DTH, CABLE TV ಬಳಕೆದಾರರಿಗೆ ಹೊಸವರ್ಷದ ಗಿಫ್ಟ್ ನೀಡಿದ TRAI

ಯಾವುದೇ ಒಂದು ಚಾನೆಲ್ ದರ ರೂ.12 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವುಗಳನ್ನು ಚಾನೆಲ್ ಬುಕ್ ನಲ್ಲಿ ಸೇರಿಸಲಾಗುವುದು ಎಂದು TRAI ಸ್ಪಷ್ಟಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ TRAI ಅಧ್ಯಕ್ಷ ಆರ್.ಎಸ್ ಶರ್ಮಾ ಇದನ್ನು ಸ್ಪಷ್ಟಪಡಿಸಿದ್ದಾರೆ.

Written by - Nitin Tabib | Last Updated : Jan 13, 2020, 01:56 PM IST
DTH, CABLE TV ಬಳಕೆದಾರರಿಗೆ ಹೊಸವರ್ಷದ ಗಿಫ್ಟ್ ನೀಡಿದ TRAI title=

ನವದೆಹಲಿ: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಅಂದರೆ TRAI ಕೇಬಲ್ ಟಿವಿ ಹಾಗೂ DTH ಬಳಕೆದಾರರಿಗೆ ಹೊಸವರ್ಷದ ಉಡುಗೊರೆ ನೀಡಿದೆ. ಹೌದು, ಪೇಡ್ ಚಾನೆಲ್ ಗಳ ಗರಿಷ್ಟ ದರವನ್ನು ರೂ.19ರಿಂದ ರೂ.12ಕ್ಕೆ ಇಳಿಕೆ ಮಾಡಿ ಪ್ರಾಧಿಕಾರ ಆದೇಶ ಹೊರಡಿಸಿದೆ. TRAI ಹೊರಡಿಸಿರುವ ಈ ಆದೇಶದ ಪ್ರಕಾರ ಈ ಸೇವೆಗಳಲ್ಲೂ ಒದಗಿಸುವ ಯಾವುದೇ ಕಂಪನಿ ಯಾವುದೇ ಚಾನಲ್ ಗೆ ರೂ.12ಕ್ಕಿಂತ ಹೆಚ್ಚಿನ ಹಣ ಸ್ವೀಕರಿಸುವ ಹಾಗಿಲ್ಲ. ಇದಕ್ಕೂ ಮೊದಲು ಯಾವುದೇ ಒಂದು ಪೇಡ್ ಚಾನೆಲ್ ನ ಗರಿಷ್ಟ ದರ ರೂ.19ಕ್ಕೆ ನಿಗದಿಪಡಿಸಲಾಗಿತ್ತು. ಸೇವಾ ಒದಗಿಸುವವರು ಈ ಮೊದಲು ನೀಡುತ್ತಿದ್ದ ಸೇವಾ ಬುಕ್ ನಲ್ಲಿ ಇನ್ಮುಂದೆ ಯಾವುದೇ ಚಾನಲ್ ಗೆ ನಿಮಗೆ ರೂ.12ಕ್ಕಿಂತ ಹೆಚ್ಚಿನ ದರ ಕಾಣಿಸಿಕೊಳ್ಳುವಂತಿಲ್ಲ ಎಂದು ಪ್ರಾಧಿಕಾರ ಹೇಳಿದೆ. ಈ ಹಿಂದೆ ಪ್ರಕಟಗೊಂಡ ವರದಿಯ ಪ್ರಕಾರ, ಮಾರ್ಚ್ 1ರಿಂದ ಬಳಕೆಗಾರರಿಗೆ ರೂ.130ರಲ್ಲಿ 100 ಫ್ರೀ ಚಾನೆಲ್ ಗಳ ಬದಲಾಗಿ 200 ಫ್ರೀ ಚಾನಲ್ ಗಳನ್ನು ತೋರಿಸಲಾಗುವುದು ಎನ್ನಲಾಗಿತ್ತು.

