Daily Horoscope: ದಿನಭವಿಷ್ಯ 07-02-2021 Today astrology

ಹರಳುಗಳನ್ನು ಧರಿಸುವುದು ಅದಷ್ಟ ತಂದು ಕೊಡುತ್ತದೆ ಎನ್ನುತ್ತಾರೆ. ಆದರೆ ಎಲ್ಲಾ ಹರಳುಗಳನ್ನು ಪ್ರತಿಯೊಬ್ಬರು ಧರಿಸುವ ಹಾಗಿಲ್ಲ. ಹರಳುಗಳನ್ನು ಧರಿಸುವುದಕ್ಕೂ ಕೆಲ ನಿಯಮಗಳಿವೆ. 

Written by - Zee Kannada News Desk | Last Updated : Feb 7, 2021, 07:49 AM IST
  • ಮೇಷ ರಾಶಿಯವರಿಗೆ ಅದೃಷ್ಟದ ರತ್ನ ಹವಳ
  • ವೃಷಭ ರಾಶಿಯವರಿಗೆ ಹೊಂದು ರತ್ನ ವಜ್ರ ಮತ್ತು ನೀಲಮಣಿ
  • ಕರ್ಕಾಟಕ ರಾಶಿಯವರ ಅದೃಷ್ಟದ ಹರಳೆಂದರೆ ಮುತ್ತು
Daily Horoscope: ದಿನಭವಿಷ್ಯ 07-02-2021 Today astrology title=
Daily horoscope

ಬೆಂಗಳೂರು : ಹರಳುಗಳನ್ನು ಧರಿಸುವುದು ಅದಷ್ಟ ತಂದು ಕೊಡುತ್ತದೆ ಎನ್ನುತ್ತಾರೆ. ಆದರೆ ಎಲ್ಲಾ ಹರಳುಗಳನ್ನು ಪ್ರತಿಯೊಬ್ಬರು ಧರಿಸುವ ಹಾಗಿಲ್ಲ. ಹರಳುಗಳನ್ನು ಧರಿಸುವುದಕ್ಕೂ ಕೆಲ ನಿಯಮಗಳಿವೆ. ಯಾವ ರಾಶಿಯವರಿಗೆ ಯಾವ ಹರಳು ಅದರಷ್ಟ ತಂದು ಕೊಡುತ್ತದೆ ಎನ್ನುವುದನ್ನು ತಿಳಿದುಕೊಂಡು ಆಯಾ ದಿನಗಳಲ್ಲೇ  ಧರಿಸಬೇಕು. ಯಾವ ರಾಶಿಯವರತಿಗೆ ಯಾವ ಹರಳು ಅದೃಷ್ಟ. ಹರಳನ್ನು ಯಾವಾಗ ಮತ್ತು ಹೇಗೆ ಧರಿಸಬೇಕು ಎನ್ನುವ ಮಾಹಿತಿ ಇಲ್ಲಿದೆ..

ಮೇಷ:ಈ ರಾಶಿಯವರ ಅದೃಷ್ಟದ ರತ್ನ ಎಂದರೆ ಹವಳ. ಹವಳವನ್ನು ಚಿನ್ನದ ಉಂಗುರದಲ್ಲಿ ಸೇರಿಸಿ, ಮಂಗಳವಾರದಂದು ಧರಿಸಬೇಕು. ಧರಿಸುವಾಗ ” ಓಂ ಭೌಮ್ ಭೌಮಾಯ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಹವಳವನ್ನು ಧರಿಸುವುದರಿಂದ ದೈಹಿಕವಾಗಿ ಉತ್ತಮ ಆರೋಗ್ಯ ಲಭಿಸುವುದು. ರಕ್ತವು‌ ಶುದ್ಧೀಕರಣವಾಗುವುದು. ಮಹಿಳೆಯರಿಗೆ ಸೂಕ್ತ ಸಮಯದಲ್ಲಿ ವಿವಾಹವಾಗುವುದು. ನಕಾರಾತ್ಮಕ ಸೆಳೆತದಿಂದ ದೂರಾಗಿಸುವುದು. 

