February Changes: ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ ನಿಯಮಗಳು ಫೆ.1 ರಿಂದ ಬದಲಾಗುತ್ತಿವೆ

February Changes - 1 ಫೆಬ್ರವರಿ 2021 ರಿಂದ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ನಿಯಮಗಳು ಬದಲಾಗಲಿವೆ.

Written by - Nitin Tabib | Last Updated : Jan 26, 2021, 06:44 PM IST

    ಫೆ.1 ರಿಂದ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಬದಲಾಗಲಿವೆ.

    ಈ ಬದಲಾವಣೆಗಳು ನೇರವಾಗಿ ನಿಮ್ಮ ವ್ಯಾಲೆಟ್ ಮೇಲೆ ಪ್ರಭಾವ ಬೀರಲಿವೆ.

    ಯಾವ ಯಾವ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.

February Changes: ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ ನಿಯಮಗಳು ಫೆ.1 ರಿಂದ ಬದಲಾಗುತ್ತಿವೆ title=
February Changes(File Photo-PNB)

ನವದೆಹಲಿ: February Changes - 1 ಫೆಬ್ರವರಿ 2021 ರಿಂದ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ನಿಯಮಗಳು ಬದಲಾಗಲಿವೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮತ್ತು ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ನಿಯಮಗಳು ಇದರಲ್ಲಿ ಶಾಮೀಲಾಗಿವೆ.  ಫೆಬ್ರವರಿ 1 (February 1) ರಂದು ಹಣಕಾಸು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ ಅನ್ನು ಮಂಡಿಸಲಿದ್ದಾರೆ.  ಈ ಬಾರಿಯ ಬಜೆಟ್ ನಲ್ಲಿ ಅವರು ಉತ್ಪನ್ನದ ಮೇಲಿನ ಕಸ್ಟಮ್ಸ್ ಡ್ಯೂಟಿ  ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ನಂತರ ಆ ಉತ್ಪನ್ನಗಳು ದುಬಾರಿ ಅಥವಾ ಅಗ್ಗವಾಗಬಹುದು.  ಹಾಗಾದರೆ ಬನ್ನಿ ಯಾವ ಯಾವ ನಿಯಮಗಳು ಬದಲಾಗುತ್ತಿವೆ ತಿಳಿದುಕೊಳ್ಳೋಣ.

ಫೆ.1 ರಿಂದ ಸಿಲೆಂಡರ್ ದರಗಳು ಬದಲಾಗುತ್ತಿವೆ
ಫೆಬ್ರವರಿ 1 ರಿಂದ ಸಿಲಿಂಡರ್ (LPG Gas Cylinder) ಬೆಲೆಗಳು ಬದಲಾಗುತ್ತವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಲ್‌ಪಿಜಿ ಬೆಲೆ 2 ಪಟ್ಟು ಹೆಚ್ಚಾಗಿದೆ. ಈ ವರ್ಷದ ಜನವರಿಯಲ್ಲಿ ತೈಲ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಿಲ್ಲ.ಈಗ ಫೆಬ್ರವರಿ ತಿಂಗಳಲ್ಲಿ, ಕಂಪನಿಗಳು ಬೆಲೆಯನ್ನು ಹೆಚ್ಚಿಸುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಪ್ರತಿ ತಿಂಗಳ ಮೊದಲ ದಿನಾಂಕದಂದು ಕಂಪನಿಗಳು ಎಲ್ಪಿಜಿ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತವೆ.

ಇದನ್ನು ಓದಿ- Budget 2021: ಕೇಂದ್ರ ‌ಬಜೆಟ್‌ನಲ್ಲಿ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಸಾಧ್ಯತೆ

