Wedding Video: ಮದುವೆಯ ದಿನವೇ ವರ ಮಾಡಿದ ಈ ಕೆಲಸ ಕಂಡು ವಧು ಕೆಂಡಾಮಂಡಲ

Wedding Video: ಹಲವು ಬಾರಿ ಸಣ್ಣ ಪುಟ್ಟ ವಿಷಯಗಳು ಕೂಡ ತುಂಬಾ ನಗು ತರಿಸುತ್ತವೆ. ಅದರಲ್ಲೂ ಮದುವೆಯಂತಹ ವಿಶೇಷ ಸಮಾರಂಭಗಳಲ್ಲಿ ಕಂಡು ಬರುವ ಕೆಲವು ಸನ್ನಿವೇಷಗಳು ಬಹಳ ಬೇಗ ಆಕರ್ಷಣೆಗೆ ಒಳಗಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಹಲವು ವಿಡಿಯೋಗಳನ್ನು ನಾವು ಕಾಣಬಹುದು.

Written by - Yashaswini V | Last Updated : Sep 30, 2021, 01:05 PM IST
  • ವಧುವಿನಿಂದ ಕೊಂಚ ದೂರದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಿರುವ ವರ
  • ವರನ ಅಕ್ಕ-ಪಕ್ಕದಲ್ಲಿ ನಿಂತಿರುವ ಇಬ್ಬರು ಹುಡುಗಿಯರು
  • ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ
Wedding Video: ಮದುವೆಯ ದಿನವೇ ವರ ಮಾಡಿದ ಈ ಕೆಲಸ ಕಂಡು ವಧು ಕೆಂಡಾಮಂಡಲ title=
Wedding Viral Video

Wedding Video: ಮದುವೆ ಎಂದರೆ ಒಂದು ರೀತಿಯ ಸಡಗರ, ಸಂಭ್ರಮ. ಮದುವೆ ಮನೆಯಲ್ಲಿ ವಧು-ವರ ಇಬ್ಬರೂ ಆಕರ್ಷಣೆಯ ಕೇಂದ್ರ ಬಿಂದು. ಹಲವರು ವಧುವಿನ ಅಲಂಕಾರದ ಬಗ್ಗೆ ಒಂದು ರೀತಿಯ ವಿಶೇಷ ಕುತೂಹಲವನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ಮದುವೆಯಲ್ಲಿ ಅವರ ಆವ-ಭಾವ ಹೇಗಿರುತ್ತದೆ ಎಂಬುದನ್ನು ಹೆಚ್ಚಾಗಿ ಗಮನಿಸುತ್ತಾರೆ. ಪ್ರತಿಯೊಬ್ಬರೂ ವಧುವರರ ಜೊತೆ ಫೋಟೋ ಅಥವಾ ಸೆಲ್ಫಿ ಕ್ಲಿಕ್ಕಿಸಲು ಬಯಸುತ್ತಾರೆ. ಆದರೆ, ಇಂತಹ ಕೆಲವು ಸನ್ನಿವೇಶಗಳು ಹಲವೊಮ್ಮೆ ವೈರಲ್ ಆಗುವುದೂ ಉಂಟು. ಸಾಮಾನ್ಯವಾಗಿ ಎಲ್ಲರೂ ಕೂಡ ಮದುವೆ ಆದ ಮೇಲೆ ಪತಿ ಪತ್ನಿಗೆ ಹೆದರುತ್ತಾನೆ ಎಂಬುದನ್ನು ನಾವು ಕೇಳಿರಬಹುದು. ಆದರೆ ಮದುವೆ ಮನೆಯೊಂದರಲ್ಲಿ ಮದುವೆಯ ದಿನವೇ ವರನೊಬ್ಬ ವಧುವಿನ ಕೋಪಕ್ಕೆ ತುತ್ತಾದಾಗ ಅದು ಹೇಗಿರುತ್ತೆ... ಸದ್ಯ ಇಂತಹ ಒಂದು ರೋಚಕ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 

