Instagram Fraud: ಮಾಡೆಲಿಂಗ್ ಹೆಸರಲ್ಲಿ ಯುವತಿಯರ ಫೋಟೋ ಪಡೆದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವ ಅಂದರ್..!

ಆರೋಪಿ ಯುವತಿಯರು ಕಳುಹಿಸುತ್ತಿದ್ದ ಅರೆಬೆತ್ತಲೆ ಫೋಟೊವನ್ನು ಅಶ್ಲೀಲ ಚಿತ್ರಗಳಿಗೆ ಮಾರ್ಫಿಂಗ್ ಮಾಡಿ ಪುನಃ ಅದೇ ಯುವತಿಯರ ವಾಟ್ಸಾಪ್ ಗೆ ಕಳುಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ.

Written by - Zee Kannada News Desk | Last Updated : Jan 12, 2022, 04:58 PM IST
  • 20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ 28 ವರ್ಷದ ಪ್ರಪಂಚನ್ ಬಂಧನ
  • ಮಾಡಲಿಂಗ್‌ ಹೆಸರಲ್ಲಿ ಯುವತಿಯರ ಫೋಟೋ ಪಡೆದು ಮಾರ್ಫಿಂಗ್‌ ಮಾಡಿದ್ದ
  • ನೊಂದ ಯುವತಿಯೊಬ್ಬಳು ಹಲಸೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು
Instagram Fraud: ಮಾಡೆಲಿಂಗ್ ಹೆಸರಲ್ಲಿ ಯುವತಿಯರ ಫೋಟೋ ಪಡೆದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವ ಅಂದರ್..! title=
ಯುವತಿಯರಿಗೆ ವಂಚಿಸಿದ್ದ ಆರೋಪಿ ಬಂಧನ

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವತಿಯರ ಸೋಗಿನಲ್ಲಿ ನಕಲಿ ಖಾತೆ(Fake Instagram Account) ತೆರೆದು, ಮಾಡೆಲ್ ಮಾಡಿಸುವುದಾಗಿ ಯುವತಿಯರ ಅರೆಬೆತ್ತಲೆ ಫೋಟೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಹಲಸೂರು ನಿವಾಸಿ ಪ್ರಪಂಚನ್ (28) ಬಂಧಿತ ಆರೋಪಿ.

ಪ್ರಪಂಚನ್ ಯುವತಿಯರ ಫೋಟೋ ತೆಗೆಯುವುದಾಗಿ ನಕಲಿ ಇನ್‌ಸ್ಟಾಗ್ರಾಂ ಖಾತೆ(Instagram Fraud) ತೆರೆದಿದ್ದ. ತಾನು ಮಾಡೆಲಿಂಗ್ ಮಾಡುತ್ತಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಬರಲು ಆಸಕ್ತಿಯಿರುವವರು ನನ್ನನ್ನು ಸಂಪರ್ಕಿಸಬಹುದು ಎಂದು ಪೋಸ್ಟ್ ಹಾಕಿದ್ದ. ಆತನ ಇನ್‌ಸ್ಟಾಗ್ರಾಂ ಖಾತೆಗೆ ಭೇಟಿ ನೀಡುತ್ತಿದ್ದ ಹಲವು ಯುವತಿಯರು ಇದನ್ನು ನಂಬಿ ಆತನಿಗೆ ಸಂದೇಶ ಕಳುಹಿಸುತ್ತಿದ್ದರು. ಸಂದೇಶ ಕಳಿಸಿದ ಯುವತಿಯರಿಗೆ ತನ್ನ ಮೊಬೈಲ್ ನಂಬರ್ ಕಳಿಸುತ್ತಿದ್ದ. ಯುವತಿಯರು ಸಂಪರ್ಕಿಸಿದ ಕೂಡಲೇ ಮಾಡೆಲಿಂಗ್‌ಗೆ ಅಗತ್ಯವಿರುವ ಅರೆಬೆತ್ತಲೆ ಫೋಟೋ ಕಳುಹಿಸುವಂತೆ ಸೂಚಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Tecno Smartphone: ಕೇವಲ 6 ಸಾವಿರ ರೂ.ಗೆ ಅದ್ಭುತ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್‌ಫೋನ್..!

ಯುವತಿಯರು ಕಳುಹಿಸುತ್ತಿದ್ದ ಅರೆಬೆತ್ತಲೆ ಫೋಟೊವನ್ನು ಅಶ್ಲೀಲ ಚಿತ್ರಗಳಿಗೆ(Porn Images)ಮಾರ್ಫಿಂಗ್ ಮಾಡಿ ಪುನಃ ಅದೇ ಯುವತಿಯರ ವಾಟ್ಸಾಪ್ ಗೆ ಕಳುಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಆತಂಕಕ್ಕೊಳಗಾದ ಕೆಲ ಯುವತಿಯರು ಆರೋಪಿ ಪ್ರಪಂಚನ್ ಹೇಳಿದ ಬ್ಯಾಂಕ್ ಖಾತೆಗೆ ಆನ್‌ಲೈನ್(Online Fraud) ಮೂಲಕ ಹಣ ಕಳುಹಿಸಿದ್ದಾರೆ. ಮೊದಲು 10 ಸಾವಿರ ರೂ. ಕಳುಹಿಸುವಂತೆ ಸೂಚಿಸಿ ನಂತರ ಹಂತ-ಹಂತವಾಗಿ 1 ಲಕ್ಷ ರೂ.ವರಗೆ ಹಣ ವಸೂಲು ಮಾಡುತ್ತಿದ್ದ. ಇದುವರೆಗೂ 20ಕ್ಕೂ ಅಧಿಕ ಯುವತಿಯರು ಆರೋಪಿಯ ಬಲೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ದೊರೆತಿದೆ ಎಂದು ತಿಳಿದುಬಂದಿದೆ.

ಆರೋಪಿಯ ವಿರುದ್ಧ ದೂರು

ತಾನು ಮಾಡೆಲ್(Models) ಎಂದು ಇನ್‌ಸ್ಟಾಗ್ರಾಂನಲ್ಲಿ ಆರೋಪಿ ಯುವತಿಯರ ಫೋಟೋಗಳನ್ನು ಹಾಕಿ ಕೆಲ ಫೇಕ್ ಇನ್ಸ್ಟಾಗ್ರಾಮ್ ಖಾತೆ(Fake Instagram Account) ಸೃಷ್ಟಿಸಿದ್ದ. ಇದನ್ನು ನೋಡಿ ಇದು ಯುವತಿಯೇ ಇರಬಹುದು ಎಂದು ಮಾಡೆಲ್ ಕನಸು ಹೊತ್ತ ಅನೇಕ ಯುವತಿಯರು ಭಾವಿಸುತ್ತಿದ್ದರು. ಆರೋಪಿಯಿಂದ ವಂಚನೆಗೊಳಗಾದ ಯುವತಿಯೊಬ್ಬಳು ಈ ಕುರಿತು 2021ರ ನವೆಂಬರ್‌ನಲ್ಲಿ ಹಲಸೂರು ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಲವು ಯುವತಿಯರಿಗೆ ಇದೇ ಮಾದರಿಯಲ್ಲಿ ವಂಚಿಸಿರುವುದು ಗೊತ್ತಾಗಿದೆ. ಆರೋಪಿಯ ಮೊಬೈಲ್‌ನ್ನು ವಶಕ್ಕೆ ಪಡೆದಿರುವ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Watch:ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುವ ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News