ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಕಿತ್ತಾಟ..? ಪತಿ ಬಿಟ್ಟು ಕುಟುಂಬದೊಂದಿಗೆ ನಟಿಯ ಪ್ರವಾಸ..!

ಅಶ್ಲೀಲ ಚಿತ್ರಗಳ ತಯಾರಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ರಾಜ್ ಕುಂದ್ರಾ ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವ ರೀತಿಯಲ್ಲಿ ಮನೆ ಸೇರಿಕೊಂಡಿದ್ದು, ಹೊರಗಡೆ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

Written by - Puttaraj K Alur | Last Updated : Oct 24, 2021, 11:48 AM IST
  • ಪತಿ ರಾಜ್ ಕುಂದ್ರಾ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ?
  • ಮಕ್ಕಳು ಮತ್ತು ತಾಯಿ ಸುನಂದಾ ಶೆಟ್ಟಿಯವರೊಂದಿಗೆ ಆಲಿಬಾಗ್​ಗೆ ಶಿಲ್ಪಾ ಶೆಟ್ಟಿ ಪ್ರವಾಸ
  • ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಹೊರಗಡೆ ಕಾಣಿಸಿಕೊಳ್ಳದ ಉದ್ಯಮಿ ರಾಜ್ ಕುಂದ್ರಾ
ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಕಿತ್ತಾಟ..? ಪತಿ ಬಿಟ್ಟು ಕುಟುಂಬದೊಂದಿಗೆ ನಟಿಯ ಪ್ರವಾಸ..!  title=
ಕುಟುಂಬದೊಂದಿಗೆ ನಟಿ ಶಿಲ್ಪಾ ಶೆಟ್ಟಿ ಪ್ರವಾಸ

ನವದೆಹಲಿ: ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣ(Raj Kundra pornography case)ಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಬಂಧನದ ಬಳಿಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾರೀ ಸುದ್ದಿಯಲ್ಲಿದ್ದರು. ರಾಜ್ ಕುಂದ್ರಾಗೆ ಜಾಮೀನು ಸಿಕ್ಕ ಬಳಿಕ ಶಿಲ್ಪಾ ಸ್ವಲ್ಪ ನಿರಾಳರಾದಂತೆ ಕಂಡುಬಂದಿದ್ದಾರೆ. ಆದರೆ ಅವರು ತಮ್ಮ ಪತಿ ಜೊತೆ ವೈಮನಸ್ಸು ಹೊಂದಿದ್ದಾರೆಯೇ..? ಅನ್ನೋ ಪ್ರಶ್ನೆ ಮೂಡಿದೆ.

ರಾಜ್ ಕುಂದ್ರಾ(Raj Kundra) ಬಿಡುಗಡೆ ಬಳಿಕ ಎಲ್ಲಿಯೂ ಕಾಣಸಿಕೊಂಡಿಲ್ಲ. ಆದರೆ ಶಿಲ್ಪಾ ಶೆಟ್ಟಿ ಮಾತ್ರ ಆಗಾಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಪತಿ ಜೊತೆ ಕಿತ್ತಾಟ ಶುರುಮಾಡಿಕೊಂಡಿರುವ ಶಿಲ್ಪಾ ಶೆಟ್ಟಿ ಅವರಿಂದ ದೂರವಾಗಲು ಬಯಸುತ್ತಿದ್ದಾರೆಂದು ಅನೇಕ ಗಾಳಿಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಶಿಲ್ಪಾ ಶೆಟ್ಟಿ ಈ ವೀಕೆಂಡ್​ನಲ್ಲಿ ತಮ್ಮ ಮಕ್ಕಳಾದ ವಿಯಾನ್ ಹಾಗೂ ಸಮಿಷಾ, ತಾಯಿ ಸುನಂದಾ ಶೆಟ್ಟಿಯವರೊಂದಿಗೆ ಆಲಿಬಾಗ್​ಗೆ ಪ್ರವಾಸ ಕೈಗೊಂಡಿದ್ದರು. ಆದರೆ ಈ ವೇಳೆ ರಾಜ್ ಕುಂದ್ರಾ ಗೈರು ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Oscars 2022: ಭಾರತದಿಂದ ಆಸ್ಕರ್ ಗೆ ಅಧಿಕೃತ ಎಂಟ್ರಿ ಕೊಟ್ಟ ತಮಿಳು ಚಲನಚಿತ್ರ 'ಕೂಜಂಗಲ್'

ಪತಿ ಇಲ್ಲದೆ ಶಿಲ್ಪಾ ಶೆಟ್ಟಿ ಭರ್ಜರಿ ಪ್ರವಾಸ..!

