Python With Little Kid Video : ಹಾವು ಎದುರಿಗೆ ಬರಬೇಕು ಎಂದಿಲ್ಲ ಹಾವಿನ ಹೆಸರು ಕೇಳಿದರೆ ಸಾಕು ಕೈ ಕಾಲು ನಡುಗಿ ಬಿಡುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ ಒಂದಾಗಿದೆ. ಹಾವಿನಲ್ಲಿ ಅನೇಕ ವಿಧಗಳಿವೆ. ಕೆಲವು ಮಾರಣಾಂತಿಕ ವಿಷವನ್ನು ಹೊಂದಿದ್ದು, ಕಚ್ಚಿದ ಕೂಡಲೇ ಮನುಷ್ಯನ ಉಸಿರು ನಿಲ್ಲುತ್ತದೆ. ಇನ್ನು ಕೆಲವು ನಿರುಪದ್ರವಿಗಳಾಗಿರುತ್ತವೆ. ಮತ್ತೆ ಕೆಲವು ಪ್ರಾಣಿಗಳನ್ನು ಮನುಷ್ಯರನ್ನು ಜೀವಂತವಾಗಿ ನುಂಗಿ ಬಿಡುವಷ್ಟು ಅಪಾಯಕಾರಿ.
ಸಾಮಾನ್ಯವಾಗಿ ಈ ಸರೀಸೃಪಗಳು ಕಾಡಿನಲ್ಲಿ ವಾಸಿಸುತ್ತವೆ. ಆದರೆ ಕೆಲವರು ಈ ಅಪಾಯಕಾರಿ ಪ್ರಾಣಿಗಳನ್ನು ಕೂಡಾ ಸಾಕುಪ್ರಾಣಿಗಳನ್ನಾಗಿ ಮಾಡಿಬಿಡುತ್ತಾರೆ. ಇದು ಅತ್ಯಂತ ಅಪಾಯಕಾರಿ. ಹೀಗೆ ಈ ಅಪಾಯಕಾರಿ ಹಾವುಗಳನ್ನು ಮನೆಯಲ್ಲಿ ಸಾಕುವ ಅನೇಕರು ಈ ಹಾವುಗಳೊಂದಿಗೆ ವಿಡಿಯೋ ಮಾಡಿ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುತ್ತಾರೆ.
ಇದನ್ನೂ ಓದಿ : Viral News : ಮನುಷ್ಯನಂತೆಯೇ ಮುಖ ಹೊಂದಿರುವ ಮೀನು.! ನಿಬ್ಬೆರಗಾದ ನಟ್ಟಿಗರು
ಈ ಹುಡುಗಿ ನಿದ್ದೆಗೆ ಜಾರಬೇಕಾದರೆ ಹಾವುಗಳಿರಲೇ ಬೇಕು :
ಹಾವುಗಳು ತನ್ನ ಹಾಸಿಗೆಯ ಮೇಲೆ ತೆವಳುತ್ತಾ ಇದ್ದರೆ ಮಾತ್ರ ಈ ಬಾಲಕಿಗೆ ನಿದ್ದೆ ಬರುತ್ತದೆಯಂತೆ. ಈ ಪುಟ್ಟ ಬಾಲಕಿಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಕುತೂಹಲ ಮತ್ತು ಭಯ ಎರಡನ್ನೂ ಹುಟ್ಟುಹಾಕಿದೆ. ಹಾವು ಎಂದರೆ ಯಾವುದೋ ಸಣ್ಣ ಪುಟ್ಟ ಹಾವುಗಳಲ್ಲ. ದೈತ್ಯಾಕಾರದ ಹೆಬ್ಬಾವುಗಳನ್ನು ಹಾಸಿಗೆಯಲ್ಲಿ ತನ್ನ ಪಕ್ಕ ಬಿಟ್ಟುಕೊಂಡೆ ಈ ಬಾಲಕಿ ಮಲಗುತ್ತಾಳೆ.
ಚಿಕ್ಕ ಹುಡುಗಿ ಹಲವಾರು ದೈತ್ಯ ಹಾವುಗಳನ್ನುಪಕ್ಕದಲ್ಲಿ ಇರಿಸಿಕೊಂಡು ಮಲಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹುಡುಗಿಯ ಪಕ್ಕದಲ್ಲಿ ರಾಶಿ ರಾಶಿ ಹಾವುಗಳು ತೆವಳುತ್ತಿರುವುದನ್ನು ಕೂಡಾ ಗಮನಿಸಬಹುದು. ಕೆಲವು ಹಾವುಗಳು ಹುಡುಗಿಯ ಮೈಯನ್ನೇ ಸುತ್ತಿಕೊಂಡಿವೆ. ಈ ವಿಡಿಯೋವನ್ನು ನೋಡುವಾಗ ವಿಚಿತ್ರ ಎಂದೆನಿಸುತ್ತದೆ. ಆದರೆ ಈ ಹುಡುಗಿ ನಿತ್ಯ ಮಲಗುವುದೇ ಈ ರೀತಿ.
ಇದನ್ನೂ ಓದಿ : Viral Video : ಹುಲಿಯೊಂದಿಗೆ ಕಾದಾಡುತ್ತಿರುವ ಮಂಗ..ಮುಂದೇನಾಯ್ತು ನೀವೇ ನೋಡಿ!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ :
ಕ್ಲಿಪ್ ಅನ್ನು Instagram ನಲ್ಲಿ @Snakemasterexotis ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಬಹಳಷ್ಟು ಮಂದಿ ವೀಕ್ಷಿಸಿದ್ದಾರೆ. ಮತ್ತು ಕಾಮೆಂಟ್ ಗಳನ್ನೂ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.