Ghee Benefits For Weight Gain And Loss: ಶತಮಾನಗಳಿಂದ ಪ್ರತಿ ಭಾರತೀಯ ಅಡುಗೆ ಮನೆಯ ರಾಜ ಎಂದರೆ 'ತುಪ್ಪ'. ಪೌಷ್ಠಿಕ ಗುಣಗಳಿಂದ ಸಮೃದ್ಧವಾಗಿರುವ ತುಪ್ಪ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಅದರಲ್ಲೂ ತೂಕ ಹೆಚ್ಚಳ ಮತ್ತು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ತುಪ್ಪ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ.
ಹೌದು, ಆಯುರ್ವೇದದ ಪ್ರಕಾರ, ತೂಕ ಹೆಚ್ಚಳ ಮತ್ತು ತೂಕ ಇಳಿಕೆ ಎರಡರಲ್ಲೂ ತುಪ್ಪ ತುಂಬಾ ಪ್ರಯೋಜನಕಾರಿ. ತುಪ್ಪದಲ್ಲಿ ನೈಸರ್ಗಿಕವಾಗಿ ಕಂಡುಬರುವ ಕೊಬ್ಬುಗಳು ಅದರಲ್ಲೂ ವಿಶೇಷವಾಗಿ ಸ್ಯಾಚುರೇಟೆಡ್ ಕೊಬ್ಬುಗಳು ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ. ಮಾತ್ರವಲ್ಲ, ಇದು ತೂಕ ಹೆಚ್ಚಳಕ್ಕೆ (Weight Gain) ತುಂಬಾ ಪ್ರಯೋಜನಕಾರಿ. ಆದಾಗ್ಯೂ, ತುಪ್ಪವು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದರೂ, ಅದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸಮತೋಲಿತ ಆಹಾರದೊಂದಿಗೆ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು (Weight Loss) ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಮಧುಮೇಹದಿಂದ ತೂಕ ಇಳಿಕೆವರೆಗೆ ತುಂಬಾ ಪ್ರಯೋಜನಕಾರಿ ಸೌತೆಕಾಯಿ
ತೂಕ ಇಳಿಸಲು ಮತ್ತು ತೂಕ ಹೆಚ್ಚಿಸಲು ತುಪ್ಪ ಹೇಗೆ ಸಹಾಯಕ?
ತೂಕ ಹೆಚ್ಚಳಕ್ಕಾಗಿ ತುಪ್ಪ:
ತುಪ್ಪದಲ್ಲಿರುವ ಕ್ಯಾಲೊರಿಗಳ ಸಮತೋಲನ ಮತ್ತು ಆರೋಗ್ಯಕರ ಕೊಬ್ಬುಗಳು ಸ್ನಾಯುಗಳನ್ನು ನಿರ್ಮಿಸಲು ಮತ್ತು ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತುಪ್ಪವು ಪೋಷಕಾಂಶಗಳನ್ನು ತ್ವರಿತವಾಗಿ ಹೀರಿಕೊಳ್ಳುವುದರ ಜೊತೆಗೆ ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ, ಲ್ಯಾಕ್ಟೋಸ್ ಅನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಜನರಿಗೆ ತುಪ್ಪದಲ್ಲಿ ಕಂಡುಬರುವ ಕೊಬ್ಬು ಹಾಲಿಗೆ ಸಮಾನವಾದ ಪರ್ಯಾಯವಾಗಿದೆ. ತೂಕ ಹೆಚ್ಚಳಕಾಗಿ ಪ್ರಯತ್ನಿಸುತ್ತಿರುವವರಿಗೆ ತುಪ್ಪ ಯಾವುದೇ ವರದಾನಕ್ಕಿಂತ ಕಡಿಮೆಯಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Late Eating Problems: ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದೂ ಸಹ ಹೃದ್ರೋಗದ ಅಪಾಯ ಹೆಚ್ಚಿಸಬಹುದು, ಎಚ್ಚರ!
ತೂಕ ನಷ್ಟಕ್ಕಾಗಿ ತುಪ್ಪ:
ತುಪ್ಪದಲ್ಲಿ ಕಂಡು ಬರುವ ಸಂಯೋಜಿತ ಲಿನೋಲಿಯಿಕ್ ಆಮ್ಲ (CLA) ದೇಹದಲ್ಲಿ ಶೇಖರವಾಗಿರುವ ಕೆಟ್ಟ ಕೊಬ್ಬನ್ನು ಸುಡುವಲ್ಲಿ ಮತ್ತು ಚಯಾಪಚಯವನ್ನು ಹೆಚ್ಚಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ, ತುಪ್ಪದಲ್ಲಿರುವ ಕೆಲವು ಕೊಬ್ಬಿನಾಮ್ಲಗಳು ಹಸಿವನ್ನು ಕಡಿಮೆ ಮಾಡುತ್ತದೆ. ಇದು ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ಆರೋಗ್ಯಕರ ತೂಕ ನಷ್ಟಕ್ಕೂ ಸಹಾಯಕವಾಗಿದೆ. ತುಪ್ಪದಲ್ಲಿರುವ ವಿಟಮಿನ್ ಡಿ ಮತ್ತು ಕೆ ಮೂಳೆಯ ಆರೋಗ್ಯಕ್ಕೆ ಮುಖ್ಯವಾಗಿದೆ.
ಆಯುರ್ವೇದದ ಪ್ರಕಾರ, ಆರೋಗ್ಯವಂತ ವಯಸ್ಕರು ದಿನಕೆ ಒಂದರಿಂದ ಎರಡು ಚಮಚದಷ್ಟು ತುಪ್ಪ ಸೇವಿಸಬಹುದು. ಇದರೊಂದಿಗೆ ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮವು ತೂಕ ನಷ್ಟಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ತುಪ್ಪವನ್ನು ಪೋಷಕ ಅಂಶವಾಗಿ ಮಾತ್ರ ಸೇವಿಸಬಹುದು. ನಿಮಗೆ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ತುಪ್ಪವನ್ನು ಸೇವಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.