Viral Video: ಕೆಲವೇ ಸೆಕೆಂಡ್ ಗಳಲ್ಲಿ ಸಂಪೂರ್ಣ ಜಿಂಕೆಯನ್ನು ಗಬಗಬನೇ ನುಂಗಿ ಹಾಕಿದ ದೈತ್ಯ ಹೆಬ್ಬಾವು

Python Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಹೆಬ್ಬಾವಿನ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹೆಬ್ಬಾವು ಜಿಂಕೆಯನ್ನು ನುಂಗುತ್ತಿದೆ.

Written by - Nitin Tabib | Last Updated : Oct 28, 2022, 12:18 PM IST
  • ಬರ್ಮೀಸ್ ಹೆಬ್ಬಾವುಗಳು 18 ಅಡಿ ಉದ್ದ ಮತ್ತು 200 ಪೌಂಡ್‌ಗಳಷ್ಟು ತೂಗುವ ಏಕೈಕ ದೊಡ್ಡ ಹಾವುಗಳಾಗಿವೆ.
  • ಇಂತಹ ಹೆಬ್ಬಾವುಗಳು ಜಿಂಕೆ ಅಥವಾ ಹತ್ತಿರದ ಇತರ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತವೆ.
Viral Video: ಕೆಲವೇ ಸೆಕೆಂಡ್ ಗಳಲ್ಲಿ ಸಂಪೂರ್ಣ ಜಿಂಕೆಯನ್ನು ಗಬಗಬನೇ ನುಂಗಿ ಹಾಕಿದ ದೈತ್ಯ ಹೆಬ್ಬಾವು title=
Python Swallow Deer Video

Python Viral Video: ಹೆಬ್ಬಾವು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಬರ್ಮೀಸ್ ಹೆಬ್ಬಾವು ಭೂಮಿಯ ಮೇಲಿನ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಅದು ತನ್ನ ಬೇಟೆಯನ್ನು ಉಸಿರುಗಟ್ಟಿಸುವವರೆಗೆ ಅದರ ದೇಹದ ಸುತ್ತಲು ಸುತ್ತುತ್ತದೆ. ಈ ದೈತ್ಯ ಹಾವುಗಳು ತಮ್ಮ ದವಡೆಗಳಲ್ಲಿ ಹಿಗ್ಗಿಸಲಾದ ಅಸ್ಥಿರಜ್ಜುಗಳನ್ನು ಹೊಂದಿದ್ದು, ಅವುಗಳಿಂದ ಅವು ತಮ್ಮ ಆಹಾರವನ್ನು ಸಂಪೂರ್ಣವಾಗಿ ನುಂಗಿ ಹಾಕುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಬ್ಬಾವು ಕೆಲವೇ ಸೆಕೆಂಡುಗಳಲ್ಲಿ ಜಿಂಕೆಯನ್ನು ನುಂಗಿದ ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ-Viral Video: ಮದುವೆ ಮಂಟಪದಲ್ಲಿ ವರನಿಗೆ ಮುತ್ತಿಟ್ಟ ವಧು: ನಾಚಿ ನೀರಾದ ಮದುಮಗ-ವಿಡಿಯೋ ನೋಡಿ

ಬರ್ಮೀಸ್ ಹೆಬ್ಬಾವುಗಳು 18 ಅಡಿ ಉದ್ದ ಮತ್ತು 200 ಪೌಂಡ್‌ಗಳಷ್ಟು ತೂಗುವ ಏಕೈಕ ದೊಡ್ಡ ಹಾವುಗಳಾಗಿವೆ. ಇಂತಹ ಹೆಬ್ಬಾವುಗಳು ಜಿಂಕೆ ಅಥವಾ ಹತ್ತಿರದ ಇತರ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತವೆ.  ಜಿಂಕೆಯನ್ನು ನುಂಗಿದ ಒಂದು ವಾರದ ನಂತರ ಈ ಹೆಬ್ಬಾವಿನ ಹೃದಯ ಮತ್ತು ಯಕೃತ್ತು ಶೇಕಡಾ 40 ರಷ್ಟು ದೊಡ್ಡದಾಗುತ್ತದೆ.

ಇದನ್ನೂ ಓದಿ-Railway New Guidelines: ಹಿರಿಯ ನಾಗರಿಕರಿಗೆ ಭಾರಿ ಉಡುಗೊರೆ ನೀಡಿದ ಭಾರತೀಯ ರೇಲ್ವೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬರ್ಮಾದ ಹೆಬ್ಬಾವು ಇಡೀ ಜಿಂಕೆಯನ್ನು ಕೆಲವೇ ಸೆಕೆಂಡುಗಳಲ್ಲಿ ನುಂಗಿ ಹಾಕಿದೆ. 'beautiful_new_pix' ಪುಟವು Instagram ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ, ಹೆಬ್ಬಾವು ಸತ್ತ ಜಿಂಕೆಯನ್ನು ಕೆಲವೇ ಸೆಕೆಂಡುಗಳಲ್ಲಿ ಬಹಳ ಸುಲಭವಾಗಿ ನುಂಗುತ್ತಿರುವುದನ್ನು ನೀವು ಗಮನಿಸಬಹುದು. ಒಬ್ಬ ಮನುಷ್ಯ ಹಾವಿನ ದೇಹವನ್ನು ಟ್ಯಾಪ್ ಮಾಡುವುದನ್ನು ಸಹ ನೀವು ವಿಡಿಯೋದಲ್ಲಿ ನೋಡಬಹುದು. ಈ ರೀಲ್ ಅನ್ನು 6 ಲಕ್ಷ 20 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಪೋಸ್ಟ್‌ಗೆ 22 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News