ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19(COVID-19) ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಮಧ್ಯೆ ಕರ್ನಾಟಕ ಆರೋಗ್ಯ ಇಲಾಖೆ ಶುಕ್ರವಾರ ‘ಓಮಿಕ್ರಾನ್’ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಮತ್ತು ಡಿಸ್ಚಾರ್ಜ್(Hospital Discharge Guidelines) ಮಾಡಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ‘ಒಮಿಕ್ರಾನ್’ ಸೋಂಕು ತಗುಲಿದ ಬಳಿಕ ಚೇತರಿಸಿಕೊಂಡಿರುವ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಈ ಮಾರ್ಗಸೂಚಿಗಳು ಅನ್ವಯಿಸಲಿವೆ. ಕೆಲ ಮಾನದಂಡಗಳನ್ನು ಪೂರೈಸಿದರೆ ರೋಗಲಕ್ಷಣಗಳು ಪ್ರಾರಂಭವಾದ 10 ದಿನಗಳ ನಂತರ ‘ಮಧ್ಯಮ’ ಕೋವಿಡ್ ಹೊಂದಿರುವ ರೋಗಿಗಳನ್ನು ಬಿಡುಗಡೆ ಮಾಡಬಹುದು ಎಂದು ಹೊಸ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಇಬ್ಬರಲ್ಲಿ ‘ಓಮಿಕ್ರಾನ್’ ವೈರಸ್ ಸೋಂಕು ಪತ್ತೆಯಾಗಿರುವುದು ಕರ್ನಾಟಕ(Karnataka)ದಿಂದ ವರದಿಯಾಗಿತ್ತು. 66 ವರ್ಷದ ವಿದೇಶಿ ಪ್ರಜೆ ಮತ್ತು 46 ವರ್ಷದ ಬೆಂಗಳೂರಿನ ವೈದ್ಯರಿಗೆ ‘ಒಮಿಕ್ರಾನ್’ ಸೋಂಕು(Karnataka Omicron Rules) ತಗುಲಿರುವುದು ಪತ್ತೆಯಾಗಿತ್ತು. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: Electricity Bill: ಬೆಲೆ ಏರಿಕೆ ನಡುವೆ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ..!
ಅನುಸರಿಸಬೇಕಾದ ಮಾರ್ಗಸೂಚಿಗಳು ಈ ಕೆಳಗಿನಂತಿವೆ:
- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ರೋಗಿಯಲ್ಲಿ ಸತತ 3 ದಿನಗಳಿಂದ ಯಾವುದೇ ರೀತಿಯ ರೋಗಲಕ್ಷಣಗಳು ಇರಬಾರದು
- ಸತತ 4 ದಿನಗಳವರೆಗೆ ಶೇ.95ಕ್ಕಿಂತ ಹೆಚ್ಚು O2 ಮಟ್ಟವಿರಬೇಕು (ಆಮ್ಲಜನಕದ ಬೆಂಬಲವಿಲ್ಲದೆ).
- 24 ಗಂಟೆಗಳ ಅಂತರದಲ್ಲಿ 2 Negative RT-PCR ಪರೀಕ್ಷಾ ವರದಿಗಳು
- ಡಿಸ್ಚಾರ್ಜ್ ಮಾಡಿದ ನಂತರ ರೋಗಿಗೆ 7 ದಿನಗಳವರೆಗೆ ಹೋಮ್ ಕ್ವಾರಂಟೈನ್(Karnataka Quarantine Rules) ಆಗುವಂತೆ ಸೂಚಿಸಲಾಗುತ್ತದೆ. ಈ ವೇಳೆ ರೋಗಲಕ್ಷಣ ಪತ್ತೆಹಚ್ಚಲು ಸ್ವಯಂ-ಮೇಲ್ವಿಚಾರಣೆ ಮತ್ತು ಜಿಲ್ಲಾ ಕಣ್ಗಾವಲು ಅಧಿಕಾರಿಯಿಂದ ಪರಿಶೀಲನೆ ನಡೆಯಲಿದೆ.
- 6ನೇ ದಿನದಂದು ನಡೆಸಿದ ಆರ್ಟಿ-ಪಿಸಿಆರ್ ಪರೀಕ್ಷೆಯು ನೆಗೆಟಿವ್ ಬಂದರೆ ರೋಗಿಯ ಹೋಮ್ ಕ್ವಾರಂಟೈನ್ ಕೊನೆಗೊಳ್ಳಲಿದೆ
- ಇಮ್ಯುನೊಕೊಂಪ್ರೊಮೈಸ್ಡ್ ರೋಗಿ(Immunocompromised Patients)ಗಳನ್ನು ಒಳಗೊಂಡಂತೆ ತೀವ್ರತರ ಪ್ರಕರಣಗಳಿಗೆ ಡಿಸ್ಚಾರ್ಜ್ ಪ್ರೋಟೋಕಾಲ್ ಸಂಪೂರ್ಣ ಕ್ಲಿನಿಕಲ್ ಚೇತರಿಕೆಯ 3 ದಿನಗಳ ನಂತರ 2 Negative RT-PCR ಪರೀಕ್ಷೆಗಳನ್ನು (24 ಗಂಟೆಗಳ ಅಂತರದಲ್ಲಿ) ಒಳಗೊಂಡಿರುತ್ತದೆ.