ವೃಷಭ: ಇವರಿಗೆ ಹೊಂದುವ ‌ರತ್ನವೆಂದರೆ ವಜ್ರ ಮತ್ತು ನೀಲಮಣಿ. ಶುಕ್ಲಪಕ್ಷದ ಶುಕ್ರವಾರದಂದು ಈ ಮಣಿ ಧರಿಸಬೇಕು. ಧರಿಸುವಾಗ ” ಓಂ ಶುಮ್ ಶುಕ್ರಾಯ ನಮ: ಎನ್ನುವ ಮಂತ್ರವನ್ನು ಜಪಿಸಬೇಕು. ವಜ್ರವನ್ನು ಧರಿಸುವುದರಿಂದ ವ್ಯಕ್ತಿ ಆರೋಗ್ಯವಂತ, ಧೈರ್ಯಶಾಲಿ, ಮತ್ತು ಬುದ್ದಿವಂತನಾಗುವನು. ಅಪ್ರಾಪ್ತ ವಯಸ್ಸಿನಲ್ಲಿ ‌ಮದುವೆಯಾಗುವುದು , ಹಾಗೂ ಬೆಂಕಿಯ ಅಪಾಯಗಳಿಂದ ರಕ್ಷಣೆ ದೊರೆಯುವುದು. ಮಹಿಳೆಯರಲ್ಲಿ ಗರ್ಭಾಶಯದ ಸಮಸ್ಯೆ ದೂರಾಗುವುದು. ಪುರುಷರಲ್ಲಿ ಲೈಂಗಿಕ ಸಮಸ್ಯೆ ದೂರಾಗುವುದು. 

ಇದನ್ನೂ ಓದಿ : ಮನೆಯಲ್ಲಿ ಬೆಳಿಗ್ಗೆ, ಸಂಜೆ Deepa ಬೆಳಗಿಸುವ ವೇಳೆ ಈ 5 ನಿಯಮಗಳನ್ನು ನೆನಪಿನಲ್ಲಿಡಿ

ಮಿಥುನ: ಈ ರಾಶಿಯವರಿಗೆ ಪನ್ನಾ ಅಥವಾ ಪಚ್ಚೆಯ ಹರಳು ಶುಭವಾಗಿರುತ್ತದೆ. ಇದನ್ನು ಬುಧವಾರ ದಂದು ” ಓಂ ಬುಂ ಬುಧಾಯ ನಮ: “ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಈ ಹರಳನ್ನು ಧರಿಸುವುದರಿಂದ ಬಡತನ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ. ಶೀತ ಸಂಬಂಧಿ ರೋಗಗಳಾದ ಗಂಟಲು ನೋವು, ಶೀತ, ಕೆಮ್ಮು ಇನ್ನಿತರ ಆರೋಗ್ಯ ಸಮಸ್ಯೆಗಳು ದೂರಾಗುವುದು. ಮಾನಸಿಕ ಆರೋಗ್ಯ ಹೆಚ್ಚುವುದು ಮತ್ತು ಒತ್ತಡ ನಿವಾರಣೆಯಾಗುತ್ತದೆ. 

ಕರ್ಕಾಟಕ: ಈ ರಾಶಿಯವರ ಅದೃಷ್ಟದ ಹರಳೆಂದರೆ ಮುತ್ತು / ಮೋತಿ. ಇದನ್ನು ಸೋಮವಾರ ಬೆಳಿಗ್ಗೆ ಚಂದ್ರನ ಮಂತ್ರವಾದ ” ಓಂ ಸೋಂ ಸೋಮಾಯ ನಮ: “ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಮುತ್ತನ್ನು ಧರಿಸುವುದರಿಂದ ನೆನಪಿನ ಶಕ್ತಿ ಹೆಚ್ಚುವುದು, ಕೋಪವನ್ನು ನಿಯಂತ್ರಿಸುತ್ತದೆ. ನಿದ್ರಾಹೀನತೆ , ಹಲ್ಲಿನ ತೊಂದರೆ, ಮೂತ್ರಪಿಂಡ ಸಂಬಂಧಿಸಿದ ಕಾಯಿಲೆ ಇರುವವರಿಗೆ ಪರಿಹಾರ ದೊರೆಯುತ್ತದೆ.ಸೂಕ್ತ ‌ಸಮಯದಲ್ಲಿ‌ ವಿವಾಹವಾಗುವುದು. 

 

ಸಿಂಹರಾಶಿ: ಈ ರಾಶಿಯವರಿಗೆ ಮಾಣಿಕ್ಯ (ರೂಬಿ) ಅನುಕೂಲಕರವಾದ ಹರಳು. ಇದನ್ನು ಬುಧವಾರ ಬೆಳಿಗ್ಗೆ ” ಓಂ ಗೃಣಿ ಸೂರ್ಯಾಯ ನಮಃ ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಮಾಣಿಕ್ಯವನ್ನು ಧರಿಸುವುದರಿಂದ ಭಯ, ದುಃಖಗಳು ದೂರವಾಗುವವು.ಉದ್ಯೋಗ ‌ಕ್ಷೇತ್ರಲ್ಲಿ ಉನ್ನತ ಸ್ಥಾನಗಳು ದೊರೆಯುತ್ತದೆ. ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುವವು. 

