Weekly Numerology: ನಿಮ್ಮ ಜನ್ಮದಿನಕ್ಕೆ ಅನುಸಾರವಾಗಿ ಈ ವಾರದ ನಿಮ್ಮ ಸಂಖ್ಯಾಶಾಸ್ತ್ರ ಏನು ಹೇಳುತ್ತೆ?

Weekly Numerology Horoscope: ಇನ್ನೆರಡು ದಿನಗಳಲ್ಲಿ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬವನ್ನು ಆಚರಿಸಲಿದ್ದೇವೆ. ಈ ಕಾರಣದಿಂದಾಗಿ ಈ ವಾರ ತುಂಬಾ ವಿಶೇಷವಾಗಿದೆ. ಹಿಂದೂ ಹೊಸ ವರ್ಷದ ಆರಂಭದ ಈ ವಾರ ನಿಮ್ಮ ಸಂಖ್ಯಾ ಶಾಸ್ತ್ರ ಏನು ಹೇಳುತ್ತೆ? ನಿಮ್ಮ ಜನ್ಮದಿನಕ್ಕೆ ಅನುಸಾರವಾಗಿ ಈ ವಾರ ನಿಮ್ಮ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ ತಿಳಿಯೋಣ...  

Written by - Yashaswini V | Last Updated : Mar 20, 2023, 08:33 AM IST
  • ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕದ ಮೊತ್ತವನ್ನು ರಾಡಿಕ್ಸ್ ಎಂದು ಕರೆಯಲಾಗುತ್ತದೆ.
  • ಉದಾಹರಣೆಗೆ ಯಾವುದೇ ತಿಂಗಳ 6, 15 ಅಥವಾ 24ನೇ ತಾರೀಕಿನಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 6 ಆಗಿರುತ್ತದೆ.
  • ಈ ವಾರದ ನಿಮ್ಮ ಸಂಖ್ಯಾ ಶಾಸ್ತ್ರ ಹೇಗಿದೆ ಎಂದು ತಿಳಿಯೋಣ.
Weekly Numerology: ನಿಮ್ಮ ಜನ್ಮದಿನಕ್ಕೆ ಅನುಸಾರವಾಗಿ ಈ ವಾರದ ನಿಮ್ಮ ಸಂಖ್ಯಾಶಾಸ್ತ್ರ ಏನು ಹೇಳುತ್ತೆ? title=
Weekly Numerology In Kannada

Weekly Numerology 20 to 26 March 2023 in Kannada: ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾಶಾಸ್ತ್ರಕ್ಕೂ ಕೂಡ ಬಹಳ ಮಹತ್ವವಿದೆ. ಸಂಖ್ಯಾಶಾಸ್ತ್ರದಲ್ಲಿ  ಹುಟ್ಟಿದ ದಿನಾಂಕದ ಮೊತ್ತವನ್ನು ರಾಡಿಕ್ಸ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಯಾವುದೇ ತಿಂಗಳ 6, 15 ಅಥವಾ 24ನೇ ತಾರೀಕಿನಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 6 ಆಗಿರುತ್ತದೆ.  ಹಿಂದೂ ಹೊಸ ವರ್ಷದ ಆರಂಭದ ಈ ವಾರದ ಸಾಪ್ತಾಹಿಕ ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನದಂದು ಜನಸಿದವರಿಗೆ ತುಂಬಾ ಶುಭ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ವಾರದ ನಿಮ್ಮ ಸಂಖ್ಯಾ ಶಾಸ್ತ್ರ ಹೇಗಿದೆ ಎಂದು ತಿಳಿಯೋಣ.

ಈ ವಾರದ ನಿಮ್ಮ ಸಾಪ್ತಾಹಿಕ ಸಂಖ್ಯಾಶಾಸ್ತ್ರ ಹೇಗಿದೆ ತಿಳಿಯಿರಿ...
ರಾಡಿಕ್ಸ್ 1: 

ಸಂಖ್ಯಾಶಾಸ್ತ್ರದ ಪ್ರಕಾರ, ಈ ವಾರ ರಾಡಿಕ್ಸ್ 1ರ ಸ್ಥಳೀಯರಿಗೆ ತುಂಬಾ ಅದೃಷ್ಟದ ವಾರ ಎಂದು ಹೇಳಲಾಗಿದೆ. ಈ ವಾರ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು, ಕೀರ್ತಿ ಜೊತೆಗೆ ಪ್ರೇಮ ಜೀವನವೂ ಅದ್ಭುತವಾಗಿರಲಿದೆ.

ರಾಡಿಕ್ಸ್ 2:
ರಾಡಿಕ್ಸ್ 2ರ ಸ್ಥಳೀಯರು ಈ ವಾರ ಉದ್ಯೋಗದಲ್ಲಿ ಪ್ರಮೋಷನ್ ಪಡೆಯುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೂ ಕೂಡ ಉತ್ತಮ ವಾರ ಎಂತಲೇ ಹೇಳಬಹುದು. ದಾಂಪತ್ಯ ಜೀವನವೂ ಮಧುರವಾಗಿರಲಿದೆ.

