Weight Loss Tips: ಪ್ರತಿದಿನ ಈ ಡ್ರೈಫ್ರೂಟ್ ತಿನ್ನುವುದರಿಂದ ಕಡಿಮೆ ಆಗುತ್ತೆ ತೂಕ

Benefits Of Pista: ತೂಕ ಕಡಿಮೆ ಮಾಡಲು ನಾವು ಎಷ್ಟೆಲ್ಲಾ ಪ್ರಯತ್ನಿಸುತ್ತೇವೆ. ಆದರೆ, ಈ ಒಂದು ಡ್ರೈಫ್ರೂಟ್ ಅನ್ನು ನಿತ್ಯ ಸೇವಿಸುವುದರಿಂದ ಸುಲಭವಾಗಿ ತೂಕ ಇಳಿಸಬಹುದು. ಇಷ್ಟು ಮಾತ್ರವಲ್ಲ ಇನ್ನೂ ಹಲವು ಆರೋಗ್ಯ ಪ್ರಯೋಜನಗಳು ಸಹ ಲಭ್ಯವಿವೆ. ಆ ಒಣಹಣ್ಣು ಯಾವುದು ಎಂದು ತಿಳಿಯೋಣ...

Written by - Yashaswini V | Last Updated : Jun 30, 2022, 09:48 AM IST
  • ಈ ಡ್ರೈಫ್ರೂಟ್ ಸೇವನೆಯಿಂದ ನಮ್ಮ ದೇಹವು ಅತ್ಯುತ್ತಮವಾದ ಸಸ್ಯ ಪ್ರೋಟೀನ್ ಅನ್ನು ಪಡೆಯುತ್ತದೆ
  • ಇದು ಸ್ನಾಯುಗಳನ್ನು ಬಲಪಡಿಸುತ್ತದೆ.
  • ಹೆಚ್ಚುತ್ತಿರುವ ತೂಕವನ್ನು ಕಳೆದುಕೊಳ್ಳಲು ಸಹ ಇದು ಸಹಕಾರಿ ಆಗಿದೆ
Weight Loss Tips: ಪ್ರತಿದಿನ ಈ ಡ್ರೈಫ್ರೂಟ್ ತಿನ್ನುವುದರಿಂದ ಕಡಿಮೆ ಆಗುತ್ತೆ ತೂಕ   title=
Weight Loss Food

ಪಿಸ್ತಾದ ಆರೋಗ್ಯ ಪ್ರಯೋಜನಗಳು: ಒಣ ಹಣ್ಣುಗಳನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಆರೋಗ್ಯ ತಜ್ಞರು ಡ್ರೈಫ್ರೂಟ್ಸ್ ಸೇವಿಸಲು ಶಿಫಾರಸ್ಸು ಮಾಡುತ್ತಾರೆ. ಆದರೆ, ಡ್ರೈಫ್ರೂಟ್ಸ್ ಗಳಲ್ಲಿ ಒಂದಾದ ಪಿಸ್ತಾ ಸೇವನೆಯಿಂದ ತೂಕ ಇಳಿಕೆಗೂ ಸಹಕಾರಿ ಎಂಬುದು ಕೆಲವೇ ಜನರಿಗಷ್ಟೆ ತಿಳಿದಿದೆ. ಪಿಸ್ತಾದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು, ನೈಸರ್ಗಿಕ ಕೊಬ್ಬುಗಳು, ಕಾರ್ಬೋಹೈಡ್ರೇಟ್‌ಗಳು, ಅಮೈನೋ ಆಮ್ಲಗಳು ಮತ್ತು ಫೈಬರ್ ಕಂಡುಬರುತ್ತದೆ. ಹಾಗಾಗಿ ಇದು ತೂಕ ಇಳಿಕೆಗೆ ಮಾತ್ರವಲ್ಲದೆ ಆರೋಗ್ಯಕ್ಕೆ ಇನ್ನೂ ಹಲವು ದೃಷ್ಟಿಯಿಂದ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಪಿಸ್ತಾವನ್ನು ಯಾವುದೇ ಪಾಕವಿಧಾನ ಅಥವಾ ಸಿಹಿ ಖಾದ್ಯಕ್ಕೆ ಸೇರಿಸಿದರೆ, ಅದು ಅದರ ರುಚಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಿಸ್ತಾ ಸೇವನೆಯಿಂದ ಸಿಗುವ ಪ್ರಯೋಜನಗಳ ಬಗ್ಗೆ ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯ ಪ್ರಸಿದ್ಧ ಆಹಾರ ತಜ್ಞರಾದ ಡಾ. ಆಯುಷಿ ಯಾದವ್ ಹಲವು ಮಾಹಿತಿಗಳನ್ನು ನೀಡಿದ್ದಾರೆ. 

