Cabinet Expansion ಸಚಿವನಾಗಬಾರದು ಎಂದು ನಿರ್ಣಯ ಮಾಡಿದ್ದೇನೆ : ಯತ್ನಾಳ್

7 ಶಾಸಕರು ಯಡಿಯೂರಪ್ಪ ಮಂತ್ರಿ ಮಂಡಲ ಸೇರುವ  ಮುಹೂರ್ತ ಸನ್ನಿಹಿತವಾಗಿದೆ. ಇದೇ ವೇಳೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹೇಳಿಕೆ ಗಮನ ಸೆಳೆದಿದೆ.

Written by - Zee Kannada News Desk | Last Updated : Jan 11, 2021, 01:17 PM IST
  • ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
  • ಯಡಿಯೂರಪ್ಪ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ. ಸಚಿವನಾಗಬಾರದು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದ ಯತ್ನಾಳ್ .
  • ನಾನು ಸಚಿವನಾಗಬೇಕು ಎಂದು ಯಡಿಯೂರಪ್ಪ ಹೇಳುವುದಿಲ್ಲ - ಯತ್ನಾಳ್
Cabinet Expansion ಸಚಿವನಾಗಬಾರದು ಎಂದು ನಿರ್ಣಯ ಮಾಡಿದ್ದೇನೆ : ಯತ್ನಾಳ್ title=
ನಾನು ಸಚಿವನಾಗಬೇಕು ಎಂದು ಯಡಿಯೂರಪ್ಪ ಹೇಳುವುದಿಲ್ಲ - ಯತ್ನಾಳ್(file photo)

ಬೆಂಗಳೂರು/ವಿಜಯಪುರ : ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 7 ಶಾಸಕರು ಯಡಿಯೂರಪ್ಪ ಮಂತ್ರಿ ಮಂಡಲ ಸೇರುವ  ಮುಹೂರ್ತ ಸನ್ನಿಹಿತವಾಗಿದೆ. ಇದೇ ವೇಳೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹೇಳಿಕೆ ಗಮನ ಸೆಳೆದಿದೆ. 

“ಸಚಿವನಾಗಬಾರದು ಎಂದು ನಿರ್ಧರಿಸಿದ್ದೇನೆ.”
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಯಡಿಯೂರಪ್ಪ (Yadiyurappa) ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ. ಸಚಿವನಾಗಬಾರದು ಎಂದು ನಿರ್ಧರಿಸಿದ್ದೇನೆ ಎಂದು ಯತ್ನಾಳ್ (Yatnal) ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ನಾನು ಸಚಿವನಾಗಬೇಕು ಎಂದು ಯಡಿಯೂರಪ್ಪ ಹೇಳುವುದಿಲ್ಲ. ಅಷ್ಟೊಂದು ವಿಶ್ವಾಸ ನನಗೆ ಅವರ ಮೇಲಿದೆ ಎಂದು ಕುಟುಕಿದರು 

ಇದನ್ನೂ ಓದಿ : Cabinet Expansion : ಯಡಿಯೂರಪ್ಪ ಮಾತು ತಪ್ಪಲ್ಲ – ಮುನಿರತ್ನ; ಲಾಬಿ ಮಾಡಲ್ಲ – ಶಾಸಕ ತಿಪ್ಪಾರೆಡ್ಡಿ

“ಯೋಗ್ಯತೆಯ ಆಧಾರದಲ್ಲಿ ಕೇಂದ್ರದಲ್ಲಿ ಸಚಿವನಾಗಿದ್ದೆ”
ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ, ಯೋಗ್ಯತೆಯ ಮಾನದಂಡದ ಮೇಲೆ ಈ ಹಿಂದೆ ಕೇಂದ್ರದಲ್ಲಿ ಸಚಿವನಾಗಿದ್ದೆ. ನನ್ನ ಬಯೋಡಾಟ ಪಿಎಂಒ, (PMO) ಗೃಹ ಸಚಿವರ ಕಾರ್ಯಾಲಯ, ನಡ್ಡಾ (Nadda) ಕಚೇರಿಯಲ್ಲಿದೆ. ಸಚಿವ ಸ್ಥಾನ ಸಿಗದಿದ್ದರೂ ಚಿಂತೆಯಿಲ್ಲ, ರಾಜ್ಯದ ಕಲ್ಯಾಣವೇ ನನ್ನ ಗುರಿ ಎಂದು ಹೇಳಿದ್ದಾರೆ ಯತ್ನಾಳ್. 

ಪಕ್ಷದ ಶಿಸ್ತು ಮೀರಿಲ್ಲ – ಯತ್ನಾಳ್
ಪಕ್ಷದ ಶಿಸ್ತು ಉಲ್ಲಂಘಿಸಿರುವ ಆರೋಪದ ಮೇಲೆ, ಶಿಸ್ತು ಸಮಿತಿ ಅವರ ವಿರುದ್ಧ ನೊಟೀಸ್ (Notice) ನೀಡಲು ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷದ ಶಿಸ್ತು ಉಲ್ಲಂಘಿಸಿಲ್ಲ. ಶಿಸ್ತು ಸಮಿತಿ ನೊಟೀಸ್ ನೀಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಇದುವರೆಗೆ ನನಗೆ ಯಾವುದೇ ನೊಟೀಸ್ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : Cabinet Expansion ಸಪ್ತ ನಾಯಕರ ಸಂಪುಟ ಎಂಟ್ರಿ ಪಕ್ಕಾ, ಆರು ಶಾಸಕರಿಗೆ ಮಂತ್ರಿಗಿರಿ ಬಹುತೇಕ ಖಚಿತ, ಉಳಿದ ಒಂದು ಸ್ಥಾನಕ್ಕೆ 12 ಮಂದಿ ಲಾಬಿ

ಯಡಿಯೂರಪ್ಪ ಕಾರ್ಯವೈಖರಿಯ ಬಗ್ಗೆ ಸದಾ ಟೀಕಿಸುವ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ವಿರೋಧಿ ಬಣದಲ್ಲಿಯೇ ಗುರುತಿಸಿಕೊಂಡವರು. ರಾಜ್ಯದಲ್ಲಿ ಸಂಪುಟ ವಿಸ್ತರಣೆ (Cabinet Expansion) ಗರಿಗೆದರಿರುವ ಹಿನ್ನೆಲೆಯಲ್ಲಿ ಯತ್ನಾಳ್ ಮಾತು ಮಹತ್ವ ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News