ನಿಮಗೆ ಅಲರ್ಜಿ ಸಮಸ್ಯೆಗಳಿದ್ದರೆ ನೀವು COVID ಲಸಿಕೆ ತೆಗೆದುಕೊಳ್ಳಬಹುದೇ?

COVID-19 ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದ, ಅದರ ಸುತ್ತಲೂ ಹಲವಾರು ಪ್ರಶ್ನೆಗಳಿವೆ, ಲಸಿಕೆ ಸುತ್ತ ಹರಡಿರುವ ಅನೇಕ ಊಹಾಪೋಹಗಳನ್ನು ನಿರಂತರವಾಗಿ ತಜ್ಞರು ಬಗೆಹರಿಸುತ್ತಾ ಬಂದಿದ್ದಾರೆ.ಆದಾಗ್ಯೂ ಕೂಡ ಒಂದಿಲ್ಲ ಒಂದು ಅನುಮಾನ ಹೊಸದಾಗಿ ಹುಟ್ಟುತ್ತಲೇ ಇರುತ್ತದೆ.

Written by - Zee Kannada News Desk | Last Updated : Jun 13, 2021, 05:55 PM IST
  • COVID-19 ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದ, ಅದರ ಸುತ್ತಲೂ ಹಲವಾರು ಪ್ರಶ್ನೆಗಳಿವೆ,
  • ಲಸಿಕೆ ಸುತ್ತ ಹರಡಿರುವ ಅನೇಕ ಊಹಾಪೋಹಗಳನ್ನು ನಿರಂತರವಾಗಿ ತಜ್ಞರು ಬಗೆಹರಿಸುತ್ತಾ ಬಂದಿದ್ದಾರೆ.
  • ಆದಾಗ್ಯೂ ಕೂಡ ಒಂದಿಲ್ಲ ಒಂದು ಅನುಮಾನ ಹೊಸದಾಗಿ ಹುಟ್ಟುತ್ತಲೇ ಇರುತ್ತದೆ.
ನಿಮಗೆ ಅಲರ್ಜಿ ಸಮಸ್ಯೆಗಳಿದ್ದರೆ ನೀವು COVID ಲಸಿಕೆ ತೆಗೆದುಕೊಳ್ಳಬಹುದೇ?  title=
ಸಾಂದರ್ಭಿಕ ಚಿತ್ರ

ನವದೆಹಲಿ: COVID-19 ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದ, ಅದರ ಸುತ್ತಲೂ ಹಲವಾರು ಪ್ರಶ್ನೆಗಳಿವೆ, ಲಸಿಕೆ ಸುತ್ತ ಹರಡಿರುವ ಅನೇಕ ಊಹಾಪೋಹಗಳನ್ನು ನಿರಂತರವಾಗಿ ತಜ್ಞರು ಬಗೆಹರಿಸುತ್ತಾ ಬಂದಿದ್ದಾರೆ.ಆದಾಗ್ಯೂ ಕೂಡ ಒಂದಿಲ್ಲ ಒಂದು ಅನುಮಾನ ಹೊಸದಾಗಿ ಹುಟ್ಟುತ್ತಲೇ ಇರುತ್ತದೆ.

ಇದನ್ನೂ ಓದಿ-Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ ಅಮೇರಿಕವನ್ನೂ ಕೂಡ ಹಿಂದಿಕ್ಕಿದ ಭಾರತ

ಈಗ ಅದೇ ರೀತಿಯಾಗಿ ಅಲರ್ಜಿ ಇರುವುವವರು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಬಹುದೇ ಎನ್ನುವ ಪ್ರಶ್ನೆ ಎಲ್ಲರಿಗೂ ಎದುರಾಗಿದೆ.ಈ ಪ್ರಶ್ನೆಗೆ ಉತ್ತರಿಸಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ "ಯಾರಿಗಾದರೂ ಗಮನಾರ್ಹವಾದ ಅಲರ್ಜಿ ಸಮಸ್ಯೆ ಇದ್ದರೆ, ವೈದ್ಯಕೀಯ ಸಲಹೆಯ ನಂತರವೇ COVID-19 ಲಸಿಕೆ ತೆಗೆದುಕೊಳ್ಳಬೇಕು. ಆದಾಗ್ಯೂ, ನೆಗಡಿ, ಚರ್ಮದ ಅಲರ್ಜಿ ಇತ್ಯಾದಿಗಳಂತಹ ಸಣ್ಣ ಅಲರ್ಜಿಗಳಿದ್ದರೆ ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯಬಾರದು" ಎಂದು ಹೇಳಿದ್ದಾರೆ.

ಇದನ್ನೂ ಓದಿ-SII CEO ಅದರ್ ಪೂನಾವಾಲಾ,WHO ಹಾಗೂ ಇತರರ ವಿರುದ್ಧ ವಂಚನೆಯ ಪ್ರಕರಣ ದಾಖಲು!, ಇಲ್ಲಿದೆ ಡೀಟೇಲ್ಸ್

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ ನ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, "ಅಲರ್ಜಿಗೆ ಮುಂಚಿನ ಔಷಧಿಗಳನ್ನು ಹೊಂದಿರುವವರು ಇವುಗಳನ್ನು ನಿಲ್ಲಿಸಬಾರದು, ಅವರು ಲಸಿಕೆ ಪಡೆಯುವಾಗ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ವ್ಯಾಕ್ಸಿನೇಷನ್‌ನಿಂದ ಉಂಟಾಗುವ ಅಲರ್ಜಿಗಳ ನಿರ್ವಹಣೆಗಾಗಿ ಎಲ್ಲಾ ವ್ಯಾಕ್ಸಿನೇಷನ್ ಸ್ಥಳಗಳಲ್ಲಿ ಇದಕ್ಕಾಗಿ ಸಿದ್ದತೆಗಳನ್ನು ತಯಾರಿ ಮಾಡಲಾಗಿರುತ್ತದೆ. ಆದ್ದರಿಂದ, ನಿಮಗೆ ತೀವ್ರವಾದ ಅಲರ್ಜಿ ಇದ್ದರೂ ಸಹ, ನೀವು ಔಷಧಿಗಳನ್ನು ತೆಗೆದುಕೊಳ್ಳುತ್ತಿರಿ ಮತ್ತು ಹೋಗಿ ಲಸಿಕೆ ಪಡೆಯಿರಿ ಎಂದು ನಾವು ಸಲಹೆ ನೀಡುತ್ತೇವೆ." ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News