Actress Sitara : ಕನ್ನಡ ಚಿತ್ರರಂಗದಲ್ಲಿ ಆ ಕಾಲದ ಟಾಪ್ ನಟಿಯರಲ್ಲಿ ಸಿತಾರಾ ಕೂಡ ಒಬ್ಬರು. ಇವರು ಬಹುಭಾಷಾ ನಟಿಯಾಗಿದ್ದರು. ತೆಲುಗು, ತಮಿಳು, ಮಲಯಾಳಂ, ಮತ್ತು ಕನ್ನಡ ಚಿತ್ರಗಳಲ್ಲಿ ಸಿತಾರಾ ಅಭಿನಯಿಸಿದ್ದಾರೆ. ಇವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಅವರ ಮೂಲ ಹೆಸರು ಸಿತಾರಾ ನಾಯಕ್. ಕೇರಳದಲ್ಲಿ ಜನಿಸಿದರು.ಹಾಲುಂಡ ತವರು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಕರುಳಿನ ಕುಡಿ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಅನುರಾಗ ದೇವತೆ, ಹೆತ್ತವಳ ಕೂಗು ಹೀಗೆ ಕನ್ನಡದಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ 40 ದಾಟಿದ್ದರೂ ಸಿತಾರಾ ಇನ್ನೂ ಮದುವೆಯಾಗದೆ ಉಳಿದಿದ್ದಾರೆ. ಇದಕ್ಕೆ ಕಾರಣ ಏನು? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಇದನ್ನೂ ಓದಿ : ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ, ಪಕ್ಕದಲ್ಲಿ ಹುಡುಗಿ.. ರೊಮ್ಯಾಂಟಿಕ್ ಮೂಡ್ನಲ್ಲಿ RGV!!
ಸಿತಾರಾ ತಂದೆ ಹೆಸರು ಪರಮೇಶ್ವರನ್ ನಾಯರ್ ಮತ್ತು ತಾಯಿ ವಲ್ಸಲಾ ನಾಯರ್. ಅಪ್ಪ - ಅಮ್ಮ ಇಬ್ಬರೂ ಕೇರಳ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಇಂಜಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಿತಾರಾ ಚಿಕ್ಕ ವಯಸ್ಸಿನವರಿದ್ದಾಗಲೇ ತಂದೆ ಮೃತಪಟ್ಟರಂತೆ. ಇದರಿಂದ ಸಿತಾರಾ ತುಂಬಾ ಮನನೊಂದಿದ್ದಾರೆ. ಇದೇ ಕಾರಣಕ್ಕೆ ಸಿತಾರಾ ಮದುವೆ ಆಲೋಚನೆಯನ್ನೇ ಬಿಟ್ಟರಂತೆ.
ಅಪ್ಪನೇ ಸಿತಾರಾ ಜೀವನದ ಗುರು, ಸರ್ವಸ್ವವಾಗಿದ್ದರು. ಅಪ್ಪನ ನಿಧನದ ಬಳಿಕ ತನ್ನ ಬದುಕಿಗೆ ಮತ್ತೊಬ್ಬ ವ್ಯಕ್ತಿ ಬರುವುದು ಬೇಡ ಎಂದು ನಿರ್ಧರಿಸಿದರಂತೆ. ಹಾಗಾಗಿ ಮದುವೆ ಆಗದೇ ಜೀವನ ಪೂರ್ತಿ ಇರಲು ಸಿತಾರಾ ನಿರ್ಧರಿಸಿದರಂತೆ. ಈಗಲೂ ತನಗೆ ಮದುವೆಯಾಗುವ ಆಸಕ್ತಿ ಇಲ್ಲ ಎಂದು ಸಿತಾರಾ ಹೇಳುತ್ತಾರೆ.
ಇದನ್ನೂ ಓದಿ : "ಬೇಗ ಕನ್ನಡ ಕಲಿಯಿರಿ" ಹಿಂದಿವಾಲಾಗಳಿಗೆ ಕಿಚ್ಚನ ಪಂಚ್.!
ಮತ್ತೆ ಕೆಲವು ಮೂಲಗಳ ಪ್ರಕಾರ ನಟ, ನಿರ್ಮಾಪಕರ ಮುರಳಿ ಜೊತೆಗೆ ಸಿತಾರಾ ಉತ್ತಮ ಬಾಂಧವ್ಯ ಹೊಂದಿದ್ದರಂತೆ. ಇವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್ ಕೂಡ ಕೇಳಿಬಂದಿತ್ತು. 2010ರಲ್ಲಿ ಮುರಳಿ ಹೃದಯಾಘಾತದಿಂದ ವಿಧಿವಶರಾದರು. ಮುರಳಿ ಸಾವಿನ ಬಳಿಕ ಸಿತಾರಾ ಖಿನ್ನತೆಗೆ ಒಳಗಾದರಂತೆ. ತಂದೆಯ ಸಾವಿನಿಂದ ಮಾನಸಿಕವಾಗಿ ಕುಗ್ಗಿದ್ದ ಸಿತಾರಾ ಅವರ ಮನಸ್ಸನ್ನು ಮುರಳಿ ಅವರ ನಿಧನ ಮತ್ತಷ್ಟು ದೃಢಿಗೆಡಿಸುತ್ತದೆ. ಈ ಘಟನೆಗಳಿಂದ ಸಿತಾರಾ ಮದುವೆಯೇ ಬೇಡ ಎಂಬ ನಿರ್ಧಾರಕ್ಕೆ ಬಂದರಂತೆ ಎನ್ನಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.