ಇನ್ನು 48 ಗಂಟೆಗಳಲ್ಲಿ ಈ ರಾಶಿಯವರಿಗೆ ಅಪಾರ ಪ್ರಮಾಣದ ಧನ ಸಂಪತ್ತು ಕರುಣಿಸಲಿದ್ದಾನೆ ಶುಕ್ರ

Venus transit effect :ಇತ್ತೀಚೆಗೆ, ಶುಕ್ರ ಗ್ರಹವು  ವೃಷಭ ರಾಶಿಯನ್ನು ಪ್ರವೇಶಿಸಿದೆ. ಶುಕ್ರವು ವೃಷಭ ರಾಶಿಯ ಅಧಿಪತಿಯಾಗಿದ್ದು, ಶುಕ್ರವು ತನ್ನದೇ ಆದ ರಾಶಿಯನ್ನು ಪ್ರವೇಶಿಸಿದ್ದು, ಬಹಳ ಮುಖ್ಯವಾದ ಪರಿಣಾಮವನ್ನು ಬೀರುತ್ತದೆ. 

Written by - Ranjitha R K | Last Updated : Apr 10, 2023, 05:13 PM IST
  • ಶುಕ್ರ ಪ್ರೀತಿ, ಮದುವೆ, ಐಷಾರಾಮಿ ಜೀವನ ಮತ್ತು ಸಂಪತ್ತಿನ ಗ್ರಹ
  • ಇತ್ತೀಚೆಗೆ, ಶುಕ್ರ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ.
  • ರೂಪುಗೊಳ್ಳುತ್ತದೆ ಮಹಾದಾನ ರಾಜಯೋಗ
ಇನ್ನು 48 ಗಂಟೆಗಳಲ್ಲಿ ಈ ರಾಶಿಯವರಿಗೆ ಅಪಾರ ಪ್ರಮಾಣದ ಧನ ಸಂಪತ್ತು ಕರುಣಿಸಲಿದ್ದಾನೆ ಶುಕ್ರ   title=

ಬೆಂಗಳೂರು :  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ಪ್ರೀತಿ, ಮದುವೆ, ಐಷಾರಾಮಿ ಜೀವನ ಮತ್ತು ಸಂಪತ್ತಿನ ಗ್ರಹ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಲಾಭದಾಯಕ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿಯೂ ಅದೃಷ್ಟ ಒದಗಿ ಬರಲಿದೆ.  ಅವರ ಪ್ರೇಮ ಜೀವನ, ವೈವಾಹಿಕ ಜೀವನ ಕೂಡಾ ಉತ್ತಮವಾಗಿರುತ್ತದೆ.  ಈ ರೀತಿಯಾಗಿ ಐಷಾರಾಮಿ ಜೀವನವನ್ನು ಆನಂದಿಸುತ್ತಾನೆ.

ಇತ್ತೀಚೆಗೆ, ಶುಕ್ರ ಗ್ರಹವು  ವೃಷಭ ರಾಶಿಯನ್ನು ಪ್ರವೇಶಿಸಿದೆ. ಶುಕ್ರವು ವೃಷಭ ರಾಶಿಯ ಅಧಿಪತಿಯಾಗಿದ್ದು, ಶುಕ್ರ ತನ್ನದೇ ಆದ ರಾಶಿಯನ್ನು ಪ್ರವೇಶಿಸಿದ್ದು, ಬಹಳ ಮುಖ್ಯವಾದ ಪರಿಣಾಮವನ್ನು ಬೀರುತ್ತದೆ. ಇದರೊಂದಿಗೆ ಶುಕ್ರ ಗ್ರಹವು ವೃಷಭರಾಶಿಯಲ್ಲಿ ಸಂಕ್ರಮಿಸುವುದರಿಂದ ಮಹಾದಾನ ರಾಜಯೋಗ ರೂಪುಗೊಳ್ಳುತ್ತದೆ. ಏಪ್ರಿಲ್ 12 ರಂದು  
ವೃಷಭ ರಾಶಿಯಲ್ಲಿ ಶುಕ್ರನ ಸ್ಥಿತಿ ಅತ್ಯಂತ ಲಾಭದಾಯಕ ಸ್ಥಾನದಲ್ಲಿರುತ್ತದೆ. ಈ ರಾಜಯೋಗವು ಈ ರಾಶಿಯವರಿಗೆ ಅನುಕೂಲಕರವಾಗಿದೆ. 

ಇದನ್ನೂ ಓದಿ ಈ ಬಾರಿಯದ್ದು ಹೈಬ್ರಿಡ್ ಸೂರ್ಯಗ್ರಹಣ ! 100 ವರ್ಷಗಳ ನಂತರ ಸಂಭವಿಸುತ್ತಿದೆ ಇಂಥಹ ಗ್ರಹಣ !

ಈ ರಾಶಿಯವರ ಅದೃಷ್ಟ ಬೆಳಗುತ್ತಾನೆ ಶುಕ್ರ : 
ವೃಷಭ ರಾಶಿ : ಶುಕ್ರನು ವೃಷಭ ರಾಶಿಯವರಿಗೆ ಪ್ರವೇಶ ಮಾಡುವುದರೊಂದಿಗೆ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುತ್ತದೆ. ಈ ರಾಶಿಯವರ ಗೌರವ ಹೆಚ್ಚಾಗುತ್ತದೆ. ಇವರಿಗೆ ಧನಲಾಭಾವಾಗುವುದು. ಗ್ಲಾಮರ್ ಕ್ಷೇತ್ರಕ್ಕೆ ಸಂಬಂಧಿಸಿದವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ.

ಕರ್ಕಾಟಕ ರಾಶಿ: ಶುಕ್ರ ಸಂಕ್ರಮಣ ಕರ್ಕಾಟಕ ರಾಶಿಯವರಿಗೂ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ವ್ಯಾಪಾರ ವರ್ಗಕ್ಕೆ ದೊಡ್ಡ ಮಟ್ಟದ ಆರ್ಡರ್ ಸಿಗುವುದು. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರಲಿದೆ. 

ಕನ್ಯಾ ರಾಶಿ : ಶುಕ್ರನ ಸಂಚಾರವು ಕನ್ಯಾ ರಾಶಿಯವರಿಗೆ ಅಪಾಯಕಾರಿ ಹೂಡಿಕೆಗಳಿಂದಲೂ ಲಾಭವನ್ನು ನೀಡುತ್ತದೆ. ಧರ್ಮ ಮತ್ತು ಕೆಲಸದಲ್ಲಿ ಆಸಕ್ತಿ ಇರುತ್ತದೆ. ವಿದೇಶಕ್ಕೆ ಹೋಗುವ ಕನಸು ನನಸಾಗಬಹುದು.

ಇದನ್ನೂ ಓದಿ : Shani Dev: ಕೆಲವೇ ಗಂಟೆಗಳ ಬಳಿಕ 3 ರಾಶಿಗಳ ಮೇಲೆ ಶನಿಯ ಕೃಪಾವೃಷ್ಟಿ, ಶುಭ ದಶಮ ದೃಷ್ಟಿಯಿಂದ ಅಪಾರ ಧನ ಪ್ರಾಪ್ತಿಯ ಯೋಗ!

ಸಿಂಹ ರಾಶಿ:  ಸಿಂಹ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ದೊಡ್ಡ ಸ್ಥಾನಮಾನ ಪಡೆಯುವುದು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಸಿಗಬಹುದು. 

 ( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News