Video: ತಾಯಿ ವಿರುದ್ಧ ದೂರು ನೀಡಲು ಠಾಣೆ ತಲುಪಿದ ಪುಟಾಣಿ, ದಾಖಲಿಸಿದ ದೂರು ಏನು ನೀವೇ ಕೇಳಿ

Viral Video: ಪುಟಾಣಿ ಮಗುವಿನ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪುಟ್ಟ ಬಾಲಕ ತನ್ನ ತಾಯಿಯ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಬಳಿ ದೂರು ನೀಡುತ್ತಿದ್ದಾನೆ. ಮಗುವಿನ ಈ ಕ್ಯೂಟ್ ಪರಿ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ನೋಡಿ ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ.  

Written by - Nitin Tabib | Last Updated : Oct 18, 2022, 07:10 PM IST
  • ಸಾಮಾಜಿಕ ಮಾಧ್ಯಮ ಪ್ರಪಂಚ ತುಂಬಾ ವಿಚಿತ್ರವಾಗಿದೆ,
  • ಇಲ್ಲಿ ಯಾವಾಗ ಏನು ನೋಡಲು ಸಿಗುತ್ತದೆ ಮತ್ತು ಕೇಳಲು ಸಿಗುತ್ತದೆ ಎಂಬುದು ಹೇಳೋದಕ್ಕೆ ಆಗುವುದಿಲ್ಲ.
  • ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡಿದ ಸಂಗತಿಯ ಮೇಲೆ ನಮಗೆ ವಿಶ್ವಾಸ ಉಂಟಾಗುವುದಿಲ್ಲ.
Video: ತಾಯಿ ವಿರುದ್ಧ ದೂರು ನೀಡಲು ಠಾಣೆ ತಲುಪಿದ ಪುಟಾಣಿ, ದಾಖಲಿಸಿದ ದೂರು ಏನು ನೀವೇ ಕೇಳಿ title=
Viral Video

Little Boy Viral Video: ಸಾಮಾಜಿಕ ಮಾಧ್ಯಮ ಪ್ರಪಂಚ ತುಂಬಾ ವಿಚಿತ್ರವಾಗಿದೆ, ಇಲ್ಲಿ ಯಾವಾಗ ಏನು ನೋಡಲು ಸಿಗುತ್ತದೆ ಮತ್ತು ಕೇಳಲು ಸಿಗುತ್ತದೆ ಎಂಬುದು ಹೇಳೋದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನೋಡಿದ ಸಂಗತಿಯ ಮೇಲೆ ನಮಗೆ ವಿಶ್ವಾಸ ಬರೋದಿಲ್ಲ. ಅಂತಹುದ್ದೆ ಒಂದು ಮುಗ್ಧ ಮಗುವಿನ ಪುಟಾಣಿಯ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ, ವಿಡಿಯೋ ನೋಡಿ ನೀವೂ ನಿಮ್ಮ ಮೂಗಿನ ಮೇಲೆ ಬೆರಳಿಡುವಿರಿ. ಮಗುವಿನ ಆ ಮುಗ್ಧ ಮಾತುಗಳನ್ನು ಕೇಳಿ ನೀವೂ ಕೂಡ ಹೊಟ್ಟೆ ಹಿಡಿದು ನಗುವಿರಿ. ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಪದೇ ಪದೇ ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ-Shocking Video: ಸಣ್ಣ ಜಗಳ, ಚಲಿಸುತ್ತಿರುವ ರೈಲಿನಿಂದ ಸಹ ಪ್ರಯಾಣಿಕನನ್ನು ಹೊರಕ್ಕೆ ಎಸೆದ ವ್ಯಕ್ತಿ

