚ-2' ಸಿನಿಮಾ ಇದೇ ಏಪ್ರಿಲ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

2001 ರಲ್ಲಿ ಬಿಡುಗಡೆಯಾದ ಸುದೀಪ್ ಅಭಿನಯದ 'ಹುಚ್ಚ' ಸಿನಿಮಾ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್'ನಲ್ಲಿ ಸಖತ್ ಸೌಂಡ್ ಮಾಡಿತ್ತು. ಇದೀಗ ಆ ಚಿತ್ರದ ಮುಂದಿನ ಭಾಗ ಎಂದೇ ಹೇಳಲಾಗುತ್ತಿರುವ ಹುಚ್ಚ-2 ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಈಗ 'ಹುಚ್ಚ'ನಾಗಿ ಕಾಣಿಸಿಕೊಂಡಿದ್ದು, ವಿಭಿನ್ನವಾಗಿ ಅಭಿನಯಿಸಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದ್ದು, ಸಿನಿಮಾ ವಿಕ್ಷಣೆಗಾಗಿ ಪ್ರೇಕ್ಷಕರು ಕಾತುರರಾಗುವಂತೆ ಮಾಡಿದೆ. ಈ ಚಿತ್ರದಲ್ಲಿ ಕೃಷ್ಣನಿಗೆ ನಾಯಕಿಯಾಗಿ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯ ಅಭಿನಯಿಸಿದ್ದು, ನಾಯಕನ ತಾಯಿ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ಅಭಿನಯಿಸಿದ್ದಾರೆ. 

ಉಳಿದಂತೆ ಪೋಲಿಸ್ ಪಾತ್ರದಲ್ಲಿ ಸಾಯಿ ಕುಮಾರ್ ಅಭಿನಯಿಸಿದ್ದು, ಅವಿನಾಶ್, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲ, ಓಂ ಪ್ರಕಾಶ್ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಎ.ಎಂ.ಉಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನೂಪ್ ಸೀಲಿನ್ ಸಂಗೀತ ನೀಡಿದ್ದಾರೆ.

Trending News