Congress MLA : 'ಹಿಜಾಬ್ ಆಯ್ತು, ಹಲಾಲ್ ಆಯ್ತು, ಇದೀಗ ಮಸೀದಿಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ'

ಚುನಾವಣೆ ಹತ್ತಿರ ಬಂತು.. ಬಿಜೆಪಿಯವರು ಒಂದಿಲ್ಲವೊಂದು ವಿವಾದ ಹುಟ್ಟು ಹಾಕ್ತಾರೆ ಎಂದರು. 

Written by - Zee Kannada News Desk | Last Updated : Apr 4, 2022, 01:35 PM IST
  • ಜನರ ಮಧ್ಯೆ ಜಗಳ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದೆ
  • ಮಸೀದಿಗಳ ಮೇಲಿನ ಮೈಕ್‌ಗಳ ತೆರವಿಗೆ ಶ್ರೀರಾಮಸೇನೆ ಆಗ್ರಹ ವಿಚಾರ
  • ರಂಜಾನ್ ಸಂದರ್ಭದಲ್ಲಿ ಸೈರನ್ ಕೊಡೊದು ಧಾರ್ಮಿಕ ಆಚರಣೆಗಳಲ್ಲಿ ಒಂದು
Congress MLA : 'ಹಿಜಾಬ್ ಆಯ್ತು, ಹಲಾಲ್ ಆಯ್ತು, ಇದೀಗ ಮಸೀದಿಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ' title=

ಕಲಬುರಗಿ : ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲಿ ವಿಫಲವಾಗುತ್ತಿದೆ. ಜನರ ಮಧ್ಯೆ ಜಗಳ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಹಿಜಾಬ್ ಆಯ್ತು.. ಹಲಾಲ್ ಆಯ್ತು.. ಇದೀಗ ಮಸೀದಿಗಳ ಮೇಲೆ ಕಣ್ಣು ಬಿದ್ದಿದೆ ಎಂದು ಕಾಂಗ್ರೆಸ್ ಶಾಸಕಿ ಖನಿಜ್ ಫಾತೀಮಾ ಹೇಳಿದ್ದಾರೆ.

ನಗರದಲ್ಲಿ ಮಸೀದಿಗಳ ಮೇಲಿನ ಮೈಕ್‌ಗಳ ತೆರವಿಗೆ ಶ್ರೀರಾಮಸೇನೆ ಆಗ್ರಹ ವಿಚಾರವಾಗಿ ಮಾತನಾಡಿದ ಶಾಸಕಿ ಖನಿಜ್ ಫಾತೀಮಾ(Kaneez Fatima), ಚುನಾವಣೆ ಹತ್ತಿರ ಬಂತು.. ಬಿಜೆಪಿಯವರು ಒಂದಿಲ್ಲವೊಂದು ವಿವಾದ ಹುಟ್ಟು ಹಾಕ್ತಾರೆ ಎಂದರು. 

ಇದನ್ನೂ ಓದಿ : ವೀರಭದ್ರೇಶ್ವರ ರಥೋತ್ಸವದ ವೇಳೆ ಕಳಚಿದ ರಥದ ಕಳಸ..! ಇದು ಅಪಶಕುನದ ಸಂಕೇತವೇ?

ಮಸೀದಿಗಳ ಮೇಲೆ ಮೈಕ್ ನಿನ್ನೆ ಮೊನ್ನೆಯದು ಅಲ್ಲ. ಏಕಾಏಕಿ ಈ ವಿವಾದ ಯಾಕೆ ಬಂದಿದೆ? ಸರ್ಕಾರ ಈ ಬೇಡಿಕೆಗೆ ಮಣಿಯಬಾರದು. ಅಜಾ ಹೇಳಿದ ಮೇಲೆಯೇ ಜನರು ಎಚ್ಚರವಾಗ್ತಾರೆ. ರಂಜಾನ್(Ramadan) ಸಂದರ್ಭದಲ್ಲಿ ಸೈರನ್ ಕೊಡೊದು ಧಾರ್ಮಿಕ ಆಚರಣೆಗಳಲ್ಲಿ ಒಂದು. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತವೆ, ಆದರೆ ಪೂರ್ಣ ಪ್ರಮಾಣದಲ್ಲಿ ಅಜಾ ನಿಲ್ಲಿಸಲು ಆಗಲ್ಲ. ಆದರೆ ಧಾರ್ಮಿಕ ಭಾವನೆಗಳಿಗೆ ಮನ್ನಣೆ ನೀಡಿ ಮೈಕ್ ಸೌಂಡ್ ಕಡಿಮೆ ಇಟ್ಟು ಅಜಾ ಕೊಡಲು ಅನುವು ಮಾಡಿಕೊಡಬೇಕು ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News