ಇದನ್ನೂ ಓದಿ : ದೇವಿ ಲಕ್ಷ್ಮಿ ಮನೆ ತೊರೆಯುತ್ತಿದ್ದಾಳೆ ಎನ್ನುತ್ತವೆ ಈ ಸಂಕೇತಗಳು, ಎಚ್ಚರ ವಹಿಸಿ

ಕನ್ಯಾ ರಾಶಿಯವರಿಗೆ ಅನುಕೂಲಕರವಾದ ಹರಳು‌ ಪನ್ನ/ ಪಚ್ಚೆ. ಇದನ್ನು ‌ಕನ್ಯಾ ರಾಶಿಯವರು ಬುಧವಾರ ” ಓಂ ಬುಂ ಬುಧಾಯ ನಮಃ ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಪಚ್ಚೆ ಹರಳನ್ನು ಧರಿಸುವುದರಿಂದ ಬಡತನ ನಿವಾರಣೆಯಾಗುತ್ತದೆ.ಯಶಸ್ವಿ ಜೀವನ ನಡೆಸಬಹುದು. ಕೆಮ್ಮು ಮತ್ತು ಗಂಟಲಿನ ಸಮಸ್ಯೆ ದೂರಾಗುವುದು.ಮಾನಸಿಕ ಚಿಂತೆಗಳು ಪರಿಹಾರವಾಗುವವು.ಕಾರ್ಯ ಕ್ಷೇತ್ರದಲ್ಲಿ ಜಯವಾಗುವುದು.
 
ತುಲಾರಾಶಿ: ಈ ರಾಶಿಯವರಿಗೆ ಅದೃಷ್ಟದ ಹರಳು ವಜ್ರ. ಶುಕ್ಲಪಕ್ಷದ ಶುಕ್ರವಾರದಂದು ವಜ್ರವನ್ನು ಧರಿಸಬೇಕು. ಈ ವಜ್ರವನ್ನು ಧರಿಸುವಾಗ ” ಓಂ ಶುಂ ಶುಕ್ರಾಯ ನಮಃ ” ಎಂದು ಜಪಿಸಬೇಕು. ವಜ್ರ ಧರಿಸುವುದರಿಂದ ಆರೋಗ್ಯ ಸುಧಾರಣೆಯಾಗುವುದು. ಧೈರ್ಯ ಮತ್ತು ಬುದ್ಧಿವಂತಿಕೆ ಹೆಚ್ಚುವುದು. ಬೆಂಕಿಯ ಅಪಾಯಗಳಿಂದ ರಕ್ಷಣೆ ನೀಡುತ್ತದೆ. ಸಂತಾನ ಸಮಸ್ಯೆ ದೂರಾಗುವುದು.
 
ವೃಶ್ಚಿಕ: ವೃಶ್ಚಿಕ ರಾಶಿಯವರ ಅದೃಷ್ಟದ ಹರಳು ಹವಳ. ಶುಕ್ಲ ಪಕ್ಷದ ಮಂಗಳವಾರದಂದು ‘ ಓಂ ಬೌಂ ಭೌಮಾಯ ನಮಃ ಎನ್ನುವ ಮಂತ್ರವನ್ನು ಹೇಳುವ ಮೂಲಕ ಧರಿಸಬೇಕು. ಹವಳ ವನ್ನು ಧರಿಸುವುದರಿಂದ ಕಳೆದುಕೊಂಡ ಆಸೆ ಆಕಾಂಕ್ಷೆಗಳು ಪುನಃ ಜೀವ ಪಡೆದುಕೊಳ್ಳುವುದು. ಧೈರ್ಯ, ಶಕ್ತಿ ಹಾಗೂ ಬುದ್ಧಿಯು ಹೆಚ್ಚುವುದು. ವಯಸ್ಸಿನಲ್ಲಿಯೇ ಮಹಿಳೆಯರಿಗೆ ವಿವಾಹ ಆಗಲು ಸಹಾಯ ಮಾಡುವುದು.

ಇದನ್ನೂ ಓದಿ : Evil Eye : ಮಗು, ಮನೆ, ವ್ಯವಹಾರಕ್ಕೆ ಬಿದ್ದ ದೃಷ್ಟಿ ನಿವಾಳಿಸಿ ತೆಗೆಯುವುದು ಹೇಗೆ..?
 
