ಬೆಂಗಳೂರು : ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಹದಿನಾರನೇ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನ ಆರ್.ಸಿ.ಬಿ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರಂಭಿಸಿದೆ.
ಇದನ್ನೂ ಓದಿ: IPL 2023ರ ಮೊದಲ ಪಂದ್ಯದಲ್ಲಿಯೇ ಧೋನಿ ನಾಯಕತ್ವದ CSK ಸೋಲಲು ಕನ್ನಡದ ಈ ಖ್ಯಾತ ನಟಿ ಕಾರಣ!
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬೆಂಗಳೂರು ತಂಡ ಆರಂಭದಿಂದಲೇ ಮುಂಬೈ ಬ್ಯಾಟ್ಸ್ಮನ್ಗಳನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ತಮ್ಮ ಎರಡನೇ ಓವರ್ನಲ್ಲಿ ಮುಂಬೈ ಆರಂಭಿಕ ಇಶಾನ್ ಕಿಶನ್ ರ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಆರ್.ಸಿ.ಬಿಗೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ನಂತರ ಬಂದ ಕ್ಯಾಮರೂನ್ ಗ್ರೀನ್, ಆರಂಭಿಕ ಆಟಗಾರ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಸೇರಿದರು.
ಇದನ್ನೂ ಓದಿ: IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್!
ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ತಿಲಕ್ ವರ್ಮಾ 46 ಎಸೆತಗಳಲ್ಲಿ 4 ಸಿಕ್ಸರ್ 9 ಬೌಂಡರಿಗಳ ಸಹಿತ ಅಜೇಯ 84 ರನ್ ಗಳಿಸುವ ಮೂಲಕ ಆರ್.ಸಿ.ಬಿ ಬೌಲರ್ಗಳ ಬೆವರಿಳಿಸಿದರು. ಹೀಗಾಗಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇನ್ನೂ ಆರ್ ಸಿಬಿ ಪರ ಹರ್ಷಲ್ ಪಟೇಲ್ ನಾಲ್ಕು ಓವರ್ ಎಸೆದು 43 ರನ್ ನೀಡಿ ದುಬಾರಿಯಾದರು.ಕರಣ್ ಶರ್ಮಾ 32 ರನ್ ನೀಡಿ 2 ವಿಕೆಟ್ ಕಬಳಿಸಿದರು. ಸಿರಾಜ್ 1, ಫಿಲ್ಮಿಂಡ್ ಮಾಡುವಾಗ ಗಾಯಗೊಂಡ ಟೋಪ್ಲೆ 1, ಅರ್ಷದೀಪ್1,ಬ್ರೇಸ್ಬೆಲ್ 1 ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.