ನವದೆಹಲಿ: 130 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಲಖಿಂಪುರ್ ಜಿಲ್ಲೆಯಲ್ಲಿ ಭಾನುವಾರ ಎಂಟು ಸಾವುಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಇಂದು ಮಧ್ಯಾಹ್ನ ಲಖನೌ ವಿಮಾನ ನಿಲ್ದಾಣದದಲ್ಲಿ ಪೊಲೀಸರು ತಡೆದಿರುವ ಹಿನ್ನಲೆಯಲ್ಲಿ ಅವರು ಸ್ಥಳದಲ್ಲಿಯೇ ಧರಣಿ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಬಘೇಲ್ ಅವರು ನಿನ್ನೆ ಸೀತಾಪುರದಲ್ಲಿ ಪೊಲೀಸ್ ವಶದಲ್ಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಹೇಳಿದರು.ಭಾನುವಾರ ಹಿಂಸಾಚಾರದಿಂದ ತೊಂದರೆಗೀಡಾದವರನ್ನು ಭೇಟಿ ಮಾಡಲು ಲಖಿಂಪುರಕ್ಕೆ ಹೋಗುತ್ತಿದ್ದಾಗ ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಯಿತು ಎಂದು ಭೂಪೇಶ್ ಬಘೇಲ್ (Bhupesh Baghel) ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಮತಾಂತರಗಳಾಗಿವೆ- ಭೂಪೇಶ್ ಬಘೇಲ್
'ನಾನು ಸೀತಾಪುರದಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡಲು ಲಕ್ನೋಗೆ ಬಂದಿದ್ದೇನೆ. ಆದರೆ ನನಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶವಿಲ್ಲ.ಯಾವುದೇ ಆದೇಶವಿಲ್ಲದೆ, ನನ್ನನ್ನು ಲಕ್ನೋ ವಿಮಾನ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರು ಶೇರ್ ಮಾಡಿರುವ ಫೋಟೋದಲ್ಲಿ ಬಿಳಿ ಕುರ್ತಾ-ಪೈಜಾಮಾದಲ್ಲಿ, ನೆಲದ ಮೇಲೆ ಕುಳಿತಿರುವುದನ್ನು, ಪೋಲಿಸರು ಮತ್ತು ಅವರನ್ನು ನೋಡುತ್ತಿರುವ ಕಾವಲುಗಾರರನ್ನು ತೋರಿಸುತ್ತದೆ.
बिना किसी आदेश के मुझे लखनऊ एयरपोर्ट से बाहर जाने से रोका जा रहा है। pic.twitter.com/4wwslm9bZr
— Bhupesh Baghel (@bhupeshbaghel) October 5, 2021
ಇದನ್ನೂ ಓದಿ: "ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"
ಲಖಿಂಪುರದಲ್ಲಿ, ಯುಪಿ ಉಪ ಮುಖ್ಯಮಂತ್ರಿ ಕೇಶವ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸಿದ ಪ್ರತಿಭಟನೆ ಭಾನುವಾರ ಹಿಂಸಾತ್ಮಕವಾಗಿ ಮಾರ್ಪಟ್ಟಿತು, ಅವರ ಮೇಲೆ ಕಾರು ಹರಿದು ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.ಈಗ ಆಕ್ರೋಶದ ನಡುವೆ ಕೊಲೆ ಪ್ರಕರಣ ದಾಖಲಾಗಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಾತ್ರ ಆರೋಪಿಯಾಗಿದ್ದಾರೆ.
ಇದನ್ನೂ ಓದಿ: Karuna Shukla : ಕಾಂಗ್ರೆಸ್ ಹಿರಿಯ ನಾಯಕಿ ಕೊರೋನಾಗೆ ಬಲಿ..!
"ಹಮ್ಕೋ ಕ್ಯುನ್ ರೋಕಾ ಜ ರಹಾ ಹೈ? ಮುಖ್ಯ ಆಪ್ಕೆ ಲಖಿಂಪುರ್ ನಹಿ ಜ ರಹಾ ಹನ್ (ನಮ್ಮನ್ನು ಏಕೆ ನಿಲ್ಲಿಸಲಾಗಿದೆ. ನಾನು ನಿಮ್ಮ ಲಖಿಂಪುರಕ್ಕೆ ಹೋಗುತ್ತಿಲ್ಲ)," ಎಂದು ಬಘೆಲ್ ಮತ್ತೆ ಹೇಳುತ್ತಾರೆ.ಇದಕ್ಕೆ, ಲಕ್ನೋದಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.
मीडिया के साथियों से बातचीत
देखें- https://t.co/pGcT2jruWs pic.twitter.com/WMtcwz3kTE
— Bhupesh Baghel (@bhupeshbaghel) October 5, 2021
ರಾಜ್ಯದ ರಾಜಧಾನಿಯಲ್ಲಿ, ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ನಿನ್ನೆ ಲಖಿಂಪುರ್ ಸಾವಿನ ವಿಚಾರವಾಗಿ ಪ್ರತಿಭಟಿಸುತ್ತಿದ್ದಾಗ ಅವರ ಮನೆಯ ಹೊರಗೆ ಬಂಧಿಸಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