ಅಶ್ಲೀಲ ಸಿನಿಮಾ ತಯಾರಿಕೆ ಹಾಗೂ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜ್ ಕುಂದ್ರಾ ಜುಲೈನಲ್ಲಿ ಜೈಲು ಪಾಲಾಗಿದ್ದರು. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ಅವರು ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ಶಿಲ್ಪಾಶೆಟ್ಟಿ(Shilpa Shetty) ಹಂಚಿಕೊಂಡ ಹಬ್ಬಗಳ ಆಚರಣೆಯ ಫೋಟೋಗಳಲ್ಲಿಯೂ ರಾಜ್ ಕುಂದ್ರಾ ನಾಪತ್ತೆಯಾಗಿದ್ದರು. ಹೀಗಾಗಿ ಈ ದಂಪತಿ ಉದ್ದೇಶಪೂರ್ವಕವಾಗಿಯೇ ಈ ರೀತಿ ದೂರವಾಗಲು ಪ್ರಯತ್ನಿಸುತ್ತಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಗುಲ್ಲು ಶುರುವಾಗಿದೆ.

ರಾಜ್ ಕುಂದ್ರಾ(Raj Kundra)ಹೀಗೆ ಕಾಣಿಸಿಕೊಳ್ಳದಿರಲು ಹಾಗೂ ನಟಿ ಶಿಲ್ಪಾಶೆಟ್ಟಿ ಪತಿ ಇಲ್ಲದೆ ಕುಟುಂಬದೊಂದಿಗೆ ಪ್ರವಾಸ ಕೈಗೊಂಡಿರುವ ಬಗ್ಗೆ ನೆಟಿಜನ್ ಗಳು ವಿವಿಧ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಹಾಗಾದರೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನಡುವೆ ಜಗಳವಿದೆಯೇ? ಅನ್ನೂ ಪ್ರಶ್ನೆ ಮೂಡಿದೆ. ಈ ದಂಪತಿಯ ವಿಚ್ಛೇದನದ ಸುದ್ದಿ ಅನೇಕ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ನಟಿ ಉದ್ಯಮಿ ರಾಜ್ ಕುಂದ್ರಾ ಜೊತೆ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.   

ಇದನ್ನೂ ಓದಿ: ಹೊಸ ಐಪಿಎಲ್ ತಂಡಕ್ಕೆ ಬಿಡ್ ಮಾಡಲು ಮುಂದಾದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್..!

ಅಶ್ಲೀಲ ಚಿತ್ರಗಳ ತಯಾರಿಕೆ ಪ್ರಕರಣ(Raj Kundra pornography case)ದಲ್ಲಿ ಸಿಕ್ಕಿಬಿದ್ದ ಬಳಿಕ ರಾಜ್ ಕುಂದ್ರಾ ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವ ರೀತಿಯಲ್ಲಿ ಮನೆ ಸೇರಿಕೊಂಡಿದ್ದು, ಹೊರಗಡೆ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪತಿ ಬಂಧನದ ಬಳಿಕ ಭಾರೀ ಮುಜುಗರ ಅನುಭವಿಸಿದ್ದ ಶಿಲ್ಪಾ ಶೆಟ್ಟಿ ತುಂಬಾ ಬೇಸರಪಟ್ಟುಕೊಂಡು ಚಿತ್ರರಂಗದ ಚಟುವಟಿಕೆಗಳಿಂದ ದೂರವಿದ್ದರು. ಯಾವಾಗ ಪತಿ ಬಿಡುಗಡೆಗೊಂಡರೋ ಅವರು ರಿಯಾಲಿಟಿ ಶೋ ಸೇರಿದಂತೆ ಚಿತ್ರರಂಗದ ಕೆಲಸಗಳಲ್ಲಿ ಮತ್ತೆ ಸಕ್ರಿಯರಾದರು. ಸದ್ಯ ಅವರು ಯಾವ ಮನಸ್ಥಿತಿ ಹೊಂದಿದ್ದಾರೆ..? ಎಷ್ಟು ಖುಷಿಯಿಂದ ಇದ್ದಾರೆ ಅಂತಾ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ದಂಪತಿ ಕೂಡ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News