TRAI ಪ್ರಕಟಿಸಿರುವ ಈ ನೂತನ ಕೇಬಲ್ ಟಿವಿ ಹಾಗೂ DTH ಟ್ಯಾರಿಫ್ ಮಾರ್ಚ್ 1, 2020ರಿಂದ ಜಾರಿಗೆ ಬರಲಿದೆ. ಈ ಹೊಸ ಟ್ಯಾರಿಫ್ ವ್ಯವಸ್ಥೆಯಲ್ಲಿ ಬಳಕೆದಾರರಿಗೆ ರೂ.130(ಟ್ಯಾಕ್ಸ್ ರಹಿತ)ಕ್ಕೆ 200 ಫ್ರೀ-ಟು ಏರ್ ಚಾನೆಲ್ ಗಳನ್ನು ನೀಡಲಾಗುತ್ತಿದೆ. ಮೊದಲು ಈ ಪ್ಯಾಕೇಜ್ ನಲ್ಲಿ 100 ಫ್ರೀ-ಟು ಏರ್ ಚಾನಲ್ ಗಳನ್ನು ನೀಡಲಾಗುತ್ತಿತ್ತು. ಇಂದು ಹೊರಡಿಸಲಾಗಿರುವ ಈ ಆದೇಶದ ಪ್ರಕಾರ ರೂ.12 ಅಥವಾ ಅದಕ್ಕಿಂತ ಹೆಚ್ಚು ಚಾರ್ಜ್ ಮಾಡುವ ಚಾನೆಲ್ ಗಳನ್ನು ಚಾನೆಲ್ ಗಳನ್ನು ಚಾನೆಲ್ ಬುಕ್ ನಿಂದ ಹೊರಗಿಡಲು ಸೂಚಿಸಲಾಗಿದೆ. ಈ ಚಾನೆಲ್ ಗಳನ್ನು ಗ್ರಾಹಕರು ಸ್ಟಾಂಡ್ ಅಲೋನ್ ಚಾನೆಲ್ ಗಳ ಪಟ್ಟಿಯಿಂದ ಆಯ್ಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲ ಜನವರಿ 15ರೊಳಗೆ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಮ್ಮ-ತಮ್ಮ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲು ಕೂಡ ಕೇಬಲ್ ಹಾಗೂ DTH ಸೇವೆ ಒದಗಿಸುವ ಕಂಪನಿಗಳಿಗೆ TRAI ಆದೇಶಿಸಿದೆ. 

ಕಳೆದ ವರ್ಷವಷ್ಟೇ TRAI ಕೇಬಲ್ ಹಾಗೂ DTH ಸಂಸ್ಥೆಗಳಿಗೆ ತನ್ನ ಹೊಸ ಟ್ಯಾರಿಫ್ ನೀತಿಯನ್ನು ಪ್ರಕಟಿಸಿತ್ತು. ಈ ನೀತಿಯ ಪ್ರಕಾರ ವೀಕ್ಷಕರು ತಾವು ನೋಡ ಬಯಸುವ ಚಾನೆಲ್ ಗಳಿಗಾಗಿ ಮಾತ್ರವೇ ಹಣ ನೀಡಬಹುದಾಗಿತ್ತು. ಈ ನೀತಿಯ ಅನ್ವಯ ಬಳಕೆದಾರರಿಗೆ DTH ಅಥವಾ ಕೇಬಲ್ ಟಿವಿ ಸಂಸ್ಥೆಗಳು ಮೊದಲೇ ನಿಗದಿಪಡಿಸಿದ ಪ್ಯಾಕೇಜ್ ಗಳಲ್ಲಿ ತಮ್ಮ ನೆಚ್ಚಿನ ಚಾನೆಲ್ ಗಳು ನೋಡಲು ಸಿಗುತ್ತಿದ್ದವು. ಇದರಿಂದ ಗ್ರಾಹಕರು ನೋಡಲು ಬಯಸದ ಚಾನೆಲ್ ಗಳಿಗೂ ಸಹ ಹಣ ನೀಡಬೇಕಾಗುತ್ತಿತ್ತು. ಈ ಹೊಸ ನೀತಿಯ ಅನ್ವಯ ಗ್ರಾಹಕರಿಗೆ ಸದ್ಯ ರೂ.130ಕ್ಕೆ 100 ಫ್ರೀ-ಟು ಏರ್ ಚಾನೆಲ್ ಗಳು ಸಿಗುತ್ತಿವೆ. ಇವುಗಳನ್ನು ಹೊರತುಪಡಿಸಿ ಒಂದು ವೇಳೆ ಗ್ರಾಹಕರು ಯಾವುದೇ ಪೇಡ್ ಚಾನೆಲ್ ಅನ್ನು ನೋಡಬಯಸಿದರೆ, ಅದಕ್ಕಾಗಿ ಪ್ರತ್ಯೇಕವಾಗಿ ಹಣ ಸಂದಾಯ ಮಾಡಬೇಕು.

Trending News