close

News WrapGet Handpicked Stories from our editors directly to your mailbox

ಬಾಡಿಗೆ ಮನೆ ವಿವಾದ: ಕೊನೆಗೂ ಮನೆ ಖಾಲಿ ಮಾಡಿದ ಯಶ್!

ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿದ್ದ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ಬೆಂಗಳೂರಿನ ಬನಶಂಕರಿಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

Updated: Jun 7, 2019 , 06:55 PM IST
ಬಾಡಿಗೆ ಮನೆ ವಿವಾದ: ಕೊನೆಗೂ ಮನೆ ಖಾಲಿ ಮಾಡಿದ ಯಶ್!

ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿದ್ದ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ಬೆಂಗಳೂರಿನ ಬನಶಂಕರಿಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಕೀಲಿ ಕೈ ಹಸ್ತಾಂತರಿಸಿದ್ದಾರೆ.

ಹಾಸನದಲ್ಲಿ ಯಶ್​​ ಸ್ವಂತ ಮನೆ ಕಟ್ಟಿಸುತ್ತಿದ್ದು, ಆ ಮನೆ ಪೂರ್ತಿಯಾಗಿ ಅಲ್ಲಿಗೆ ಶಿಫ್ಟ್​ ಮಾಡಲು ಇನ್ನೂ 6 ತಿಂಗಳ ಕಾಲಾವಕಾಶ ಬೇಕಿದೆ. ಕೇವಲ 6 ತಿಂಗಳ ಅವಧಿಗೆ ಬಾಡಿಗೆ ಮನೆ ಹುಡುಕುವುದು ಕಷ್ಟ. ಹೀಗಾಗಿ ಇನ್ನೂ 6 ತಿಂಗಳು ಇದೇ ಮನೆಯಲ್ಲಿ ಇರಲು ಕಾಲಾವಕಾಶ ಕೊಡಬೇಕು ಎಂದು ಯಶ್ ತಾಯಿ ಪುಷ್ಪ ಪರ ವಕೀಲರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಆದರೆ ಮನೆ ಮಾಲೀಕರಿಂದ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತಾದರೂ, ಮೇ 31ರೊಳಗೆ ಮನೆ ಖಾಲಿ ಮಾಡಬೇಕು ಎಂದು ಹೇಳಿ ಕೋರ್ಟ್ ಕಾಲಾವಕಾಶ ನೀಡಿತ್ತು.

ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಇನ್ನೂ ಮನೆ ಖಾಲಿ ಮಾಡದ ಬಗ್ಗೆ ನಿನ್ನೆ ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಯಶ್ ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ 80 ಸಾವಿರ ರೂ.ಗಳ ಡಿಡಿಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಮನೆ ಖಾಲಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಮನೆ ಖಾಲಿ ಮಾಡಿರುವ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ಮನೆ ಮಾಲೀಕರ ಪರ ವಕೀಲ ಶಂಕರಪ್ಪ ಮಾಹಿತಿ ನೀಡಿದ್ದಾರೆ.