ಪಾಕ್ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಈ ಬ್ಯಾಟರ್ ಬಾಂಗ್ಲಾ ಪಂದ್ಯದಿಂದ ರೂಲ್ಡೌಟ್! ಬದಲಿಯಾಗಿ ಆಡೋದು ಈ ಕಿಲಾಡಿ

Former Chief Selector MSK Prasad: ಪಾಕ್ ವಿರುದ್ಧ ಅದ್ಭುತ ವೈಂಡಪ್ ಮಾಡಿದ್ದ ಅಯ್ಯರ್ ಮುಂದಿನ ಪಂದ್ಯದಿಂದ ಹೊರಗುಳಿಯಬಹುದೇನೋ ಎಂಬ ಅನುಮಾನ ಮೂಡಿದೆ, ಇದಕ್ಕೆ ಕಾರಣ ಟೀಂ ಇಂಡಿಯಾದ ಮಾಜಿ ದಿಗ್ಗಜ ಆಟಗಾರನೋರ್ವ ನೀಡಿದ ಹೇಳಿಕೆ.

Written by - Bhavishya Shetty | Last Updated : Oct 18, 2023, 03:23 PM IST
    • ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರನೊಬ್ಬ ಆಡುವುದು ಅನುಮಾನ
    • ಪಾಕ್ ವಿರುದ್ಧ ಅದ್ಭುತ ವೈಂಡಪ್ ಮಾಡಿದ್ದ ಬ್ಯಾಟರ್
    • ಎಂಸಿಎ ಸ್ಟೇಡಿಯಂನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ
ಪಾಕ್ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಈ ಬ್ಯಾಟರ್ ಬಾಂಗ್ಲಾ ಪಂದ್ಯದಿಂದ ರೂಲ್ಡೌಟ್! ಬದಲಿಯಾಗಿ ಆಡೋದು ಈ ಕಿಲಾಡಿ title=
India vs Bangladesh

World Cup 2023: ಸದ್ಯ ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಸಖತ್ ಕ್ರೇಜ್ ಹುಟ್ಟುಹಾಕುತ್ತಿದೆ. ಈ ಎಲ್ಲದರ ಜೊತೆಗೆ ಟೀಂ ಇಂಡಿಯಾ ಕೂಡ ಅದ್ಭುತವಾಗಿ ಆಟವಾಡುತ್ತಿದ್ದು, ಗೆಲುವಿನ ನಾಗಾಲೋಟ ಮುಂದುವರೆದಿದೆ. ಆದರೆ ನಾಳೆ ಅಂದರೆ ಅಕ್ಟೋಬರ್ 19ರಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಟಗಾರನೊಬ್ಬ ಆಡುವುದು ಅನುಮಾನ ಎಂದನಿಸುತ್ತಿದೆ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಬಿತ್ತು ಅಧಿಕೃತ ಮುದ್ರೆ  : ತುಟ್ಟಿಭತ್ಯೆ ಏರಿಕೆಗೆ ಸರ್ಕಾರ ಅನುಮೋದನೆ 

ಈ ಆಟಗಾರ ಬೇರಾರು ಅಲ್ಲ ಶ್ರೇಯಸ್ ಅಯ್ಯರ್, ಪಾಕ್ ವಿರುದ್ಧ ಅದ್ಭುತ ವೈಂಡಪ್ ಮಾಡಿದ್ದ ಅಯ್ಯರ್ ಮುಂದಿನ ಪಂದ್ಯದಿಂದ ಹೊರಗುಳಿಯಬಹುದೇನೋ ಎಂಬ ಅನುಮಾನ ಮೂಡಿದೆ, ಇದಕ್ಕೆ ಕಾರಣ ಟೀಂ ಇಂಡಿಯಾದ ಮಾಜಿ ದಿಗ್ಗಜ ಆಟಗಾರನೋರ್ವ ನೀ

ಡಿದ ಹೇಳಿಕೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಸತತ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆಬೀರಿರುವ ಟೀಂ ಇಂಡಿಯಾ, ವಿಶ್ವಟೂರ್ನಿಯಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಳ್ಳಲು ತಯಾರಿ ನಡೆಸುತ್ತಿದೆ.

ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆಗಳು ಇವೆಯೇ? ಶಾರ್ದೂಲ್ ಠಾಕೂರ್ ಶಮಿಗೆ ದಾರಿ ಮಾಡಿಕೊಡುತ್ತಾರೆಯೇ? ಎಂಬೆಲ್ಲಾ ವಿಚಾರದ ಬಗ್ಗೆ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಮಾತನಾಡಿದ್ದಾರೆ.

"ರಾಹುಲ್ ದ್ರಾವಿಡ್ ಕೋರ್ಸ್‌’ಗಳಿಗೆ ಕುದುರೆಗಳನ್ನು ಬಳಸುತ್ತಿದ್ದಾರೆ. ಇದು ತಂಡಕ್ಕೆ ಅದ್ಭುತವಾಗಿ ಕೆಲಸ ಮಾಡುತ್ತಿದೆ. ನೀವು ಗಮನಿಸಿರಬಹುದು… ಚೆನ್ನೈನಲ್ಲಿ ಅಶ್ವಿನ್ ಮತ್ತು ಇತರ ಎರಡು ಪಂದ್ಯಗಳಲ್ಲಿ (ದೆಹಲಿ ಮತ್ತು ಅಹಮದಾಬಾದ್‌) ಶಾರ್ದೂಲ್ ಅವರನ್ನು ಬಳಸಲಾಯಿತು" ಎಂದು ಹೇಳಿದ್ದಾರೆ.

ಇದನ್ನೂ ಓದಿ: Daily GK Quiz: ಹುಟ್ಟಿನಿಂದ ಸಾಯುವವರೆಗೂ ನಿದ್ರೆ ಮಾಡದ ಜೀವಿ ಯಾವುದು?

“ಸಿರಾಜ್ ಬದಲಿಗೆ ಶಮಿಗೆ ಸ್ಥಾನ ನೀಡಬಹುದು. ಬದಲಿಗಳು ಯಾರೆಂದೂ ಸಹ ಸ್ಪಷ್ಟವಾಗಿದೆ. ಅಗತ್ಯವಿದ್ದರೆ ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಬಹುದು" ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News