Nipah Virus Update: ಕೇರಳದಲ್ಲಿ ಹೆಚ್ಚಾಗುತ್ತಿರುವ ನಿಪಾಹ್ ವೈರಸ್ ಪ್ರಕೋಪ, ಬೇರೆ ರಾಜ್ಯಗಳಿಗೆ ಏನು ಆತಂಕ?

Nipah Virus Update: ಕೊರೊನಾ (Corona Virus) ಬಳಿಕ ಇದೀಗ ಕೇರಳದಲ್ಲಿ (Kerala) ನಿಪಾಹ್ ವೈರಸ್ (Nipah Virus) ಭೀತಿ ಕಾಡುತ್ತಿದೆ. ಈ ವೈರಸ್ ನಿಂದಾಗಿ ಇದುವರೆಗೆ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 168 ಜನರನ್ನು ಹೋಮ್ ಐಸೋಲೆಶನ್ ನಲ್ಲಿ ಇಡಲಾಗಿದೆ.

Written by - Nitin Tabib | Last Updated : Sep 6, 2021, 04:06 PM IST
  • ಕೊರೊನಾ (Corona Virus) ಬಳಿಕ ಇದೀಗ ಕೇರಳದಲ್ಲಿ (Kerala) ನಿಪಾಹ್ ವೈರಸ್ (Nipah Virus) ಭೀತಿ ಕಾಡುತ್ತಿದೆ.
  • ಈ ವೈರಸ್ ನಿಂದಾಗಿ ಇದುವರೆಗೆ 20 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
  • 168 ಜನರನ್ನು ಹೋಮ್ ಐಸೋಲೆಶನ್ ನಲ್ಲಿ ಇಡಲಾಗಿದೆ.
Nipah Virus Update: ಕೇರಳದಲ್ಲಿ ಹೆಚ್ಚಾಗುತ್ತಿರುವ ನಿಪಾಹ್ ವೈರಸ್ ಪ್ರಕೋಪ, ಬೇರೆ ರಾಜ್ಯಗಳಿಗೆ ಏನು ಆತಂಕ? title=
Nipah Virus Update (File Photo)

Nipah Virus Update: ಕೇರಳದಲ್ಲಿ ಕರೋನಾದ (Corona Virus) ನಂತರ, ಇದೀಗ ನಿಪಾಹ್ ವೈರಸ್ (Nipah Virus) ಭೀತಿ ಎದುರಾಗಿದೆ. ರಾಜ್ಯದ ಕೋಝಿಕೋಡ್ ನಿಂದ ಸ್ವಲ್ಪ ದೂರದಲ್ಲಿರುವ ಮಾವೂರು ಪ್ರದೇಶದಲ್ಲಿ 12 ವರ್ಷದ ಮಗು ನಿಪಾ ವೈರಸ್ ನಿಂದ ಸಾವನ್ನಪ್ಪಿದ ನಂತರ ಆಡಳಿತ ಎಚ್ಚೆತ್ತುಕೊಂಡಿದೆ. ನಿಪಾಹ್ ತಡೆಗಟ್ಟಲು, ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಅದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಲಾಗಿದೆ. ನೆರೆಹೊರೆಯ ಜಿಲ್ಲೆಗಳಿಗೂ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ನಿಪಾಹ್ ವೈರಸ್ ಬಾವಲಿಗಳ ಜೊಲ್ಲಿನ (Bat Saliva)ಮೂಲಕ ಹರಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬಾವಲಿ ಯಾವುದೇ ಹಣ್ಣನ್ನು ತಿಂದಿದ್ದರೆ ಅಥವಾ ಅದನ್ನು ಬಿಟ್ಟರೆ ಮತ್ತು ಒಬ್ಬ ವ್ಯಕ್ತಿಯು ಅದನ್ನು ಸೇವಿಸಿದರೆ  ಆತ ನಿಪಾಹ್ ವೈರಸ್‌ನ ಅಪಾಯವನ್ನು ಎದುರಿಸಬಹುದು. ಈ ವೈರಸ್ ಬಾವಲಿಗಳಿಂದ ಮಾತ್ರ ಹರಡುತ್ತದೆ ಎಂದಲ್ಲ, ಈ ವೈರಸ್ ಒಬ್ಬ ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಆದರೆ ಇದುವರೆಗೆ ಅದು ದೃಢಪಟ್ಟಿಲ್ಲ.

ಇದನ್ನೂ ಓದಿ-Health Tips: ಮೊಸರಿನಲ್ಲಿ ಒಣದ್ರಾಕ್ಷಿ ಬೆರೆಸಿ ತಿನ್ನುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ

ನಿಧಾನವಾಗಿ ಹರಡುತ್ತದೆ ಈ ವೈರಸ್ (Nipah Virus Spread)
ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ನಿಪಾಹ್ ವೈರಸ್ ನಿಧಾನವಾಗಿ ಹರಡುತ್ತದೆ. ನಿಪಾವನ್ನು ಕರೋನಾದೊಂದಿಗೆ ಹೋಲಿಸಿದರೆ, ಈ ವೈರಸ್‌ನ ಚಲನೆಯು ಕೊರೊನಾಗಿಂತ ನಿಧಾನವಾಗಿರುತ್ತದೆ. ಆದರೆ, ಅದರ ಸೋಂಕಿನಿಂದ ಸಂಭವಿಸುವ ಸಾವುಗಳು ಚಿಂತಾಜನಕವಾಗಿವೆ. ಒಂದು ಸಂಶೋಧನೆಯ ಪ್ರಕಾರ, 1999 ರಲ್ಲಿ, ಮಲೇಷಿಯಾದಲ್ಲಿ ಒಟ್ಟು 265 ಜನರು ನಿಪಾ ವೈರಸ್ ಸೋಂಕಿಗೆ ಒಳಗಾಗಿದ್ದರು, ಅದರಲ್ಲಿ 105 ರೋಗಿಗಳು ಸಾವನ್ನಪ್ಪಿದ್ದರು.

ಇದನ್ನೂ ಓದಿ-ಆಗಾಗ ಕಾಣಿಸಿಕೊಳ್ಳುವ ಹೊಟ್ಟೆಯ ಸಮಸ್ಯೆಗೆ ಈ ಮನೆ ಮದ್ದುಗಳನ್ನು ಬಳಸಿ ನೋಡಿ

ಭಾರತದ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯಲ್ಲಿ ಮೊದಲು ನಿಪಾ ವೈರಸ್ ಸೋಂಕು ಹರಡಿದ್ದ ಸಂದರ್ಭದಲ್ಲಿ ಒಟ್ಟು  66 ಸೋಂಕಿತರಲ್ಲಿ 45 ಜನರು ಪ್ರಾಣ ಕಳೆದುಕೊಂಡಿದ್ದರು. ಅಂದರೆ ಆ ಸಮಯದಲ್ಲಿ ಸಾವಿನ ಪ್ರಮಾಣ ಸುಮಾರು ಶೇ.68ರಷ್ಟಿತ್ತು. ಇದೇ ವೇಳೆ  2007 ರಲ್ಲಿ, ನಾಡಿಯಾ ಜಿಲ್ಲೆಯಲ್ಲಿ ವೈರಸ್ ಹರಡಿತ್ತು, ಇದರಲ್ಲಿ ಎಲ್ಲಾ ಐವರು ಸೊಂಕಿತರು ತಮ್ಮ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ-Shampoo for Scalp : ತಲೆ ಹೊಟ್ಟು ನಿವಾರಣೆಗೆ ಉತ್ತಮ ಶಾಂಪೂ ಆಯ್ಕೆ ಮಾಡುವುದು ಹೇಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News