ಉತ್ತರ- ದಕ್ಷಿಣ ಕರ್ನಾಟಕ ಲಿಂಗಾಯತರ ಸಂಘಟನೆ ಅಗತ್ಯ: ಎಂ ಬಿ ಪಾಟೀಲ

ಮೈಸೂರು: ಮೈಸೂರಿನ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Written by - Prashobh Devanahalli | Last Updated : Jun 9, 2024, 07:36 PM IST
    • ಸಂಬಂಧ ಮತ್ತು ಸಂಪರ್ಕ ಗಾಢವಾಗಬೇಕಾದ ಅಗತ್ಯವಿದೆ
    • ಲಿಂಗಾಯತ ಸಮುದಾಯದ ಸಂಘಟನೆ ಮತ್ತಷ್ಟು ವ್ಯವಸ್ಥಿತವಾಗಿ ಆಗಲಿದೆ
    • ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿಕೆ
ಉತ್ತರ- ದಕ್ಷಿಣ ಕರ್ನಾಟಕ ಲಿಂಗಾಯತರ ಸಂಘಟನೆ ಅಗತ್ಯ: ಎಂ ಬಿ ಪಾಟೀಲ title=
File Photo

ಮೈಸೂರು: ಈಗ ಉತ್ತರ ಮತ್ತು ದಕ್ಷಿಣ ಕರ್ನಾಟಕ- ಎರಡೂ ಪ್ರಾದೇಶಿಕ ಭಾಗಗಳ ಸಮಸ್ತ ಲಿಂಗಾಯತರ ಸಂಬಂಧ ಮತ್ತು ಸಂಪರ್ಕ ಗಾಢವಾಗಬೇಕಾದ ಅಗತ್ಯವಿದೆ. ಇದು ಸಾಧ್ಯವಾದರೆ ಲಿಂಗಾಯತ ಸಮುದಾಯದ ಸಂಘಟನೆ ಮತ್ತಷ್ಟು ವ್ಯವಸ್ಥಿತವಾಗಿ ಆಗಲಿದೆ ಎಂದು ಸಮುದಾಯದ ಹಿರಿಯ ಮುಖಂಡರೂ ಆದ ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಭಾನುವಾರ ಹೇಳಿದ್ದಾರೆ.

ಇದನ್ನೂ ಓದಿ:  ಪಾಕ್ ವಿರುದ್ಧ ಇತಿಹಾಸ ಸೃಷ್ಟಿಸುವ ತವಕ..ರೋಹಿತ್ ಅಬ್ಬರಿಸಿದ್ರೆ ಈ ದಾಖಲೆ ನಿರ್ಮಾಣ ಖಚಿತ

ಮೈಸೂರಿನ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘಸಂಸ್ಥೆಗಳು ಮತ್ತು ಬಸವ ಬಳಗಗಳ ಒಕ್ಕೂಟ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ‌ ಮತ್ತು ದಕ್ಷಿಣ ಕರ್ನಾಟಕದ ಲಿಂಗಾಯತರು ಒಟ್ಟಾಗುವುದರ ಜತೆಗೆ, ಎಲ್ಲ ಉಪ ಪಂಗಡಗಳನ್ನೂ ಒಂದು ಮಾಡಿ ಸಮನ್ವಯ ಸಾಧಿಸಬೇಕು. ಅನೇಕ ಉಪ ಪಂಗಡಗಳು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ  ನ್ಯೂನತೆಯನ್ನು ಸರಿಪಡಿಸುವ ಕೆಲಸ ಮೊದಲು ಆಗಬೇಕಾಗಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಸಿದ್ಧಗಂಗೆ ಮತ್ತು ಸುತ್ತೂರು ಮಠಗಳು ಅಪಾರ ಕೆಲಸ ಮಾಡಿವೆ. ಈಗ ಸಂಘಟನೆಯ ದೃಷ್ಟಿಯಿಂದ ಉತ್ತರ ಭಾಗದವರು ದಕ್ಷಿಣ ಭಾಗದವರಿಗೆ ಸ್ಪಂದಿಸುವ ಕೆಲಸ ಮಾಡಲಿದ್ದೇವೆ. ಜತೆಗೆ ಸಮುದಾಯದ ನ್ಯಾಯಯುತ ಬೇಡಿಕೆಗಳಿಗೆ ಸರಕಾರದ ಬೆಂಬಲವೂ ಇರಲಿದೆ ಎಂದು ನುಡಿದರು.

ನಾವು ನಮ್ಮ ಧರ್ಮವನ್ನು ಪ್ರೀತಿಸಬೇಕು. ಜೊತೆಗೆ ಉಳಿದ ಧರ್ಮಗಳನ್ನು ಗೌರವಿಸಬೇಕು. ಹಿಂದಿನ ಸಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದೆವು. ಈ ಬಾರಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆವು ಎಂದು ಹೇಳಿದರು.

ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿದ ಕೀರ್ತಿ ಶಿರಸಂಗಿಯ ಲಿಂಗರಾಜ ದೇಸಾಯಿ ಅವರಿಗೆ ಸಲ್ಲುತ್ತದೆ. ಅವರು ವೀರಶೈವ -ಲಿಂಗಾಯತ ಮಹಾಸಭೆ ಹುಟ್ಟು ಹಾಕಿದರು. ಹರ್ಡೀಕರ್ ಮಂಜಪ್ಪನವರು ಬಸವ ಜಯಂತಿಗೆ ಒಂದು ಅರ್ಥಪೂರ್ಣ ರೂಪ ಕೊಟ್ಟರು. ಫ.ಗು.ಹಳಕಟ್ಟಿ ಅವರು ಒಟ್ಟು 700ಕ್ಕೂ ಹೆಚ್ಚು ವಚನಕಾರರನ್ನು ಗುರುತಿಸಿದರು. ಸಂಸ್ಕೃತಮಯವಾಗಿದ್ದ ಕನ್ನಡಕ್ಕೆ ಇಲ್ಲಿನ ಸಹಜ ರೂಪ ಕೊಟ್ಟ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ: ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿವೆ ಈ 3 ತಂಡಗಳು! ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ

ಬಸವಣ್ಣನವರಿಗೆ ವಿಶ್ವಗುರುವಿನ ಸ್ಥಾನವಿದೆ. ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿದ ಹಿರಿಮೆ ಅವರದಾಗಿದೆ. ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅವರ ತತ್ವಾದರ್ಶಗಳನ್ನು ಪಸರಿಸಲು ಸಮುದಾಯದ ಸಂಘಟನೆ ಬೇಕಾಗಿದೆ ಎಂದು ಪಾಟೀಲ ಆಶಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News