ಈ ಬ್ಯಾಂಕ್ ಎಟಿಎಂಗಳಿಂದ ಹಣ ವಿಥ್ ಡ್ರಾ ನಿಯಮ ಬದಲಾವಣೆ
ಫೆಬ್ರವರಿ 1 ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ನಿಯಮಗಳನ್ನು ಬದಲಾಯಿಸಲಿದೆ  (ATM Cash Withdrawal Rule). ದೇಶಾದ್ಯಂತ ಹೆಚ್ಚುತ್ತಿರುವ ಎಟಿಎಂ ವಂಚನೆಯನ್ನು ತಡೆಯಲು ಪಿಎನ್‌ಬಿ ಶ್ಲಾಘನೀಯ ಕ್ರಮ ಕೈಗೊಂಡಿದೆ. ನೀವು ಪಿಎನ್‌ಬಿಯಲ್ಲಿ ಬ್ಯಾಂಕ್ ಖಾತೆಯನ್ನೂ ಹೊಂದಿದ್ದರೆ, ಇದು ನಿಮಗೆ ಸಂತಸದ ಸುದ್ದಿಯಾಗಿದೆ. ಫೆಬ್ರವರಿ 1 ರಿಂದ ಪಿಎನ್‌ಬಿ ಗ್ರಾಹಕರಿಗೆ ಇಎಂವಿ ಅಲ್ಲದ ಎಟಿಎಂ ಯಂತ್ರಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಪಿಎನ್‌ಬಿ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಇಎಂವಿ ಅಲ್ಲದ ಎಟಿಎಂಗಳು ಅಥವಾ ಇಎಂವಿ ಅಲ್ಲದ ಎಟಿಎಂಗಳು ವಹಿವಾಟಿನ ಸಮಯದಲ್ಲಿ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸುವುದಿಲ್ಲ. ಈ ಯಂತ್ರಗಳಲ್ಲಿ, ಡೇಟಾ ಕಾರ್ಡ್ ಅನ್ನು ಮ್ಯಾಗ್ನೆಟಿಕ್ ಸ್ಟ್ರೈಪ್ ಮೂಲಕ ಓದಲಾಗುತ್ತದೆ.

ಇದನ್ನು ಓದಿ-Budget 2021 : ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಪ್ರಯೋಜನಗಳಿವು

ಫೆಬ್ರುವರಿ 1 ರಂದು ಮಂಡನೆಯಾಗಲಿದೆ ವಾರ್ಷಿಕ ಆಯವ್ಯಕ 2021 (Budget 2021)
ಫೆಬ್ರವರಿ 1 ರಂದು ಮಂಡನೆಯಾಗಲಿರುವ  ಸಾಮಾನ್ಯ ಬಜೆಟ್ ನಲ್ಲಿ ಹಲವು ವಸ್ತುಗಳ ಕಸ್ಟಮ್ ಡ್ಯೂಟಿಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಇವುಗಳಲ್ಲಿ  ಪೀಠೋಪಕರಣಗಳ ಕಚ್ಚಾ ಸಾಮಗ್ರಿ, ತಾಮ್ರ, ಕೆಲವು ರಾಸಾಯನಿಕಗಳು, ದೂರಸಂಪರ್ಕ ಉಪಕರಣಗಳು ಮತ್ತು ರಬ್ಬರ್ ಉತ್ಪನ್ನಗಳಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಮೂಲಗಳು ಈ ಮಾಹಿತಿಯನ್ನು ನೀಡಿವೆ. ನಯಗೊಳಿಸಿದ ವಜ್ರಗಳು, ರಬ್ಬರ್ ಸರಕುಗಳು, ಚರ್ಮದ ಬಟ್ಟೆ, ದೂರಸಂಪರ್ಕ ಉಪಕರಣಗಳು ಮತ್ತು ರತ್ನಗಂಬಳಿಗಳಂತಹ 20 ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಆಮದು ಸುಂಕ ಇಳಿಕೆಯಾಗುವ ಸಾಧ್ಯತೆ ಕೂಡ ಇದೆ. ಇದಲ್ಲದೆ, ಪೀಠೋಪಕರಣಗಳನ್ನು ತಯಾರಿಸಲು ಬಳಸಲಾಗುವ ಕೆಲವು ಮರದ ಮತ್ತು ಗಟ್ಟಿಯಾದ ಹಲಗೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆ ಕೂಡ ಇದೆ.

ಇದನ್ನು ಓದಿ-Union Budget 2021: ಕೇಂದ್ರದ ಬಜೆಟ್ ಮಂಡನೆಗೆ 'ಮುಹೂರ್ತ ಫಿಕ್ಸ್': ಹಲವು ಸಂಪ್ರದಾಯಗಳಿಗೆ ಬ್ರೇಕ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News