ನವದೆಹಲಿ: Fox Seed Health Benefits - ಭಾರತದಲ್ಲಿ ಮಖಾನಾವನ್ನು ಬಳಸದ ಮನೆ ಇಲ್ಲ. ಇದನ್ನು ಲೋಟಸ್ ಸೀಡ್, ಫಾಕ್ಸ್ ಕಾಯಿ, ಪ್ರಿಕ್ಲಿ ಲಿಲಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ, ಸಿಹಿತಿಂಡಿಗಳು, ಸ್ನ್ಯಾಕ್ಸ್ ಮತ್ತು ಪಾಯಸಗಳಲ್ಲಿಯೂ ಸಹ ಮಖಾನ ಬಳಸಲಾಗುತ್ತದೆ. ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್, ಕಬ್ಬಿಣ, ಸತು ಇತ್ಯಾದಿಗಳು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ, ಇದರ ಸೇವನೆಯು ನಮ್ಮ ಆರೋಗ್ಯಕ್ಕೆ ಯಾವ ಯಾವ ಲಾಭಗಳಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪಚನ ಶಕ್ತಿ ಸುಧಾರಿಸುತ್ತದೆ (Health Tips)
ಮಖಾನಾದಲ್ಲಿ ಹೇರಳ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಇದರ ಸೇವನೆಯಿಂದ ಪಚನಶಕ್ತಿ ಸುಧಾರಿಸುತ್ತದೆ. ಇದನ್ನು ಪ್ರತಿಯೊಂದು ವಯಾಸ್ಸಿನ ವ್ಯಕ್ತಿಗಳು ಸುಲಭವಾಗಿ ಜೀರ್ಣಿಸಿಕೊಳ್ಳಬ್ನಹುದು. ಪಚನ ಶಕ್ತಿ ಸುಧಾರಿಸುವುದರ ಜೊತೆಗೆ ಇದು ಅತಿಸಾರದಿಂದಲೂ ಕೂಡ ಪರಿಹಾರ ನೀಡುತ್ತದೆ.
ಕಿಡ್ನಿ ಆರೋಗ್ಯಕ್ಕೆ ಉತ್ತಮ (Health And Lifestyle)
ಮಾಖಾನೆ ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಮೂತ್ರಪಿಂಡದ ಆರೋಗ್ಯವೂ ಸುಧಾರಿಸುತ್ತದೆ. ಇದಲ್ಲದೆ ಇದು ರಕ್ತ ಪರಿಚಲನೆಗೂ ಇದು ಒಳ್ಳೆಯದು.
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೂ ಇದು ಉತ್ತಮ (Health News)
ಮಖಾನಾದಲ್ಲಿ ಅನಾರೋಗ್ಯಕರ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಇದು ತುಂಬಾ ಸಹಕಾರಿಯಾಗಿದೆ.
ಒತ್ತಡ ದೂರಗೊಳಿಸುತ್ತದೆ (Makhana Health Benefits)
ಕೆಲಸದ ನಿಮಿತ್ತ ಅಥವಾ ಇನ್ನಾವುದೇ ಕಾರಣದಿಂದ ನೀವು ಒತ್ತಡಕ್ಕೆ ಒಳಗಾಗಿದ್ದರೆ, ನೀವು ಮಖನಾ ತಿನ್ನುವುದು ಒಳ್ಳೆಯದು. ರಾತ್ರಿ ಮಲಗಲು ತೆರಳುವ ಮುನ್ನ ಒಂದು ಲೋಟ ಹಾಲಿನಲ್ಲಿ 8 ರಿಂದ 10 ಮಖಾನಾಗಳನ್ನು ಬೆರೆಸಿ ಸೇವಿಸಿ. ಇದರಿಂದ ನಿಮಗೆ ಸರಿಯಾದ ನಿದ್ರೆ ಬರಲಿದೆ ಮತ್ತು ನಿಮ್ಮ ಒತ್ತಡವನ್ನು ಇದು ಕಡಿಮೆ ಮಾಡಲಿದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ
ಅಧಿಕ ರಕ್ತದೊತ್ತದ ನಿಯಂತ್ರಿಸಲು ಮಖನಾ ಸೇವನೆ ಲಾಭಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ ಪ್ರಮಾಣ ತುಂಬಾ ಕಡಿಮೆ ಇರುತ್ತದೆ ಹಾಗೂ ಪೊಟ್ಯಾಸಿಯಂ ಹೇರಳ ಪ್ರಮಾಣದಲ್ಲಿರುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- Anger Management Therapy: ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತಿದೆಯೇ? ಈ ಟಿಪ್ಸ್ ಅನುಸರಿಸಿ ನೋಡಿ
ಮಖನಾ ಹೇಗೆ ಪ್ರಯೋಗಿಸಬೇಕು
ಯಾವುದೇ ರೂಪದಲ್ಲಿ ಮಖಾನಾ ಸೇವನೆ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದನ್ನು ನೀವು ಹಾಲಿನ ಜೊತೆಗೆ ಸೇವಿಸಿ ಅಥವಾ ಸ್ನ್ಯಾಕ್ ಜೊತೆಗೆ ಸೇವಿಸಿ. ಇದನ್ನು ನೀವು ತುಪ್ಪದಲ್ಲಿ ಹುರಿದು ಕೂಡ ಸೇವಿಸಬಹುದು.
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದರ ಸತ್ಯತೆಯ ಕುರಿತು ಝೀ ಹಿಂದೂಸ್ತಾನ್ ಪುಷ್ಟೀಕರಿಸುವುದಿಲ್ಲ. ಇವುಗಳನ್ನು ಅನುಸರಿಸುವ ಮೊದಲು ತಜ್ಞರಿಂದ ಸಲಹೆ ಪಡೆಯಲು ಮರೆಯದಿರಿ)
ಇದನ್ನೂ ಓದಿ- Sugarcane Juice: ಕಬ್ಬಿನ ಹಾಲಿನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು: ಇಲ್ಲಿದೆ ಅದರ ಪ್ರಯೋಜನಗಳು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.