ಈ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಮೇಲೆ ಸಿಗಲಿದೆ ಜಬರ್ದಸ್ತ್ ಇಂಟರ್ನೆಟ್ ಸ್ಪೀಡ್

ಡಿಸೆಂಬರ್ 27 ರಂದು ಬಿಎಸ್ಎನ್ಎಲ್ ಈ ಎರಡೂ ಯೋಜನೆಗಳನ್ನುಪರಿಚಯಿಸಿದೆ ಮತ್ತು ಈ ಯೋಜನೆಗಳು 2019 ರ ಡಿಸೆಂಬರ್ 27 ರಿಂದ ಮುಂದಿನ 90 ದಿನಗಳವರೆಗೆ ಲಭ್ಯವಿರಲಿವೆ.  

Written by - Nitin Tabib | Last Updated : Dec 29, 2019, 07:24 PM IST
ಈ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಮೇಲೆ ಸಿಗಲಿದೆ ಜಬರ್ದಸ್ತ್ ಇಂಟರ್ನೆಟ್ ಸ್ಪೀಡ್ title=

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಎರಡು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ತಂದಿದೆ. ಹೊಸ ಬಳಕೆದಾರರಿಗಾಗಿ, ಕಂಪನಿಯು 299 ಮತ್ತು 491 ರೂ. ಗಳ ಎರಡು ಯೋಜನೆಗಳನ್ನು ತಂದಿದ್ದು, ಇದರಲ್ಲಿ ಬಳಕೆದಾರರಿಗೆ 20 Mbps ಇಂಟರ್ನೆಟ್ ವೇಗ ಸಿಗಲಿದೆ. ಈ ಯೋಜನೆಗಳ ಸಿಂಧುತ್ವವು ಆರು ತಿಂಗಳುಗಳು. ಟೆಲಿಕಾಂ ಟಾಕ್‌ನ ಪ್ರಕಟಿಸಿರುವ ವರದಿ ಪ್ರಕಾರ, ಸ್ಟ್ಯಾಂಡರ್ಡ್ ಡಾಟಾ ಬೆನಿಫಿಟ್ ಜೊತೆಗೆ, ಈ ಎರಡೂ ಯೋಜನೆಗಳಿಗೆ ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಸೇವೆಯ ಮೂಲಕ ಅನಿಯಮಿತ ಧ್ವನಿ ಕರೆ ಕೂಡ ಸಿಗಲಿದೆ.

ಈ ಎರಡೂ ಯೋಜನೆಗಳನ್ನು ಡಿಸೆಂಬರ್ 27 ರಂದು ಬಿಎಸ್ಎನ್ಎಲ್ ಪರಿಚಯಿಸಿದೆ ಮತ್ತು ಈ ಯೋಜನೆಗಳು  2019ರ ಡಿಸೆಂಬರ್ 27 ರಿಂದ ಮುಂದಿನ 90 ದಿನಗಳವರೆಗೆ ಲಭ್ಯವಿರುತ್ತದೆ. ಎರಡೂ ಪ್ರಮೋಶನಲ್ ಯೋಜನೆಗಳಾಗಿದ್ದು, ಯೋಜನೆಗಳ ಸಿಂಧುತ್ವವು ಒಂದು ತಿಂಗಳು. ಆದರೆ,  ಗ್ರಾಹಕರು ಈ ಯೋಜನೆಗಳನ್ನು ಆರು ತಿಂಗಳವರೆಗೆ ಬಳಸಬಹುದು. ಅಂದರೆ, ಬಿಎಸ್‌ಎನ್‌ಎಲ್ ಬಳಕೆದಾರರನ್ನು ಮತ್ತೊಂದು ಯೋಜನೆಗೆ ಟ್ರಾನ್ಸ್ಫರ್ ಮಾಡಲು ಸೂಚಿಸಲಾಗುತ್ತದೆ. ರೂ.99ರಿಂದ ರೂ.16,999ರವರೆಗೆ ವಿವಿಧ ಶ್ರೇಣಿಗಳಲ್ಲಿ ಬ್ರಾಡ್ ಬಂದ್ ಯೋಜನೆಗಳನ್ನು ಹೊಂದಿರುವ BSNLನಲ್ಲಿ ನೀವು 100 00 Mbps ವರೆಗೆ ಇಂಟರ್ನೆಟ್ ವೇಗವನ್ನು ಪಡೆಯಬಹುದಾಗಿದೆ. ವರದಿಗಳ ಪ್ರಕಾರ ಡೈಲಿ ಡೇಟಾ ಬೆನಿಫಿಟ್ ನೀಡಿದ ಮೊದಲ ಬ್ರಾಡ್ ಬ್ಯಾಂಡ್ ಕಂಪನಿ ಎಂಬ ಹೆಗ್ಗಳಿಕೆಗೆ BSNL ಪಾತ್ರವಾಗಿದೆ.

ಈ ಎರಡೂ ನೂತನ  ಬ್ರಾಡ್‌ಬ್ಯಾಂಡ್ ಯೋಜನೆಗಳು ಕೇವಲ ಹೊಸ ಗ್ರಾಹಕರಿಗೆ ಮಾತ್ರ ಸೀಮಿತವಾಗಿವೆ. 299 ರೂ.ಗಳ ಯೋಜನೆಯಲ್ಲಿ, 20 Mbps ನ ಇಂಟರ್ನೆಟ್ ವೇಗ ಸಿಗಲಿದ್ದು, ಇದರ FUP 50 GBವರೆಗೆ ಇರುತ್ತದೆ FUPದಾಟಿದ ಬಳಿಕ ಈ ವೇಗ 1 Mbps ಗೆ ಬರಲಿದೆ. ಈ ಯೋಜನೆಯಡಿ ನೀವು ಲ್ಯಾಂಡ್‌ಲೈನ್ ಮೂಲಕ ಅನಿಯಮಿತ ಧ್ವನಿ ಕರೆ ಮಾಡಬಹುದು.

491 ರೂ. ಯೋಜನೆಯಡಿ, 20 ಎಮ್‌ಬಿಪಿಎಸ್‌ನ ಇಂಟರ್ನೆಟ್ ವೇಗ ಸಿಗಲಿದ್ದು, ಇದರ FUP 120ಜಿಬಿವರೆಗೆ ಇರಲಿದ್ದು, ನಂತರ ಅದು  1 ಎಮ್‌ಬಿಪಿಎಸ್‌ಗೆ ಇಳಿಯಲಿದೆ. ಹೊಸ ಬಳಕೆದಾರರು 500 ರೂಪಾಯಿಗಳನ್ನು ಭದ್ರತಾ ಶುಲ್ಕವನ್ನು ಕಟ್ಟಬೇಕು. ಅನುಸ್ಥಾಪನೆಗೆ ಬಳಕೆದಾರರು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಈ ಎರಡೂ ಯೋಜನೆಗಳು ಪ್ರಚಾರದ ಯೋಜನೆಯಾಗಿರುವುದರಿಂದ, ಆರು ತಿಂಗಳ ಬಳಕೆಯ ನಂತರ ಗ್ರಾಹಕರ ಯೋಜನೆಯನ್ನು ಸ್ಥಳಾಂತರಿಸಲಾಗುತ್ತದೆ

Trending News