Romantic Relationship: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂಬಂಧ ಹಾಗೂ ವಿವಾಹದ ಕುರಿತು ಸಾಕಷ್ಟು ಯೋಚಿಸಿಯೇ ನಂತರ ಹೆಜ್ಜೆ ಇಡುತ್ತಾನೆ. ಭಾರತೀಯ ಸಮಾಜದಲ್ಲಿ ವಿವಾಹವು ಒಂದು ಪ್ರಮುಖ ಸಂಪ್ರದಾಯವಾಗಿದೆ, ಆದರೆ ಕಾಲಕ್ಕೆ ಅನುಗುಣವಾಗಿ ಅದರಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತಿವೆ. ಅನೇಕ ದಂಪತಿಗಳು ಮದುವೆಯ ಮೊದಲು ಭೇಟಿಯಾಗುತ್ತಾರೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ವೇಳೆ, ಕೆಲವು ಸ್ಥಳಗಳಲ್ಲಿ ಮದುವೆಗೆ ಮೊದಲು ಹುಡುಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ನೋಡುವುದು ಸರಿಯಲ್ಲ ಎನ್ನಲಾಗುತ್ತದೆ. ಹೀಗಿರುವಾಗ ಇದೀಗ ಭಾರತದಲ್ಲಿ ಮದುವೆ ಮತ್ತು ಸಂಬಂಧಕ್ಕೆ ಸಂಬಂಧಿಸಿದಂತೆ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಸಮೀಕ್ಷೆಯಿಂದ ಬಹಿರಂಗಗೊಂಡ ಅಂಕಿ-ಅಂಶಗಳು ಭಾರಿ ಆಶ್ಚರ್ಯಕ್ಕೆ ಕಾರಣವಾಗಿವೆ.
ಇದನ್ನೂ ಓದಿ-ನೀವೂ ನಿಮ್ಮ ಜೀವನವನ್ನು ಸುಖಮಯವಾಗಿಸಬೇಕೆ? ಗರುಡ ಪುರಾಣದ ಈ ಸಲಹೆಗಳನ್ನು ಅನುಸರಿಸಿ
ಈ ಸಮೀಕ್ಷೆ ಯಾರು ನಡೆಸಿದ್ದಾರೆ?
ಡಿಜಿಟಲ್ ಯುಗದ ಈ ಕಾಲದಲ್ಲಿ ಜನರು ಡಿಜಿಟಲ್ ರೀತಿಯಲ್ಲಿ ಜೀವನ ಸಂಗಾತಿಯನ್ನು ಹುಡುಕಲು ಆರಂಭಿಸಿದ್ದಾರೆ. ಇದಕ್ಕಾಗಿ ಜನರು ವಿವಿಧ ರೀತಿಯ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಈ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಬಂಬಲ್ ಕೂಡ ಒಂದು, ಈ ಬಂಬಲ್ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯ ನಂತರ ಬಂಬಲ್ ಪ್ರಸ್ತುತಪಡಿಸಿದ ಅಂಕಿಅಂಶಗಳು ಜನರನ್ನು ದಿಗ್ಭ್ರಮೆಗೊಳಿಸುವಂತಿವೆ. ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವ ಸುಮಾರು ಶೇ.39 ರಷ್ಟು ಜನರು ತಮ್ಮ ಕುಟುಂಬಗಳು ಮದುವೆಯ ಸೀಜನ್ ನಲ್ಲಿ ಸಂಬಂಧದಲ್ಲಿ ಬೀಳಲು ಅಥವಾ ಮದುವೆಯಾಗಲು ಸಲಹೆ ನೀಡುತ್ತಾರೆ ಎಂಬುದನ್ನು ಹೇಳಿಕೊಂಡಿದ್ದಾರೆ. ಡೇಟಿಂಗ್ ಆ್ಯಪ್‌ಗಳನ್ನು ಬಳಸುವ 33% ಅವಿವಾಹಿತರು ತಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಮದುವೆಗೆ ಒತ್ತಾಯಿಸಲಾಗುತ್ತಿದೆ ಎಂದು ಹೇಳುತ್ತಾರೆ ಮತ್ತು ಇದು ವಿಶೇಷವಾಗಿ ಮದುವೆಯ ಸೀಜನ್ ನಲ್ಲಿ ಇದು ಹೆಚ್ಚು ಸಂಭವಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ-ಕುಂಭ ರಾಶಿಯಲ್ಲಿ ಶನಿಯ ಗೋಚರ, ಈ ರಾಶಿಯ ಜನರ ಸಾಡೆಸಾತಿ ಆರಂಭ
ಸುಮಾರು ಶೇ. 81 ರಷ್ಟು ಮಹಿಳೆಯರು ಒಂಟಿತನವೇ ಬೆಸ್ಟ್ ಎಂದಿದ್ದಾರೆ
ಡೇಟಿಂಗ್ ಅಪ್ಲಿಕೇಶನ್ ಬಂಬಲ್‌ನ ಮಾಹಿತಿಯ ಪ್ರಕಾರ, ಭಾರತದಲ್ಲಿ ಸುಮಾರು ಶೇ.81 ರಷ್ಟು ಮಹಿಳೆಯರು ಮದುವೆಯಿಲ್ಲದೆ ಅಥವಾ ಒಂಟಿಯಾಗಿ ಬದುಕದೆ ಹೆಚ್ಚು ಬೆಸ್ಟ್ ಎಂದು ಭಾವಿಸಿದ್ದಾರೆ. ಸಮೀಕ್ಷೆಯೊಂದರಲ್ಲಿ, ಸುಮಾರು ಶೇ.83 ರಷ್ಟು ಮಹಿಳೆಯರು ಪರಿಪೂರ್ಣ ಜೀವನ ಸಂಗಾತಿಯನ್ನು ಕಂಡುಕೊಳ್ಳುವವರೆಗೆ ಯಾವುದೇ ರೀತಿಯ ಸಂಬಂಧದಲ್ಲಿ ಬೀಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.