ಧನು ರಾಶಿ: ಧನು ರಾಶಿಯವರ ಅದೃಷ್ಟದ ‌ಹರಳು ಪುಖರಾಜ್( ಟೋಪಾಜ್). ಇದನ್ನು ಶುಕ್ಲಪಕ್ಷದ ಗುರುವಾರದಂದು ಬೆಳಿಗ್ಗೆ ” ಓಂ ಬ್ರಂ ಬ್ರಹಸ್ಪತೆಯೇ ನಮಃ ” ಎನ್ನುವ ಮಂತ್ರವನ್ನು ಜಪಿಸುತ್ತಾ ಧರಿಸಬೇಕು. ಪುಖರಾಜ ಹರಳನ್ನು ಧರಿಸುವುದರಿಂದ ಬುದ್ಧಿ ಮತ್ತು ಜ್ಞಾನ ಹೆಚ್ಚಾಗಿ ಸಮಾಜದಲ್ಲಿ ಗೌರವ ಲಭಿಸುವುದು. ಯಾವುದೇ ಪಾಪ ಕರ್ಮಗಳನ್ನು ಮಾಡದಂತೆ ತಡೆದು, ಪುಣ್ಯ ಕಾರ್ಯಗಳಿಗೆ ‌ಪ್ರೇರೇಪಿಸುವುದು.
 
ಮಕರ ರಾಶಿ: ಈ ರಾಶಿಯವರ ಅದೃಷ್ಟದ ‌ಹರಳು ನೀಲಿ ಹರಳು .ಇದನ್ನು ಶನಿವಾರ ಬೆಳಗ್ಗೆ ” ಓಂ ಶಂ ಶನೈಶ್ಚರಾಯ ನಮಃ ” ಎನ್ನುವ ಮಂತ್ರವನ್ನು ಪಠಿಸುತ್ತಾ ಧರಿಸಬೇಕು. ನೀಲಿಮಣಿ ಧರಿಸುವುದರಿಂದ ಸಂಪತ್ತು, ಸಂತೋಷ ಹಾಗೂ ಸಕಾರಾತ್ಮಕ ಭಾವನೆಗಳು ದೊರೆಯುತ್ತದೆ. ಗಾಳಿಯಿಂದ ಬರುವ ರೋಗ, ಪಾಶ್ರ್ವವಾಯು, ಸಂಧಿವಾತಗಳಂತಹ ಸಮಸ್ಯೆಗಳು ನಿಯಂತ್ರಣದಲ್ಲಿ ಇರುವವು.
 
ಕುಂಭರಾಶಿ: ಕುಂಭರಾಶಿಯವರಿಗೂ ಅದೃಷ್ಟದ ಹರಳು ನೀಲಮಣಿ. ಕುಂಭರಾಶಿಯವರು ಈ ಹರಳನ್ನು ಶನಿವಾರ ಬೆಳಗ್ಗೆ ” ಓಂ ಶನೈಶ್ಚರಾಯ ನಮಃ ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಇದನ್ನು ಧರಿಸುವುದರಿಂದ ಸುಖ ಸಂಪತ್ತು ಪ್ರಾಪ್ತಿಯಾಗುತ್ತದೆ. ಸಮಾಜದಲ್ಲಿ ಖ್ಯಾತಿ ಉಂಟಾಗುತ್ತದೆ .ಸಾಂಕ್ರಾಮಿಕ ರೋಗದಿಂದ ದೂರ ಉಳಿಸುತ್ತದೆ. ಸಂಧಿವಾತ ಗುಣವಾಗುತ್ತದೆ.
 
ಮೀನರಾಶಿ: ಈ ರಾಶಿಯವರ ಅದೃಷ್ಟದ ಹರಳು ಪುಖರಾಜ್. ಇದನ್ನು ‌ಶುಕ್ಷಪಕ್ಷದ ಗುರುವಾರದಂದು ಬೆಳಿಗ್ಗೆ ” ಓಂ ಬ್ರಂ ಬ್ರಹಸ್ಪತೆಯೇ ನಮಃ ” ಎನ್ನುವ ಮಂತ್ರವನ್ನು ಪಠಿಸುತ್ತಾ ಧರಿಸಬೇಕು. ಪುಖರಾಜ್ ಹರಳನ್ನು ಧರಿಸುವುದರಿಂದ ಬುದ್ಧಿಶಕ್ತಿ ವೃದ್ಧಿಸುತ್ತದೆ, ಸಂಪತ್ತು ಹೆಚ್ಚುತ್ತದೆ. ಸಮಾಜದಲ್ಲಿ ಗೌರವ ದೊರೆಯುತ್ತದೆ. ‌ಪುಖರಾಜ್ ಧರಿಸುವುದರಿಂದ ಗಂಡು‌ ಸಂತಾನವನ್ನು ಪಡೆಯಬಹುದು. ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

ಇದನ್ನೂ ಓದಿ : Vastu tips : ನಟರಾಜ ಶಿವ, ಮಹಾಕಾಳಿಯ ಮೂರ್ತಿ ಮನೆಯ ಮಂದಿರದಲ್ಲಿ ಏಕಿಡರಬಾರದು..? 2 ಗಣೇಶ ಮೂರ್ತಿ ಇದ್ದರೆ ಏನಾಗುತ್ತದೆ..?

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News