Jawaan: ಭರ್ಜರಿ ಮೊತ್ತಕ್ಕೆ ಶಾರುಖ್ ನಟನೆಯ 'ಜವಾನ್' ಮ್ಯೂಸಿಕ್ ರೈಟ್ಸ್ ಮಾರಾಟ

Shah Rukh Khan Starrer Jawaan: ಶಾರುಖ್ ಖಾನ್ ಅಭಿನಯದ ಜವಾನ್ ಬಿಡುಗಡೆಗೂ ಮುನ್ನವೇ ಸಂಗೀತದ ಹಕ್ಕುಗಳನ್ನು ಮಾರಾಟ ಮಾಡಿದೆ. ವರದಿಗಳ ಪ್ರಕಾರ, ಜವಾನ್ ಚಿತ್ರದ ಮ್ಯೂಸಿಕ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.   

Written by - Chetana Devarmani | Last Updated : Jul 1, 2023, 04:17 PM IST
  • ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್
  • ಶಾರುಖ್ ಖಾನ್ ಅಭಿನಯದ ಜವಾನ್
  • ಭರ್ಜರಿ ಮೊತ್ತಕ್ಕೆ ಜವಾನ್ ಮ್ಯೂಸಿಕ್ ರೈಟ್ಸ್ ಮಾರಾಟ
Jawaan: ಭರ್ಜರಿ ಮೊತ್ತಕ್ಕೆ ಶಾರುಖ್ ನಟನೆಯ 'ಜವಾನ್' ಮ್ಯೂಸಿಕ್ ರೈಟ್ಸ್ ಮಾರಾಟ   title=
Jawaan

Jawaan Music Rights: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಅವರ ಚಿತ್ರವು ಬಿಡುಗಡೆಗೆ ಮುನ್ನವೇ ಸಾಕಷ್ಟು ಗಳಿಕೆ ಮಾಡಿದೆ. ಅಟ್ಲಿ ಕುಮಾರ್ ನಿರ್ದೇಶನದ ಜವಾನ್ ಚಿತ್ರದ ಮ್ಯೂಸಿಕ್ ರೈಟ್ಸ್ 36 ಕೋಟಿಗೆ ಮಾರಾಟವಾಗಿದೆ. ವರದಿಗಳ ಪ್ರಕಾರ, ಟಿ-ಸೀರೀಸ್ ಜವಾನ್ ಚಿತ್ರದ ಮ್ಯೂಸಿಕ್ ರೈಟ್ಸ್ ಗಳನ್ನು ಖರೀದಿಸಿದೆ. ಸಿನಿಮಾವೊಂದರ ಮ್ಯೂಸಿಕ್ ರೈಟ್ಸ್ 36 ಕೋಟಿಗೆ ಮಾರಾಟವಾಗಿದ್ದು ಇದುವರೆಗಿನ ಅತಿ ಹೆಚ್ಚು ದಾಖಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Shah Rukh Khan: ಒಂದಲ್ಲ ಮೂರು ಬಾರಿ ಮದುವೆಯಾದ ಶಾರುಖ್ ಖಾನ್

ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಚಿತ್ರ ಜವಾನ್ ಜನರಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಅದಕ್ಕಾಗಿಯೇ ಚಿತ್ರದ ಮ್ಯೂಸಿಕ್ ರೈಟ್ಸ್ ಸಾಕಷ್ಟು ಗಳಿಸಿವೆ. ಬಾಲಿವುಡ್ ಹಂಗಾಮಾದ ವರದಿಯ ಪ್ರಕಾರ, ನಿರ್ದೇಶಕ ಅಟ್ಲಿ ಕುಮಾರ್ ಮತ್ತು ಶಾರುಖ್ ಖಾನ್ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಬಹು ನಿರೀಕ್ಷಿತ ಆಕ್ಷನ್ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಆದರೆ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವರದಿಗಳ ಪ್ರಕಾರ, ಜವಾನ್ ಟೀಸರ್ ಅನ್ನು ಜುಲೈ 7 ಅಥವಾ ಜುಲೈ 15 ರಂದು ಬಿಡುಗಡೆ ಮಾಡಬಹುದು.

ಇನ್ನೊಂದು ವರದಿಯ ಪ್ರಕಾರ, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದ ಟೀಸರ್ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಜವಾನ್ ಡಿಜಿಟಲ್ ಲಾಂಚ್ ಸಾಕಷ್ಟು ಅದ್ಧೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಶಾರುಖ್ ಖಾನ್ ಮತ್ತು ಅಟ್ಲಿ ಇಬ್ಬರೂ ಒಟ್ಟಾಗಿ ಟೀಸರ್ ಅನ್ನು ಮುನ್ನೆಲೆಗೆ ತರಲಿದ್ದಾರೆ. ಇದರೊಂದಿಗೆ ಜವಾನ್ ಚಿತ್ರದ ಟೀಸರ್ ನಲ್ಲಿ ಶಾರುಖ್ ಖಾನ್ ಯಾರೂ ನೋಡಿರದ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಕುಮಾರ್ ಜವಾನ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಜವಾನ್ 7 ಸೆಪ್ಟೆಂಬರ್ 2023 ರಂದು ಚಿತ್ರಮಂದಿರಗಳಿಗೆ ಬರಲಿದೆ.

ಇದನ್ನೂ ಓದಿ: Upendra: ‘ಬುದ್ಧಿವಂತ 2’ ನಲ್ಲಿ ದಡ್ಡರನ್ನು ಜಾಣರಾಗಿಸಲು ಉಪ್ಪಿ ರೆಡಿ ; ವಿಭಿನ್ನ ಗೆಟಪ್​ನಲ್ಲಿ ರಿಯಲ್ ಸ್ಟಾರ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News