'ರಕ್ತಾಕ್ಷ' ಮಾಸ್ ಟೀಸರ್ ರಿಲೀಸ್....ಪ್ರಮೋದ್, ರೋಹಿತ್ ಭರ್ಜರಿ ಆಕ್ಷನ್..!

Raktaksha : ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ರಕ್ತಾಕ್ಷ ಸಿನಿಮಾದ ಆಕ್ಷನ್ ಟೀಸರ್ ರಿಲೀಸ್ ಆಗಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತಾ ನಾಯಕ ರೋಹಿತ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  

Written by - YASHODHA POOJARI | Edited by - Savita M B | Last Updated : Jul 25, 2023, 07:15 PM IST
  • ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ರಗಡ್ ಆಗಿ ಅಬ್ಬರಿಸಿರುವ ಪ್ರಮೋದ್ ಶೆಟ್ಟಿ
  • ಕಿಲ್ಲಿಂಗ್ ಲುಕ್ ಮೂಲಕವೇ ಗಮನಸೆಳೆದಿರುವ ರೋಹಿತ್
  • ಟೀಸರ್ ಪ್ರಾಮಿಸಿಂಗ್ ಎನಿಸಿದ್ದು, ಧೀರೇಂದ್ರ ದಾಸ್ ಸಂಗೀತ ಸಖತ್ ಕಿಕ್ ಕೊಡುತ್ತಿದೆ.
'ರಕ್ತಾಕ್ಷ' ಮಾಸ್ ಟೀಸರ್ ರಿಲೀಸ್....ಪ್ರಮೋದ್, ರೋಹಿತ್ ಭರ್ಜರಿ ಆಕ್ಷನ್..!  title=

Sandalwood : ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ರಗಡ್ ಆಗಿ ಅಬ್ಬರಿಸಿರುವ ಅವರು ಪ್ರಮೋದ್ ಶೆಟ್ಟಿ ಎದುರು ತೊಡೆ ತಟ್ಟಿ ಅಬ್ಬರಿಸಿದ್ದಾರೆ‌. ಕಿಲ್ಲಿಂಗ್ ಲುಕ್ ಮೂಲಕವೇ ಗಮನಸೆಳೆದಿರುವ ರೋಹಿತ್ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿದ್ದಾರೆ. ಟೀಸರ್ ಪ್ರಾಮಿಸಿಂಗ್ ಎನಿಸಿದ್ದು, ಧೀರೇಂದ್ರ ದಾಸ್ ಸಂಗೀತ ಸಖತ್ ಕಿಕ್ ಕೊಡುತ್ತಿದೆ.

ಮಾಡೆಲಿಂಗ್ ಲೋಕದಲ್ಲಿ ಛಾಪು ಮೂಡಿಸಿರುವ ರೋಹಿತ್ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ರಕ್ತಾಕ್ಷ ಸಿನಿಮಾವನ್ನು ವಾಸುದೇವ ಎಸ್.ಎನ್ ನಿರ್ದೇಶನ ಮಾಡುತ್ತಿದ್ದಾರೆ. 

ಇದನ್ನೂ ಓದಿ-ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ವೈರಲ್..!

ಅಂದ್ಹಾಗೆ ವಾಸುದೇವ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾವಿದು. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ 'ರಕ್ತಾಕ್ಷ' ಸಿನಿಮಾಗೆ ದುಡಿದಿದ್ದಾರೆ. 

ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ. ಕೆಜಿಎಫ್ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್,  ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ  ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ.

ಈಗಾಗಲೇ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಟೀಸರ್ ಮೂಲಕ ರಕ್ತಾಕ್ಷ ಸಿನಿಮಾ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಇದನ್ನೂ ಓದಿ-Anupama Parameswaran: ಪಬ್ಲಿಕ್‌ ನಲ್ಲಿ ಕಿಸ್ ಕೊಟ್ಟ ʼನಟಿ ಅನುಪಮಾ ಪರಮೇಶ್ವರನ್; ಫೋಟೊ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News