ಅಯೋಧ್ಯೆ ರಾಮಮಂದಿರಕ್ಕೆ ಫ್ರೀ ವಿಐಪಿ ಪ್ರವೇಶ ಕೊಡುಗೆ' ಇಂತಾ ನಕಲಿ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ!

Free VIP Pass to Ram Mandir on WhatsApp: ಇತ್ತೀಚಿನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಉಚಿತ ವಿಐಪಿ ಪ್ರವೇಶ ಕೊಡುಗೆ ಹೆಸರಿನಲ್ಲಿ ನಕಲಿ ವಾಟ್ಸಾಪ್ ಸಂದೇಶ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ. ನಿಮಗೂ ಇಂತಹ ಸಂದೇಶ ಬಂದಿದ್ದರೆ ಎಚ್ಚರ! ಎಚ್ಚರ! 

Written by - Yashaswini V | Last Updated : Jan 17, 2024, 12:24 PM IST
  • ವಾಟ್ಸಾಪ್‌ನಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಉಚಿತ ವಿಐಪಿ ಪಾಸ್‌
  • ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂಭ್ರಮಾಚರಣೆಯ ಸಂಭ್ರಮದ ಲಾಭ ಪಡೆಯಲು ಹೊಂಚು ಹಾಕಿರುವ ಸೈಬರ್ ಕ್ರಿಮಿನಲ್‌ಗಳು
  • ವಾಟ್ಸ್‌ಆ್ಯಪ್‌ನಲ್ಲಿ ಉಚಿತ ವಿಐಪಿ ಪಾಸ್‌ಗಳ ಹೆಸರಿನಲ್ಲಿ ಆಮಿಷ ಒಡ್ಡುತ್ತಿರುವ ವಂಚಕರು
ಅಯೋಧ್ಯೆ ರಾಮಮಂದಿರಕ್ಕೆ ಫ್ರೀ ವಿಐಪಿ ಪ್ರವೇಶ ಕೊಡುಗೆ' ಇಂತಾ ನಕಲಿ ವಾಟ್ಸಾಪ್ ಸಂದೇಶದ ಬಗ್ಗೆ ಇರಲಿ ಎಚ್ಚರ!   title=

Free VIP Pass to Ram Mandir on WhatsApp: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ಕೋಟ್ಯಾಂತರ  ಹಿಂದೂಗಳ ಬಹು ವರ್ಷಗಳ ಕನಸು  ನನಸಾಗುತ್ತಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ಮಧ್ಯೆ ಅಮಾಯಕರನ್ನು ಟಾರ್ಗೆಟ್ ಮಾಡುತ್ತಿರುವ ವಾಟ್ಸಾಪ್ ವಂಚನೆಯೊಂದು ಬೆಳಕಿಗೆ ಬಂದಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಲಾಭ ಪಡೆಯಲು ಹೊಂಚು ಹಾಕಿರುವ ಈ ಸೈಬರ್ ಕ್ರಿಮಿನಲ್‌ಗಳು ವಾಟ್ಸಾಪ್‌ನಲ್ಲಿ ರಾಮ ಮಂದಿರಕ್ಕೆ ಉಚಿತ ವಿಐಪಿ ಪಾಸ್‌ ಕೊಡಿಸುವುದಾಗಿ ಹೇಳಿ ವಾಟ್ಸಾಪ್ ಬಳಕೆದಾರರನ್ನು ವಂಚಿಸುತ್ತಿದ್ದಾರೆ. 

ಈ ಸಂದೇಶದ ಬಗ್ಗೆ ಎಚ್ಚರ! ಎಚ್ಚರ! 
ಹೌದು, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಿಡಿಗೇಡಿಗಳು ವಾಟ್ಸಾಪ್‌ನಲ್ಲಿ ನಕಲಿ ಸಂದೇಶಗಳನ್ನು ಹರಡುತ್ತಿದ್ದು, ಅದರಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಲು ಉಚಿತ ವಿಐಪಿ ಪಾಸ್ ನೀಡುವುದಾಗಿ ಅಮಾಯಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಆದರೆ, ಇದೊಂದು ನಕಲಿ ಸಂದೇಶವಾಗಿದ್ದು, ಇಂತಹ ಸಂದೇಶ ನಿಮಗೂ ಬಂದಿದ್ದರೆ ಈ ಬಗ್ಗೆ ತುಂಬಾ ಜಾಗರೂಕರಾಗಿರಿ. 