ಕ್ಲಸ್ಟರ್ ನಿರ್ವಹಣೆಗೆ ರಾಜ್ಯ ಸರ್ಕಾರದ ಒತ್ತು
ಈ ಮಧ್ಯೆ ಹಾಸ್ಟೆಲ್ಗಳು ಮತ್ತು ಕ್ಲಸ್ಟರ್ಗಳಿಗೆ ಹೊಸ ಮತ್ತು ಪ್ರತ್ಯೇಕ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. SOPಗಳಲ್ಲಿ ನೈರ್ಮಲ್ಯೀಕರಣ, ಅಸ್ಥಿರ ಬ್ಯಾಚ್ಗಳಲ್ಲಿ ಆಹಾರವನ್ನು ನೀಡುವುದು, ಅಂತರವನ್ನು ಕಾಯ್ದುಕೊಳ್ಳುವುದು, ಅಡುಗೆ ಸಿಬ್ಬಂದಿಗೆ ಕಡ್ಡಾಯ ಡಬಲ್ ಡೋಸ್ ಲಸಿಕೆ ಮತ್ತು ಇತರರಲ್ಲಿ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸುವುದು ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪ ಭವಿಷ್ಯ ಸುಳ್ಳಾಗಲಿದೆ, ನಿರಾಣಿ ಸಿಎಂ ಆಗಲ್ಲ: ಯತ್ನಾಳ್
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಲಾಕ್ಡೌನ್(Corona Lockdown) ರೀತಿಯ ನಿರ್ಬಂಧಗಳನ್ನು ಹೇರುವ ಕುರಿತು ಮಾತನಾಡಿರುವ ಸಿಎಂ ಬೊಮ್ಮಾಯಿ, ‘ಒಂದು ವಾರದ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ರಾತ್ರಿ ಕರ್ಫ್ಯೂನಂತಹ ಯಾವುದೇ ವಿಶೇಷ ನಿರ್ಬಂಧಗಳ ಬಗ್ಗೆ 1 ವಾರದ ಪರಿಸ್ಥಿತಿಯನ್ನುಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊರೊನಾ ನಿರ್ಬಂಧಗಳು ಮತ್ತು ರಾತ್ರಿ ಕರ್ಫ್ಯೂ ಹೇರುವ ಬಗ್ಗೆ ರಾಜ್ಯ ಸರ್ಕಾರವು ಯಾವುದೇ ತರಾತುರಿ ನಿರ್ಧಾರ ತೆಗೆದುಕೊಳ್ಳುವುದಿಲ್ಲವೆಂದು ಅವರು ಹೇಳಿದ್ದಾರೆ.
ಲಸಿಕೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ
ಅರ್ಹ ಜನಸಂಖ್ಯೆಯ ಶೇ.94.4ರಷ್ಟು ಜನರು ಕೋವಿಡ್ -19 ಲಸಿಕೆಯ ಕನಿಷ್ಠ 1 ಡೋಸ್ ತೆಗೆದುಕೊಂಡಿದ್ದಾರೆ. ಕರ್ನಾಟಕವು ಬುಧವಾರ ಮೊದಲ ಡೋಸ್ ವ್ಯಾಕ್ಸಿನೇಷನ್ ಕವರೇಜ್ನಲ್ಲಿ ದೇಶದ ಪ್ರಮುಖ ರಾಜ್ಯಗಳಲ್ಲಿಯೇ ಅಗ್ರಸ್ಥಾನಕ್ಕೆ ಏರಿದೆ. ಗುಜರಾತ್ ಅನ್ನು ಹಿಂದಿಕ್ಕಿ ಕರ್ನಾಟಕವು ಅಗ್ರಸ್ಥಾನಕ್ಕೇರಿದೆ. ಸುಮಾರು 4.9 ಕೋಟಿ ಜನಸಂಖ್ಯೆಯ ಗುರಿಯಲ್ಲಿ ಕರ್ನಾಟಕವು 4.6 ಕೋಟಿಗೂ ಹೆಚ್ಚು ಜನರಿಗೆ ಮೊದಲ ಡೋಸ್ ನೀಡಿದೆ. ಬುಧವಾರದಿಂದ ಮೊದಲ ಡೋಸ್ ಕವರೇಜ್ನಲ್ಲಿ ರಾಜ್ಯವು ನಂ.1 ಸ್ಥಾನಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.