ಈ ವೆಡ್ಡಿಂಗ್ ವಿಡಿಯೋದಲ್ಲಿ (Wedding Video) ಇದೇ ರೀತಿಯ ದೃಶ್ಯವೊಂದು ಕಂಡುಬಂದಿದ್ದು, ವರ ವಧುವಿನಿಂದ ಕೊಂಚ ದೂರದಲ್ಲಿ ನಿಂತು ಇಬ್ಬರು ಹುಡುಗಿಯರೊಂದಿಗೆ ಮಾತನಾಡುತ್ತಿದ್ದಾನೆ. ಈ ಸಂದರ್ಭದಲ್ಲಿ  ವರನ ಮುಖದಲ್ಲಿನ ನಗು ವಿಭಿನ್ನವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ವರನ ಜೊತೆ ಫೋಟೊ ತೆಗೆಸಿಕೊಳ್ಳುತ್ತಿರುವುದನ್ನು ಕಾಣಬಹುದು. 

 
 
 
 

 
 
 
 
 
 
 
 
 
 
 

A post shared by Nikan (@nikan_dusky)

ಇದನ್ನೂ ಓದಿ- Video Viral- ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಿಶೇಷ ರೀತಿಯಲ್ಲಿ ಪ್ರೇರೇಪಿಸುತ್ತಿರುವ ವ್ಯಕ್ತಿ ವಿಡಿಯೋ ವೈರಲ್

ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿರುವ ಈ ವೆಡ್ಡಿಂಗ್ ವಿಡಿಯೋದಲ್ಲಿ ವರನ ಅಕ್ಕ-ಪಕ್ಕದಲ್ಲಿ ಇಬ್ಬರು ಹುಡುಗಿಯರನ್ನು ಕಾಣಬಹುದು. ಇವರಲ್ಲಿ ಓರ್ವ ಹುಡುಗಿ ವರನಿಗೆ ಹೂವು ನೀಡುತ್ತಿದ್ದಾಳೆ. ಇನ್ನೋರ್ವ ಹುಡುಗಿ ವರನ ಕುತ್ತಿಗೆಗೆ ಹಾಕಿರುವ ಹಾರವನ್ನು ಹಿಡಿದಿದ್ದಾಳೆ. ಈ ಸಮಯದಲ್ಲಿ, ವರನ ಸಂತೋಷವು ವಿಭಿನ್ನವಾಗಿ ಗೋಚರಿಸಿತು. ಈ ವೇಳೆ ಇದ್ದಕ್ಕಿದ್ದಂತೆ ನಿಧಾನವಾಗಿ ಕ್ಯಾಮೆರಾಮನ್ ಸ್ವಲ್ಪ ದೂರದಲ್ಲಿ ನಿಂತಿದ್ದ ವಧುವಿನ ಕಡೆಗೆ ಕ್ಯಾಮೆರಾವನ್ನು ತಿರುಗಿಸಿದಾಗ ಆಕೆಯ ಕೋಪವನ್ನು ಕಾಣಬಹುದು. 

ಇದನ್ನೂ ಓದಿ- Viral Video: ಬೆಕ್ಕಿನೊಂದಿಗೆ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ನೋಡಿ...

ಕೋಪದಿಂದ ಕೆಂಪಾದ ವಧು:
ವಿಡಿಯೋದಲ್ಲಿ  (Viral Video) ವಧುವಿನ ಮುಖ ನೋಡಿಯೇ ಆಕೆ ಕೊಪಗೊಂಡಿರುವುದನ್ನು ಮನಗಾಣಬಹುದು. ಆಕೆಯನ್ನು ನೋಡಿದರೆ ವರ ಈಗ ಈಕೆಯ ಬಳಿ ಬಂದಾಗ ವಧು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನು ನೀವೂ ಊಹಿಸಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ nikan_dusky ಹೆಸರಿನ ವ್ಯಕ್ತಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News