ಈ ನಕಲಿ ಸಂದೇಶಗಳು ಅಪ್ಲಿಕೇಶನ್ (APK) ಅನ್ನು ಡೌನ್‌ಲೋಡ್ ಮಾಡಲು ವಾಟ್ಸಾಪ್ ಬಳಕೆದಾರರನ್ನು ಕೇಳುತ್ತಿದ್ದು, ಇದು ಜನರ ವೈಯಕ್ತಿಕ ಮಾಹಿತಿಯನ್ನು ಕಡಿಯುವ ಒಂದು ತಂತ್ರವಾಗಿದೆ. ಇಂತಹ ಆಪ್ ಗಳು ಸ್ಪೈಯಿಂಗ್ ವೈರಸ್ (ಸ್ಪೈವೇರ್) ಅಥವಾ ಹಾನಿಕಾರಕ ಸಾಫ್ಟ್ ವೇರ್ (ಮಾಲ್ ವೇರ್)ಗಳನ್ನು ಹೊಂದಿರಬಹುದು ಎಂದು ಭದ್ರತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಈ ರೀತಿಯ ಸಂದೇಶಗಳಲ್ಲಿ ಬರುವ ಯಾವುದೇ ಲಿಂಕ್ ಅಥವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡದಂತೆ ಹಾಗೂ ಯಾವುದೇ ರೀತಿಯ ಮಾಹಿತಿಗಳನ್ನು ಅನಾಮಿಕರೊಂದಿಗೆ ಹಂಚಿಕೊಳ್ಳದಂತೆ ಸೂಚನೆ ನೀಡಲಾಗಿದೆ. 

ಇದನ್ನೂ ಓದಿ- ಇನ್ನು WhatsAppನಲ್ಲೂ ಸಿಗುವುದು Blue Tick : ಪಡೆದುಕೊಳ್ಳುವ ಪ್ರಕ್ರಿಯೆ ಹೀಗಿರಲಿದೆ

ನಕಲಿ ಸಂದೇಶದಲ್ಲಿ ಏನಿರಲಿದೆ? 
"ಅಭಿನಂದನೆಗಳು! ಜನವರಿ 22 ರಂದು ಶ್ರೀ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ವಿಶೇಷ ದರ್ಶನವನ್ನು ಪಡೆಯಲು ನಿಮಗೆ ವಿಶೇಷ ಅವಕಾಶ ದೊರೆಯುತ್ತಿದೆ. ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ವಿಐಪಿ ಪಾಸ್ ಪಡೆಯಿರಿ." ಎಂದು ಸಂದೇಶದಲ್ಲಿ ಬರೆಯಲಾಗಿರುತ್ತದೆ. 

ಗಮನಾರ್ಹವಾಗಿ, ಸರ್ಕಾರ ಅಥವಾ ರಾಮಮಂದಿರ ಟ್ರಸ್ಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಬದಲು ಯಾರಿಗೂ ವಿಶೇಷ ದರ್ಶನ ನೀಡುತ್ತಿಲ್ಲ. ಆಹ್ವಾನಿತ ವ್ಯಕ್ತಿಗಳು ಅಥವಾ ಸರ್ಕಾರಿ ಕೆಲಸದಲ್ಲಿ ತೊಡಗಿರುವ ಜನರಿಗೆ ಮಾತ್ರ ನಿಜವಾದ ದರ್ಶನಕ್ಕೆ ಅವಕಾಶ ನೀಡಲಾಗುವುದು. ಆದ್ದರಿಂದ, ಅಂತಹ ನಕಲಿ ಸಂದೇಶಗಳನ್ನು ನಂಬಬೇಡಿ ಮತ್ತು ಅವುಗಳ ಲಿಂಕ್ ಅನ್ನು ಎಂದಿಗೂ ತೆರೆಯಬೇಡಿ.

ಇದನ್ನೂ ಓದಿ- Smartphone Tips: ನಿಮ್ಮ ಫೋನ್‌ನ್ನುಬೇರೆ ಚಾರ್ಜರ್‌ನಿಂದ ಚಾರ್ಜ್ ಮಾಡ್ತೀರಾ? ಇದರಿಂದ ಭಾರೀ ನಷ್ಟ

ರಾಮ ಮಂದಿರದ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಸುಗಮ ವ್ಯವಸ್ಥೆ ಕಲ್ಪಿಸಲು ಹೋಟೆಲ್‌ಗಳಲ್ಲಿ ಈಗಾಗಲೇ ಮಾಡಿರುವ ಬುಕ್ಕಿಂಗ್‌ಗಳನ್ನು ರದ್ದುಗೊಳಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಳಿಕೊಂಡಿದ್ದಾರೆ. ರಾಮಮಂದಿರ ಟ್ರಸ್ಟ್‌ನಿಂದ ವಿಶೇಷವಾಗಿ ಆಹ್ವಾನಿಸಲ್ಪಟ್ಟ ಜನರಿಗೆ ಕೊಠಡಿಗಳನ್ನು ನೀಡುವುದು ಅವರ ಆದ್ಯತೆಯಾಗಿದೆ. ಅಂದರೆ ಬರೀ ಭೇಟಿಗೆಂದು ಬಂದವರಿಗೆ ಹೊಟೇಲ್ ರೂಂ ಸಿಗುವುದು ಕಷ್ಟವಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News