Viral video: ಏನ್‌ ಗುಂಡಿಗೆ ಗುರು..ಹುಲಿಯ ಮೇಲೇರಿ ಜಾಲಿ ರೈಡ್‌ ಹೊರಟ ಯುವಕ!ವಿಡಿಯೋ ನೋಡಿ ಹುಚ್ಚುತನಕ್ಕೆ ತಕ್ಕ ಉದಾಹರಣೆ ಅನಿಸುತ್ತೆ

1 ಕಿ.ಮಿ ದೂರದಲ್ಲಿ ನಿಂತು ನೋಡಿದರೂ ಕೂಡ ಹುಲಿ ನಮ್ಮ ಎದೆ ನಡುಗಿಸುತ್ತೆ. ಹುಲಿ ಕಂಡರೆ ಎದ್ದು ಬಿದ್ದು ಓಡುವವರೇ ಹೆಚ್ಚು ಅಂತಹದ್ದರಲ್ಲಿ ಇಲ್ಲೊಬ್ಬ ಹುಲಿಯ ಮೇಲೇರಿ ಜಾಲಿ ರೈಡ್‌ ಹೋಗಿದ್ದಾನೆ, ಈ ಹುಡುಗನ ಹುಚ್ಚುತನ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. 

Written by - Zee Kannada News Desk | Last Updated : Oct 9, 2024, 08:42 AM IST
  • ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಸರಪಳಿ ಹಾಕಿದ್ದಾನೆ, ಹುಲಿಗೆ ಹಾಕಿದ ಸರಪಳಿಯನ್ನು ಕೈಯಲ್ಲಿಡಿದಿದ್ದಾನೆ.
  • ಹುಲಿಯ ಮೇಲೇರಿ ಜಾಲಿ ರೈಡ್‌ ಹೊರಟಿದ್ದಾನೆ, ಇದನ್ನು ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ.
  • ಮೇಲೇರಿ ಕುಳಿತ ಯುವಕನ್ನು ಹುಲಿ ಮುಂದಕ್ಕೆ ಹೊತ್ತು ಸಾಗಿದೆ, ಮುಂದೆ ಯುವಕ ಕೂತಿದ್ದ ತೂಕವನ್ನು ತಡೆಯಲಾರದೆ ಹುಲಿ, ತೂರಾಡುತ್ತಿದೆ.
Viral video: ಏನ್‌ ಗುಂಡಿಗೆ ಗುರು..ಹುಲಿಯ ಮೇಲೇರಿ ಜಾಲಿ ರೈಡ್‌ ಹೊರಟ ಯುವಕ!ವಿಡಿಯೋ ನೋಡಿ ಹುಚ್ಚುತನಕ್ಕೆ ತಕ್ಕ ಉದಾಹರಣೆ ಅನಿಸುತ್ತೆ title=

Viral video: 1 ಕಿ.ಮಿ ದೂರದಲ್ಲಿ ನಿಂತು ನೋಡಿದರೂ ಕೂಡ ಹುಲಿ ನಮ್ಮ ಎದೆ ನಡುಗಿಸುತ್ತೆ. ಹುಲಿ ಕಂಡರೆ ಎದ್ದು ಬಿದ್ದು ಓಡುವವರೇ ಹೆಚ್ಚು ಅಂತಹದ್ದರಲ್ಲಿ ಇಲ್ಲೊಬ್ಬ ಹುಲಿಯ ಮೇಲೇರಿ ಜಾಲಿ ರೈಡ್‌ ಹೋಗಿದ್ದಾನೆ, ಈ ಹುಡುಗನ ಹುಚ್ಚುತನ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. 

ಹುಲಿಯನ್ನು ಅತ್ಯಂತ ಶಕ್ತಿಯುತ ಜೀವಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಅವುಗಳ ಉಗ್ರತನದಿಂದಾಗಿ ಜನ ಅವುಗಳನ್ನು ನೋಡಿದರೇನೇ ಭಯಭೀತರಾಗಿ ಕಾಲ್ಕಿತ್ತುತ್ತಾರೆ. ಆದರೆ, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಸರಪಳಿ ಹಾಕಿದ್ದಾನೆ, ಹುಲಿಗೆ ಹಾಕಿದ ಸರಪಳಿಯನ್ನು ಕೈಯಲ್ಲಿಡಿದಿದ್ದಾನೆ, ಆದರೆ ಅಷ್ಟಕ್ಕೆ ಸುಮ್ಮನಾಗದೆ ಹುಲಿಯ ಮೇಲೇರಿ ಜಾಲಿ ರೈಡ್‌ ಹೊರಟಿದ್ದಾನೆ, ಇದನ್ನು ನೋಡಿದ ನೆಟ್ಟಿಗರು ಗರಂ ಆಗಿದ್ದಾರೆ. 

ಅಷ್ಟಕ್ಕೂ ಅದರ ಮೇಲೇರಿದ ಯುವಕನ್ನು ಹುಲಿಯೂ ಸಹ ಏನೂ ಮಾಡಿಲ್ಲ, ಯಾವುದೇ ತೊಂದರೆ ಮಾಡದೆ ತನ್ನ ಮೇಲೇರಿ ಕುಳಿತ ಯುವಕನ್ನು ಹುಲಿ ಮುಂದಕ್ಕೆ ಹೊತ್ತು ಸಾಗಿದೆ, ಮುಂದೆ ಯುವಕ ಕೂತಿದ್ದ ತೂಕವನ್ನು ತಡೆಯಲಾರದೆ ಹುಲು, ತೂರಾಡುತ್ತಿದೆ. 

ಸದ್ಯ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋ, ಪಾಕಿಸ್ತಾನ ಮೂಲದ್ದು, ವಿಡಿಯೋದಲ್ಲಿರುವ ವ್ಯಕ್ತಿ ಕೂಡ ಪಾಕಿಸ್ತಾನ ಮೂಲದವನೇ.  ಡಿಜಿಟಲ್ ಸೃಷ್ಟಿಕರ್ತ ನೌಮನ್ ಹಾಸನ್ ಅವರು ಪೋಸ್ಟ್ ಮಾಡಿದ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದು, ಕೆಲವೇ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.

ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ವ್ಯಕ್ತಿ ಬೃಹತ್ ಹುಲಿಯ ಮೇಲೆ ಕುಳಿತುಕೊಂಡು, ತೆರೆದ ಪ್ರದೇಶದ ಮೂಲಕ ಆಕಸ್ಮಿಕವಾಗಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಎರಡು ಪಂಜರಗಳನ್ನು ಹಿನ್ನೆಲೆಯಲ್ಲಿ ಗುರುತಿಸಬಹುದು, ಒಂದರಲ್ಲಿ ಸಿಂಹ ಮತ್ತು ಇನ್ನೊಂದರಲ್ಲಿ ಸಿಂಹಿಣಿ ಇದೆ. ಯಾವುದು ಏನೇ ಇರಲಿ ಪ್ರಾಣಿಗೆ ಹಿಂಸೆ ನೀಡಿದ ಯುವಕನ ನಡೆಯನ್ನು ನೋಡಿ ನೆಟ್ಟುಗರು ಗರಂ ಆಗಿದ್ದಾರೆ. 

 

ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News