243 ವಾರ್ಡ್ ಗಳಲ್ಲಿ ನೂತನ ಗ್ರಂಥಾಲಯ ತೆರೆಯಲು ಪಾಲಿಕೆ ಚಿಂತನೆ

ನಗರದ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ಖಾಸಗಿ ಗ್ರಂಥಾಲಯಗಳನ್ನು ತೆರೆಯಲು ಮುಂದೆ ಬಂದಲ್ಲಿ ಅಂತಹ ಸಂಘ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉಚಿತವಾಗಿ ಪುಸ್ತಕಗಳನ್ನು ನೀಡುವ ಮೂಲಕ ಹೆಚ್ಚೆಚ್ಚು ಗ್ರಂಥಾಲಯಗಳನ್ನು ತೆರೆಯಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Written by - Manjunath Hosahalli | Edited by - Manjunath N | Last Updated : Nov 10, 2022, 08:31 PM IST
  • ಪಾಲಿಕೆ ವತಿಯಿಂದ ನೀಡುವ ಗ್ರಂಥಾಲಯ ಕರವನ್ನು ಪಾಲಿಕೆ ವ್ಯಾಪ್ತಿಯಲ್ಲಿಯೇ ಗ್ರಂಥಾಲಯಗಳ ಸ್ಥಾಪನೆಗೆ ಉಪಯೋಗಿಸಲು ಪಾಲಿಕೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಹಂಚಿಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.
  • ಈ ವೇಳೆ 5 ವಲಯಗಳ ಗ್ರಂಥಾಲಯಗಳ ಉಪ ನಿರ್ದೇಶಕರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು
243 ವಾರ್ಡ್ ಗಳಲ್ಲಿ ನೂತನ ಗ್ರಂಥಾಲಯ ತೆರೆಯಲು ಪಾಲಿಕೆ ಚಿಂತನೆ title=

ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ಖಾಸಗಿ ಗ್ರಂಥಾಲಯಗಳನ್ನು ತೆರೆಯಲು ಮುಂದೆ ಬಂದಲ್ಲಿ ಅಂತಹ ಸಂಘ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಉಚಿತವಾಗಿ ಪುಸ್ತಕಗಳನ್ನು ನೀಡುವ ಮೂಲಕ ಹೆಚ್ಚೆಚ್ಚು ಗ್ರಂಥಾಲಯಗಳನ್ನು ತೆರೆಯಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: T20 World Cupನಲ್ಲಿ ಟೀಂ ಇಂಡಿಯಾದ ರನ್ ರೇಟ್ ಹೇಗಿದೆ ಗೊತ್ತಾ? ಅತೀ ಹೆಚ್ಚು ರನ್ ಗಳಿಸಿದವರ್ಯಾರು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 5 ವಲಯಗಳ ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಜೊತೆ  ಬಿ.ಟಿ.ಎಂ. ಬಡಾವಣೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಚ್ಚೆಚ್ಚು ಗ್ರಂಥಾಲಯಗಳನ್ನು ತೆರೆಯುವುದರಿಂದ ಸಾರ್ವಜನಿಕರು ಓದುವ ಹವ್ಯಾಸವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿನ ಪಾಲಿಕೆ ಮತ್ತು ಸರ್ಕಾರದ ಶಾಲಾ/ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಪ್ರಾಂಶುಪಾಲರಿಂದ ಪುಸ್ತಕಗಳ ಪಟ್ಟಿಯನ್ನು ಪಡೆದು ಅಂತಹ ಪುಸ್ತಕಗಳನ್ನು ಗ್ರಂಥಾಲಯದ ಮೂಲಕ ಉಚಿತವಾಗಿ ನೀಡಲು ಸೂಚಿಸಿದರು.

ಇದನ್ನೂ ಓದಿ: Virat Kohli: ಟಿ20ಯಲ್ಲಿ 4 ಸಾವಿರ ರನ್ ಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಕಿಂಗ್ ಕೊಹ್ಲಿ

ಪಾಲಿಕೆಯ ವ್ಯಾಪ್ತಿಯ 243 ವಾರ್ಡ್‌ಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲು ಪಾಲಿಕೆ ಆಸ್ತಿ/ಕಟ್ಟಡಗಳನ್ನು ಗುರುತಿಸಿ ಗ್ರಂಥಾಲಯ ಸ್ಥಾಪಿಸುವ ಬಗ್ಗೆ ಕ್ರಿಯಾಯೋಜನೆಯನ್ನು ರೂಪಿಸಲು ಉಪನಿರ್ದೇಶಕರುಗಳಿಗೆ ಸೂಚಿದರು.

ಹೊಸದಾಗಿ ಗ್ರಂಥಾಲಯ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಗ್ರಂಥಾಲಯ ಅಧಿಕಾರಿ/ಸಿಬ್ಬಂದಿಗಳು ಹೆಚ್ಚಿನ ಕಾರ್ಯಕ್ಷಮತೆಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಂಥಾಲಯ ಕಟ್ಟಡಗಳಿಗೆ ಹೊಂದಿಕೊಂಡಂತೆ ವಸತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಲು ಸೂಚಿಸಲಾಯ್ತು.ಪಾಲಿಕೆ ವತಿಯಿಂದ ನೀಡುವ ಗ್ರಂಥಾಲಯ ಕರವನ್ನು ಪಾಲಿಕೆ ವ್ಯಾಪ್ತಿಯಲ್ಲಿಯೇ ಗ್ರಂಥಾಲಯಗಳ ಸ್ಥಾಪನೆಗೆ ಉಪಯೋಗಿಸಲು ಪಾಲಿಕೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಹಂಚಿಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು. 

ಈ ವೇಳೆ 5 ವಲಯಗಳ ಗ್ರಂಥಾಲಯಗಳ ಉಪ ನಿರ್ದೇಶಕರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News