Post Office: ಪೋಸ್ಟ್ ಆಫೀಸ್ ಗ್ರಾಹಕರೇ ಗಮನಿಸಿ : ಆಗಸ್ಟ್ 1 ರಿಂದ ಬದಲಾಗಲಿವೆ ಈ ಎಲ್ಲ ನಿಯಮಗಳು!

ನಿಮ್ಮ ಖಾತೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದು. ಈಗ ನೀವು ಆಗಸ್ಟ್ 1 ರಿಂದ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಇದರೊಂದಿಗೆ ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು (ಐಪಿಪಿಬಿ ಬಡ್ಡಿದರ) ಕಡಿತಗೊಳಿಸಿದೆ. ಅಂದರೆ, ಈಗ ನೀವು ಭರಿಸುವ ವೆಚ್ಚಗಳು ಹೆಚ್ಚಾಗಿದೆ ಮತ್ತು ನೀವು ಪಡೆಯುವ ಲಾಭವೂ  ಕಡಿಮೆಯಾಗುತ್ತದೆ.

Written by - Channabasava A Kashinakunti | Last Updated : Jul 14, 2021, 04:02 PM IST
  • ಆಗಸ್ಟ್ 1 ರಿಂದ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ
  • ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು ಕಡಿತಗೊಳಿಸಿದೆ
  • ಬ್ಯಾಂಕ್ ಗ್ರಾಹಕರು ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವಾಗಿ 20 ರೂ. ಪಾವತಿ
Post Office: ಪೋಸ್ಟ್ ಆಫೀಸ್ ಗ್ರಾಹಕರೇ ಗಮನಿಸಿ : ಆಗಸ್ಟ್ 1 ರಿಂದ ಬದಲಾಗಲಿವೆ ಈ ಎಲ್ಲ ನಿಯಮಗಳು! title=

ನವದೆಹಲಿ : ನಿಮ್ಮ ಖಾತೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದು. ಈಗ ನೀವು ಆಗಸ್ಟ್ 1 ರಿಂದ ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ. ಇದರೊಂದಿಗೆ ಬ್ಯಾಂಕ್ ಜುಲೈ 1 ರಿಂದ ಬಡ್ಡಿದರಗಳನ್ನು (ಐಪಿಪಿಬಿ ಬಡ್ಡಿದರ) ಕಡಿತಗೊಳಿಸಿದೆ. ಅಂದರೆ, ಈಗ ನೀವು ಭರಿಸುವ ವೆಚ್ಚಗಳು ಹೆಚ್ಚಾಗಿದೆ ಮತ್ತು ನೀವು ಪಡೆಯುವ ಲಾಭವೂ  ಕಡಿಮೆಯಾಗುತ್ತದೆ.

ಬ್ಯಾಂಕ್ ಗ್ರಾಹಕರಿಗೆ ಡಬಲ್ ಬ್ಲೋ :

ಐಪಿಪಿಬಿ ಪ್ರಕಾರ, ಆಗಸ್ಟ್ 1, 2021 ರಿಂದ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(India Post Payments Bank) ಗ್ರಾಹಕರು ಡೋರ್‌ಸ್ಟೆಪ್ ಬ್ಯಾಂಕಿಂಗ್ ಶುಲ್ಕವಾಗಿ 20 ರೂ. ಪಾವತಿಯಾಸಬೇಕಾಗುತ್ತದೆ. ಅಲ್ಲದೆ, ಬ್ಯಾಂಕ್ ಕೂಡ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಜುಲೈ 1 ರಿಂದ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಕಡಿಮೆ ಬಡ್ಡಿ ಸಿಗುತ್ತದೆ. ಈ ಹಿಂದೆ ಗ್ರಾಹಕರು 1 ಲಕ್ಷ ರೂ.ವರೆಗಿನ ಬಾಕಿ ಮೊತ್ತಕ್ಕೆ ಶೇ.2.75 ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದರು, ಆದರೆ ಬ್ಯಾಂಕ್ ಅದನ್ನು 25 ಬೇಸಿಸ್ ಪಾಯಿಂಟ್‌ಗಳಿಂದ 2.50 ಪ್ರತಿಶತಕ್ಕೆ ಇಳಿಸಿದೆ.