ಪಿಸ್ತಾ ಸೇವನೆಯಿಂದ ಸಿಗುವ ಐದು ಪ್ರಮುಖ ಪ್ರಯೋಜನಗಳಿವು:
1. ತೂಕವನ್ನು ಕಡಿಮೆ ಮಾಡಲು ಸಹಾಯಕ:-

ಪಿಸ್ತಾ ಸೇವನೆಯಿಂದ ನಮ್ಮ ದೇಹವು ಅತ್ಯುತ್ತಮವಾದ ಸಸ್ಯ ಪ್ರೋಟೀನ್ ಅನ್ನು ಪಡೆಯುತ್ತದೆ, ಇದು ಸ್ನಾಯುಗಳನ್ನು ಬಲಪಡಿಸುತ್ತದೆ. ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಳೆದುಕೊಳ್ಳಲು ನೀವು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಒಂದು ದಿನದಲ್ಲಿ ಒಂದು ಹಿಡಿ ಪಿಸ್ತಾವನ್ನು ಸೇವಿಸಿ.

ಇದನ್ನೂ ಓದಿ- ಮಲಬದ್ದತೆ ನಿವಾರಿಸಲು ಮಾತ್ರವಲ್ಲ ಈ ಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಕೊತ್ತಂಬರಿ ಸೊಪ್ಪು

2. ಮೂಳೆಗಳು ಗಟ್ಟಿಯಾಗುತ್ತವೆ:-
ವಯಸ್ಸಾದಂತೆ, ಮೂಳೆಗಳು ದುರ್ಬಲಗೊಳ್ಳುವುದು ಸಹಜ. ಆದರೆ ಕೆಲವರು ಚಿಕ್ಕ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ, ಅವರು ಪಿಸ್ತಾವನ್ನು ಸೇವಿಸಬೇಕು. ಏಕೆಂದರೆ ಇದು ವಿಟಮಿನ್ಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. 

3. ಮಧುಮೇಹದಲ್ಲಿ ಪರಿಣಾಮಕಾರಿ:-
ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಗಂಭೀರ ಸಮಸ್ಯೆಯಾಗಿದೆ. ನಿಮಗೆ ಮಧುಮೇಹ ಇದ್ದರೆ, ಪ್ರತಿದಿನ ಬೆಳಿಗ್ಗೆ ಉಪಾಹಾರದಲ್ಲಿ ಪಿಸ್ತಾವನ್ನು ಸೇವಿಸಿ, ಅದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

4. ಜ್ಞಾಪಕ ಶಕ್ತಿ ಹೆಚ್ಚಿಸಲು:-
ಕೆಲವರ ಜ್ಞಾಪಕ ಶಕ್ತಿ ತುಂಬಾ ದುರ್ಬಲವಾಗಿರುವುದನ್ನು ನಾವು ನಮ್ಮ ಸುತ್ತಮುತ್ತ ನೋಡಿಯೇ ಇರುತ್ತೇವೆ.  ಇಂತಹ ಪರಿಸ್ಥಿತಿಯಲ್ಲಿ,  ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಇದನ್ನೂ ಓದಿ- ಡಯಾಬಿಟೀಸ್ ರೋಗಿಗಳು ಈ ಚಹಾವನ್ನು ಕುಡಿದರೆ ಸದಾ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್

5. ದೃಷ್ಟಿಯನ್ನು ಸುಧಾರಿಸುತ್ತದೆ :-
ಪಿಸ್ತಾ ಇಂತಹ ಒಣ ಹಣ್ಣಾಗಿದ್ದು, ಇದರಲ್ಲಿ ಜಿಯಾಕ್ಸಾಂಥಿನ್ ಮತ್ತು ಲುಟೀನ್ ಎಂಬ ಆಂಟಿ-ಆಕ್ಸಿಡೆಂಟ್‌ಗಳು ಕಂಡುಬರುತ್ತವೆ, ಇದು ನಮ್ಮ ದೇಹವು ಸ್ವತಂತ್ರ ರಾಡಿಕಲ್‌ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸಿದರೆ, ದೃಷ್ಟಿ ಸುಧಾರಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News