ಚಿಕ್ಕ ಮಕ್ಕಳನ್ನು ‘ದೇವರ’ ರೂಪ ಎನ್ನುತ್ತಾರೆ. ಏಕೆಂದರೆ, ಅವರಲ್ಲಿ ನಿಮಗೆ ಯಾವುದೇ ರೀತಿಯ ಮೊಸತನ ಕಂಡು ಬರುವುದಿಲ್ಲ. ಮಕ್ಕಳು ಸಾಮಾನ್ಯವಾಗಿ ತಮ್ಮ ಮುಗ್ಧತೆಯಿಂದ ಜನರ ಹೃದಯವನ್ನು ಗೆಲ್ಲುತ್ತಾರೆ. ಆದರೆ, ಕೆಲವೊಮ್ಮೆ ಮಕ್ಕಳು ಮಾಡುವ ಕೃತ್ಯವನ್ನು ಕಂಡು ಹಿರಿಯರೂ ಕೂಡ ಬೆಚ್ಚಿ ಬೀಳುತ್ತಾರೆ. ಈ ವೈರಲ್ ವೀಡಿಯೊದಲ್ಲಿ, ಬಳಕೆದಾರರು ಮಗು ಮಾಡಿರುವ ಕೃತ್ಯವನ್ನು ನೋಡಿ ದಂಗಾಗಿದ್ದಾರೆ. ಮಗುವಿನ ವಯಸ್ಸು ಕೇವಲ ಎರಡು ವರ್ಷ ಎಂದು ಹೇಳಲಾಗುತ್ತಿದೆ. ತನ್ನ ತಾಯಿಯ ವಿರುದ್ಧ ದೂರು ದಾಖಲಿಸಲು ಅದು ಪೊಲೀಸ್ ಠಾಣೆಗೆ ಬಂದಿದೆ. ಮಗು ತನ್ನ ತಾಯಿಯ ಬಗ್ಗೆ ಮಹಿಳಾ ಪೊಲೀಸ್ ಉದ್ಯೋಗಿಗೆ ದೂರು ನೀಡುತ್ತಿರುವುದನ್ನು ನೀವು ವೀಡಿಯೊದಲ್ಲಿ ಕಾಣಬಹುದು. ತನ್ನ ತಾಯಿಯ ಕಳ್ಳತನದ ಚೇಷ್ಟೆಗಳಿಂದ ತನಗೆ ತುಂಬಾ ಬೇಸರವಾಗಿದೆ ಎಂದು ಮಗು ಹೇಳುತ್ತಿದೆ. ತಾಯಿ ನನ್ನ ಚಾಕೊಲೇಟ್ ಕದಿಯುತ್ತಾಳೆ  ಆಕೆಯನ್ನು ಜೈಲಿಗೆ ಹಾಕಿ ಎಂದು ಮಗು ಮಹಿಳಾ ಪೇದೆಗೆ ದೂರು ನೀಡುತ್ತಿದೆ. ಸಾಕಷ್ಟು ತಮಾಷೆಯಿಂದ ಕೂಡಿದ ಈ ವಿಡಿಯೋವನ್ನು ಒಮ್ಮೆ ನೀವೂ ನೋಡಿ... ವಿಶೇಷ ಎಂದರೆ ಮಗು ನೀಡುತ್ತಿರುವ ದೂರು ಕೇಳಿ ಮಹಿಳಾ ಪೆದೆಗೂ ಕೂಡ ನಗು ತಡೆಯೋದಕ್ಕೆ ಆಗುತ್ತಿಲ್ಲ.

ಇದನ್ನೂ ಓದಿ-Viral Video: ವರ ಪಕ್ಕದಲ್ಲಿರುವಾಗಲೇ ಬಂದು ವಧುವಿಗೆ ಪ್ರಪೋಸ್ ಮಾಡಿದ ಯುವಕ: ಮುಂದೇನಾಯ್ತು!

ಮಗುವಿನ ಮುಗ್ಧತೆಯನ್ನು ನೋಡಿ ನೀವು ಬೆಚ್ಚಿ ಬಿದ್ದಿರಬಹುದು. ಖಂಡಿತವಾಗಿಯೂ ನೀವು ಈ ವೀಡಿಯೊವನ್ನು ಪದೇ ಪದೇ ವೀಕ್ಷಿಸಲು ಬಯಸುವಿರಿ. ಜನರು ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ '@priyarajputlive' ಹೆಸರಿನೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಇದೇ ವೇಳೆ ಸಾವಿರಾರು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಕೆಲವರು ಮಗುವನ್ನು ಹೊಗಳುತ್ತಿದ್ದರೆ. ಉಳಿದವರು ಮಗು ಸಕತ್ ತಮಾಷೆಯ ಸೀನ್ ಸೃಷ್ಟಿಸಿದೆ ಎನ್ನುತ್ತಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News