ಇದನ್ನೂ ಓದಿ : Viral News: ಕಾರಿನ ಬಾನೆಟ್‌ನಲ್ಲಿ ಕುಳಿತು ಮದುವೆ ಮನೆಗೆ ಸವಾರಿ, ವಧು ವಿರುದ್ಧ ಕೇಸ್..!

ಬ್ಯಾಂಕಿಂಗ್ ಸೇವೆಗಳು ಸುಲಭ :

ಗ್ರಾಹಕರು ಹಣ(Money)ವನ್ನು ವರ್ಗಾಯಿಸಲು ಮತ್ತು ಯಾವುದೇ ರೀತಿಯ ಹಣಕಾಸಿನ ವ್ಯವಹಾರಕ್ಕಾಗಿ ಅಂಚೆ ಕಚೇರಿಗೆ ಹೋಗಬೇಕಾಗಿತ್ತು. ಈಗ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ, ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳಿಗೆ ಸುಲಭ ಪ್ರವೇಶವಿದೆ. ಇದರಿಂದ ಆಫೀಸ್ ಗೆ ಬರುವ ಅಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ : PMSBY Scheme : ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 1 ರೂ. ಠೇವಣಿ ಇಡಿ 2 ಲಕ್ಷ ಪಡೆಯಿರಿ: ಹೇಗೆ ವಿವರಗಳಿಗೆ ಇಲ್ಲಿ ನೋಡಿ

ಈ ರೀತಿಯ ಆನ್‌ಲೈನ್ ಖಾತೆ ತೆರೆಯಿರಿ :

1. ಮೊದಲು ನೀವು ಐಪಿಪಿಬಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು 'ಓಪನ್ ಅಕೌಂಟ್'(Open Account) ಕ್ಲಿಕ್ ಮಾಡಿ.
2. ಈಗ ಮೊಬೈಲ್ ಸಂಖ್ಯೆ ಮತ್ತು ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
3. ಇದರ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.
4. ಈಗ ನಿಮ್ಮ ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ನಂಬರ್ (Mobile Number)ಗೆ ಒಟಿಪಿ ಬರುತ್ತದೆ.
5. ಇದರ ನಂತರ ನೀವು ತಾಯಿಯ ಹೆಸರು, ಶೈಕ್ಷಣಿಕ ಅರ್ಹತೆ, ವಿಳಾಸ, ವೈಯಕ್ತಿಕ ವಿವರಗಳನ್ನು ನಮೂದಿಸಬೇಕಾಗುತ್ತದೆ.
6. ಅದನ್ನು ಸಲ್ಲಿಸಿದ ನಂತರ, ಖಾತೆಯನ್ನು ತೆರೆಯಲಾಗುತ್ತದೆ ಮತ್ತು ಅದನ್ನು ಅಪ್ಲಿಕೇಶನ್‌ನಿಂದ ಪ್ರವೇಶಿಸಬಹುದು.

ಇದನ್ನೂ ಓದಿ : Coronavirus Kappa Variant In India: Delta+ ಬಳಿಕ ಇದೀಗ ಕಪ್ಪಾ ವೇರಿಯಂಟ್ ಆತಂಕ, ರಾಜಸ್ಥಾನದಲ್ಲಿ 11 ಪ್ರಕರಣಗಳು ಪತ್ತೆ

ಗಮನಿಸಬೇಕಾದ ಸಂಗತಿಯೆಂದರೆ, ಗರಿಷ್ಠ ಗ್ರಾಹಕರನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ ಇರಿಸುವ ಮಿತಿಯನ್ನು ಬ್ಯಾಂಕ್(Bank) ಹೆಚ್ಚಿಸಿದೆ. ಇದಲ್ಲದೆ ಬ್ಯಾಂಕಿನ ಗ್ರಾಹಕರಿಗೆ ಕ್ಯೂಆರ್ ಕಾರ್ಡ್ ಸೌಲಭ್ಯವನ್ನೂ ನೀಡಲಾಗುತ್ತಿದೆ. ಖಾತೆದಾರರ ದೃಡೀಕರಿಸುವ ಪ್ರಕ್ರಿಯೆಯನ್ನು ಬಯೋಮೆಟ್ರಿಕ್ ಮೂಲಕ ಪೂರ್ಣಗೊಳಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News