ಇದನ್ನೂ ಓದಿ- ಜೀವನದಲ್ಲಿ ಘಟಿಸುವ ಈ ಐದು ಘಟನೆಗಳು ನೀಡುತ್ತದೆ ಧನಾಗಮನದ ಸಂಕೇತ

ರಾಡಿಕ್ಸ್ 3:
ಈ ವಾರ ನಿಮ್ಮ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ಪೂರ್ಣಗೊಲ್ಲಳಿವೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳೀಯರಿಗೆ ಯಶಸ್ಸು ದೊರೆಯಲಿದೆ. ಹಣಕಾಸಿನ ವಿಚಾರದಲ್ಲೂ ಕೂಡ ನೆಮ್ಮದಿನ ನಿಟ್ಟುಸಿರು ಬಿಡುವ ವಾರ ಇದಾಗಿದೆ.

ರಾಡಿಕ್ಸ್ 4:
ರಾಡಿಕ್ಸ್ 4ರ ಸ್ಥಳೀಯರು ನಿಮ್ಮ ಚಾಣಾಕ್ಷ ಕಾರ್ಯದಿಂದಾಗಿ ಪ್ರತಿಯೊಬ್ಬರಿಗೂ ಆಕರ್ಷಣೆಯ ಕೇಂದ್ರಬಿಂದು ಆಗುತ್ತೀರಿ. ಸಮಾಜದಲ್ಲಿ ಗೌರವ-ಕೀರ್ತಿ ಹೆಚ್ಚಾಗಲಿದೆ. 

ರಾಡಿಕ್ಸ್ 5:
ರಾಡಿಕ್ಸ್ 5ರ ಜನರಿಗೆ ಈ ವಾರ ಉದ್ಯೋಗ ರಂಗದಲ್ಲಿ ಕೀರ್ತಿ, ಯಶಸ್ಸು ಲಭಿಸಲಿದೆ. ಇದಲ್ಲದೆ, ಆಸ್ತಿ-ವ್ಯವಹಾರಕ್ಕೆ ಸಂಬಂಧಿಸಿದ ನಿಮ್ಮ ಹಳೆಯ ಸಮಸ್ಯೆಗಳು ಈ ವಾರ ದೂರವಾಗಿ ಅಂತಿಮ ಘಟ್ಟ ತಲುಪಬಹುದು ಎಂದು ಹೇಳಲಾಗುತ್ತಿದೆ.

ರಾಡಿಕ್ಸ್ 6:
ರಾಡಿಕ್ಸ್ 6ರ ಸ್ಥಳೀಯರಿಗೆ ಈ ವಾರ ತುಂಬಾ ಶುಭ ಎಂದು ಹೇಳಲಾಗುತ್ತಿದೆ. ನಿಮ್ಮ ವೃತ್ತಿ ರಂಗಕ್ಕೆ ಸಂಬಂಧಿಸಿದಂತೆ ನಿಮ್ಮ ಬಹುದಿನದ ಕನಸು ಈ ಸಮಯದಲ್ಲಿ ನನಸಾಗುವ ಸಾಧ್ಯತೆ ಇದೆ. ಆದರೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಮೂರನೇ ವ್ಯಕ್ತಿ ಕಲಹ ಉಂಟು ಮಾಡಲು ಆಸ್ಪದ ನೀಡದಿರಿ.

ಇದನ್ನೂ ಓದಿ- ಶತ್ರುವಿನ ರಾಶಿಯಲ್ಲಿ ಗ್ರಹಗಳ ಸೇನಾಪತಿಯ ವಾಸ, ಧನಹಾನಿಯ ಯೋಗ, ಈ ಜನರು ಎಚ್ಚರದಿಂದಿರಬೇಕು!

ರಾಡಿಕ್ಸ್ 7: 
ರಾಡಿಕ್ಸ್ 7ರ ಸ್ಥಳೀಯರು ತಮ್ಮ ಕೆಲಸದಿಂದ ಜನರನ್ನು ತಮ್ಮತ್ತ ಆಕರ್ಷಿಸುತ್ತಾರೆ. ಹಠಾತ್ ಹಣಕಾಸಿನ ಲಾಭದಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. 

ರಾಡಿಕ್ಸ್ 8:
ರಾಡಿಕ್ಸ್ 8ರ ಸ್ಥಳೀಯರಿಗೆ ಈ ವಾರ ಆತ್ಮವಿಶ್ವಾಸ ಹೆಚ್ಚಾಗುವ ಸಾಧ್ಯತೆ ಇದೆ. ಇದು ನಿಮ್ಮ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲಿದೆ. ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. 

ರಾಡಿಕ್ಸ್ 9:
ಸಾಪ್ತಾಹಿಕ ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ 9ರ ಸ್ಥಳೀಯರು ಈ ವಾರ ಕೆಲಸ ಕಾರ್ಯಗಳಲ್ಲಿ ತ್ವರಿತ ಪ್ರಗತಿ ಸಾಧಿಸುವರು. ಹಣವು ಲಾಭದಾಯಕವಾಗಿರಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News