Shruti Haasan on Marrige Rumours with Santanu Hazarika: ಕಮಲ್ ಹಸನ್ ಪುತ್ರಿ ಶೃತಿ ಹಾಸನ್ ಮತ್ತು ಮತ್ತು ಶಂತನು ಕದ್ದು ಮುಚ್ಚಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಇದೀಗ ಎಲ್ಲೆಡೆ ಹಬ್ಬಿದೆ. ಶೃತಿ ಮತ್ತು ಶಂತನು ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಆದರೆ ಇತ್ತೀಚೆಗೆ ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ, ಶಂತನು ಅವರನ್ನು ಶೃತಿಯ ಪತಿ ಎಂದು ಸಂಭೋದಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ, ಶೃತಿ ಮತ್ತು ಶಂತನು ರಹಸ್ಯವಾಗಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಭಾರೀ ವೇಗವಾಗಿ ಹರಡಿಕೊಂಡಿತು. ಇದೀಗ ಈ ಸುದ್ದಿಯ ಬಗ್ಗೆ ಸ್ವತಃ ಶೃತಿ ಮತ್ತು ಶಾಂತನು ಮೌನ ಮುರಿದಿದ್ದಾರೆ.
ಆಸ್ಕ್ ಮಿ ಏನ್‌ಥಿಂಗ್' ಸೆಷನ್ :
ವಾಸ್ತವವಾಗಿ, ರೆಡ್ಡಿಟ್‌ನಲ್ಲಿ 'ಆಸ್ಕ್ ಮಿ ಏನ್‌ಥಿಂಗ್' ಸೆಷನ್ ವೇಳೆ, ಓರಿ ಶೃತಿ ಹಾಸನ್ ಬಗ್ಗೆ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಶೃತಿ ಹಾಸನ್ ತನ್ನೊಂದಿಗೆ ಕಾರ್ಯಕ್ರಮವೊಂದರಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವುದನ್ನು ಕೂಡಾ ಓರಿ ಬಹಿರಂಗಪಡಿಸಿದ್ದರು. ಆಸ್ಕ್ ಮಿ ಏನ್‌ಥಿಂಗ್ ಸೆಷನ್ ನಲ್ಲಿಯೇ ಓರಿ ಶಂತನು ಅವರನ್ನು ಶೃತಿ ಪತಿ ಎಂಬುದಾಗಿ ಕೂಡಾ ಸಂಭೋದಿಸಿದ್ದರು. ಇದಾದ ನಂತರ ಶೃತಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ವದಂತಿ ಹಬ್ಬಲು ಕಾರಣವಾಯಿತು.
ಇದನ್ನೂ ಓದಿ : ಚೆಫ್ ಚಿದಂಬರನ ಜೊತೆ ಲವ್ ಮಾಕ್ಟೆಲ್ ಸಿಹಿ: ರೆಚಲ್ ಡೇವಿಡ್ ಮಸ್ತ್ ಲುಕ್ ರಿವೀಲ್!
ಇನ್‌ಸ್ಟಾ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿದ ಕಮಲ್ ಪುತ್ರಿ :
ಇದೀಗ ಈ ಎಲ್ಲಾ ವದಂತಿಗಳಿಗೆ ಶೃತಿ ತೆರೆ ಎಳೆದಿದ್ದಾರೆ. Instagramನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ಮದುವೆಯಾಗಿಲ್ಲ. ನನ್ನ ಜೀವನದಲ್ಲಿ ಎಲ್ಲವೂ ತೆರೆದ ಪುಸ್ತಕವಾಗಿರುವಾಗ ಮದುವೆಯ ವಿಚಾರವನ್ನು ನಾನು ಯಾಕೆ ಮರೆ ಮಾಡುತ್ತೇನೆ. ನನ್ನ ಬಗ್ಗೆ ಏನೂ ತಿಳಿದಿಲ್ಲದ ವ್ಯಕ್ತಿಗಳು ದಯವಿಟ್ಟು ಸುಮ್ಮನಿದ್ದು ಬಿಡಿ ಎಂದು ಹೇಳಿದ್ದಾರೆ.
ಶಂತನು ಹಜಾರಿಕಾ ಪೋಸ್ಟ್ :
ಇದಾದ ಬೆನ್ನಲ್ಲೇ ಶ್ರುತಿ ಹಾಸನ್ ಗೆಳೆಯ ಶಂತನು ಹಜಾರಿಕಾ ಕೂಡ ಇನ್ಸ್ಟಾ ಸ್ಟೋರಿಯಲ್ಲಿ ಸಂದೇಶವೊಂದನ್ನು ಬರೆದಿದ್ದಾರೆ. ನಾವು ಮದುವೆಯಾಗಿಲ್ಲ. ನಮಗೆ ಗೊತ್ತಿಲ್ಲದವರು ದಯವಿಟ್ಟು ವದಂತಿ ಹಬ್ಬಿಸುವುದನ್ನು ನಿಲ್ಲಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ : ಶಾರುಖ್ ಅವರ 'ಡಂಕಿ' ವೇಗವನ್ನು ಹೆಚ್ಚಿಸಿದೆ, ಆರನೇ ದಿನ ಗಳಿಕೆ ಎಷ್ಟು ಗೊತ್ತಾ..?
ಶೃತಿ ಹಾಸನ್ ಬಗ್ಗೆ ಓರಿ ಹೇಳಿದ್ದೇನು? :
ಸಂವಾದದ ವೇಳೆ ಫೋಟೋಗಳಿಗೆ ಪೋಸ್ ನೀಡುವಾಗ ಯಾರಾದರೂ ನಿಮ್ಮ ಜೊತೆ ಆಟಿಟ್ಯುಡ್ ತೋರಿದ್ದಾರೆಯೇ ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಓರಿ, ಶ್ರುತಿ ಹಾಸನ್ ಎಂದು ಉತ್ತರಿಸಿದ್ದರು. ಆದರೆ, ಶ್ರುತಿ ಹಾಸನ್ ಫೋಟೋ ತೆಗೆದುಕೊಳ್ಳುವ ವೇಳೆ ಅಲ್ಲ, ಒಂದು ಸಮಾರಂಭದಲ್ಲಿ ನನ್ನೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸಿದಳು. ನನಗೆ ಅವರ ಪರಿಚಯವೂ ಇಲ್ಲ!, ಹಾಗಾಗಿ ನಂಗೆ ಅದು ಬಹಳ ಮುಜುಗರ ಉಂಟು ಮಾಡಿತ್ತು ಎಂದು ಹೇಳಿದ್ದಾರೆ. ನಾನು ಅವರ ಪತಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಅವರೆಂದರೆ ನಂಗೆ ಇಷ್ಟೆಂದು ಹೇಳಿರುವ ಓರಿ ಕಾಲ ಕಳೆದ ಹಾಗೆ ಎಲ್ಲವೂ ಸರಿಯಾಗುವುದು ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.