Gold Price Today: ಸತತ ಇಳಿಕೆಯ ಬಳಿಕ ಏರಿಕೆ ಕಂಡ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಹೇಗಿದೆ ತಿಳಿಯಿರಿ

Gold Price Today: ರಾಜ್ಯ ರಾಜಧಾನಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,910 ರೂ. ಆಗಿದೆ. ಆದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕೇವಲ 1 ರೂ, ಏರಿಕೆ ಕಂಡುಬಂದಿದೆ. ಇನ್ನು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 60,990 ರೂ. ಇದೆ.

Written by - Bhavishya Shetty | Last Updated : Apr 26, 2023, 10:05 AM IST
    • ರಾಜ್ಯ ರಾಜಧಾನಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,910 ರೂ. ಆಗಿದೆ.
    • ಚಿನ್ನದ ಬೆಲೆಯಲ್ಲಿ ಕೇವಲ 1 ರೂ, ಏರಿಕೆ ಕಂಡುಬಂದಿದೆ
    • ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್ ಹಾಲ್ ಮಾರ್ಕ್‌’ಗಳನ್ನು ನೀಡುತ್ತದೆ.
Gold Price Today: ಸತತ ಇಳಿಕೆಯ ಬಳಿಕ ಏರಿಕೆ ಕಂಡ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಹೇಗಿದೆ ತಿಳಿಯಿರಿ title=
gold price

Gold Price Today: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು. ಆದರೆ ಇಂದು ಮತ್ತೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿಮುಟ್ಟಿದಂತಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,850 ರೂ. ಆಗಿದೆ.  ಹಿಂದಿನ ದಿನ ಈ ಬೆಲೆ 55,650 ಆಗಿತ್ತು. ಅಂದರೆ ಇಂದು 200 ರೂಪಾಯಿ ಏರಿಕೆಯಾಗಿದೆ. ಇನ್ನೊಂದೆಡೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 60,930 ರೂ.ಆಗಿದೆ. ಹಿಂದಿನ ದಿನ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,710 ರೂ. ಇತ್ತು. ಆದರೆ ಇಂದು 220 ರೂಪಾಯಿ ಏರಿಕೆಯಾಗಿದೆ.

ಇದನ್ನೂ ಓದಿ: Gajlaxmi Rajyog 2023: 12 ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ದಿಢೀರ್ ಧನಲಾಭ; ಕೈ ಹಾಕಿದ ಪ್ರತೀ ಕೆಲಸದಲ್ಲಿ ಯಶಸ್ಸು!

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಹೀಗಿದೆ’:

ರಾಜ್ಯ ರಾಜಧಾನಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,910 ರೂ. ಆಗಿದೆ. ಆದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕೇವಲ 1 ರೂ, ಏರಿಕೆ ಕಂಡುಬಂದಿದೆ. ಇನ್ನು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 60,990 ರೂ. ಇದೆ.

ಚಿನ್ನದ ಶುದ್ಧತೆ ತಿಳಿಯುವುದು ಹೇಗೆ?

ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್ ಹಾಲ್ ಮಾರ್ಕ್‌’ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್‌’ನಲ್ಲಿ 958, 22 ಕ್ಯಾರೆಟ್‌ನಲ್ಲಿ 916, 21 ಕ್ಯಾರೆಟ್‌ನಲ್ಲಿ 875 ಮತ್ತು 18 ಕ್ಯಾರೆಟ್‌ನಲ್ಲಿ 750 ಎಂದು ಬರೆಯಲಾಗಿದೆ. ಹೆಚ್ಚಾಗಿ ಚಿನ್ನವನ್ನು 22 ಕ್ಯಾರೆಟ್‌’ಗಳಲ್ಲಿ ಮಾರಾಟ ಮಾಡಲಾಗುತ್ತದೆ.

22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು ಗೊತ್ತಾ?

24 ಕ್ಯಾರೆಟ್ ಚಿನ್ನವು 99.9% ಶುದ್ಧ ಮತ್ತು 22 ಕ್ಯಾರೆಟ್ ಸುಮಾರು 91 ಪ್ರತಿಶತ ಶುದ್ಧವಾಗಿರುತ್ತದೆ. 22 ಕ್ಯಾರೆಟ್ ಚಿನ್ನದಲ್ಲಿ ತಾಮ್ರ, ಬೆಳ್ಳಿ, ಸತು ಮುಂತಾದ ಇತರ ಲೋಹಗಳನ್ನು ಶೇ.9 ರಷ್ಟು ಮಿಶ್ರಣ ಮಾಡಿ ಆಭರಣಗಳನ್ನು ತಯಾರಿಸಲಾಗುತ್ತದೆ. 24K ಚಿನ್ನವು ಐಷಾರಾಮಿಯಾಗಿದ್ದರೂ, ಅದನ್ನು ಆಭರಣಗಳನ್ನು ತಯಾರಿಸಲು ಬಳಸಲಾಗುವುದಿಲ್ಲ.

ಇದನ್ನೂ ಓದಿ: Mangal Gochar 2023: ಈ ರಾಶಿಯವರ ಭಾಗ್ಯದ ಬಾಗಿಲು ತೆರೆದ ಮಂಗಳ: ಮುಂದಿನ 45 ದಿನ ಹೆಜ್ಜೆ ಹೆಜ್ಜೆಗೂ ಜಯ; ದಿಢೀರ್ ಧನಲಾಭ

ಮಿಸ್ಡ್ ಕಾಲ್ ಮೂಲಕ ಬೆಲೆ ತಿಳಿಯಿರಿ:

22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನಾಭರಣಗಳ ಚಿಲ್ಲರೆ ದರವನ್ನು ತಿಳಿಯಲು, ನೀವು 8955664433ಗೆ ಮಿಸ್ಡ್ ಕಾಲ್ ನೀಡಬಹುದು. ಕಡಿಮೆ ಸಮಯದಲ್ಲಿ SMS ಮೂಲಕ ದರಗಳನ್ನು ಸ್ವೀಕರಿಸಲಾಗುತ್ತದೆ. ಇದಲ್ಲದೆ, ನಿರಂತರ ಅಪ್ಡೇಟ್’ಗಳನ್ನು ತಿಳಿಯಲು ನೀವು www.ibja.co ಅಥವಾ ibjarates.com ಗೆ ಭೇಟಿ ನೀಡಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News