Coronavirus Active Active Cases - ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ, 8 ರಾಜ್ಯಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ

Coronavirus Active Active Cases - ಒಂದು ದಿನದಲ್ಲಿ ಹೊಸ ಕರೋನಾ (Covid-19) ಹೊಸ ಪ್ರಕರಣಗಳ ಸಂಖ್ಯೆ ಎರಡು ತಿಂಗಳ ನಂತರ ಚೇತರಿಸಿಕೊಂಡ ಪ್ರಕರಣಗಳಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು 8 ರಾಜ್ಯಗಳನ್ನು ಎಚ್ಚರಿಸಿದೆ. ಈ ರಾಜ್ಯಗಳು ಅತಿ ಹೆಚ್ಚು ಸಕಾರಾತ್ಮಕತೆಯನ್ನು ಹೊಂದಿವೆ.

Written by - Nitin Tabib | Last Updated : Jul 8, 2021, 05:24 PM IST
  • ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ.
  • 8 ರಾಜ್ಯಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ,
  • ಕಳೆದ 55 ದಿನಗಳಲ್ಲಿ ಮೊದಲ ಬಾರಿಗೆ, ಒಂದು ದಿನದಲ್ಲಿ ಹೊಸ ಕರೋನಾ ಪ್ರಕರಣಗಳ ಸಂಖ್ಯೆ ಚೇತರಿಸಿಕೊಂಡ ಪ್ರಕರಣಗಳಿಗಿಂತ ಹೆಚ್ಚಾಗಿದೆ.
Coronavirus Active Active Cases - ಕೊರೊನಾ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ, 8 ರಾಜ್ಯಗಳಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ title=
Coronavirus Active Active Cases (File Photo)

Coronavirus Active Active Cases - ಒಂದು ದಿನದಲ್ಲಿ ಹೊಸ ಕರೋನಾ (Covid-19) ಹೊಸ ಪ್ರಕರಣಗಳ ಸಂಖ್ಯೆ ಎರಡು ತಿಂಗಳ ನಂತರ ಚೇತರಿಸಿಕೊಂಡ ಪ್ರಕರಣಗಳಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು 8 ರಾಜ್ಯಗಳನ್ನು ಎಚ್ಚರಿಸಿದೆ. ಈ ರಾಜ್ಯಗಳು ಅತಿ ಹೆಚ್ಚು ಸಕಾರಾತ್ಮಕತೆಯನ್ನು ಹೊಂದಿವೆ. ಅರುಣಾಚಲ ಪ್ರದೇಶ, ಮಣಿಪುರ, ಕೇರಳ, ಅಸ್ಸಾಂ, ಮೇಘಾಲಯ, ತ್ರಿಪುರ, ಸಿಕ್ಕಿಂ ಮತ್ತು ಒಡಿಶಾಗಳಿಗೆ ಸರ್ಕಾರ  ಈ ಕುರಿತು ಪತ್ರವೊಂದನ್ನು ಬರೆದಿದ್ದು, ಹೆಚ್ಚುತ್ತಿರುವ ಕರೋನಾ ಪ್ರಕರಣಗಳ (Coronavirus India Positive Cases) ಬಗ್ಗೆ ಎಚ್ಚರಿಕೆ ವಹಿಸುವಂತೆ ಕೋರಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ವತಿಯಿಂದ ಈ ಪತ್ರಬರೆಯಲಾಗಿದೆ. ಇದರಲ್ಲಿ, ಹೆಚ್ಚುತ್ತಿರುವ ಕರೋನ ಪ್ರಕರಣಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಒಡಿಶಾದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು, 'ಒಡಿಶಾದ ಮೂರು ಜಿಲ್ಲೆಗಳಲ್ಲಿ, ಕರೋನಾದ (Coronavirus) ಸಕಾರಾತ್ಮಕ ಪ್ರಮಾಣವು ಶೇಕಡಾ 10 ಕ್ಕಿಂತ ಹೆಚ್ಚಾಗಿರುವುದು ಆತಂಕದ ವಿಷಯವಾಗಿದೆ. ರಾಜ್ಯದಲ್ಲಿ ಸಕಾರಾತ್ಮಕ ಪ್ರಕರಣಗಳ ಪ್ರಮಾಣವು ನಿರಂತರವಾಗಿ ಕಡಿಮೆಯಾಗುತ್ತಿದೆ ಮತ್ತು ಪ್ರಸ್ತುತ ಅದು ಶೇ.5.36 ರಷ್ಟಿದೆ. ಆದರೆ ನೌಪಾಡಾ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸಕಾರಾತ್ಮಕತೆ ಪ್ರಮಾಣವು ವೇಗವಾಗಿ ಹೆಚ್ಚಾಗಿದೆ. ರಾಜೇಶ್ ಭೂಷಣ್ ಅವರು ಜೂನ್ 28 ರಿಂದ ಜುಲೈ 4 ರ ವಾರಕ್ಕೆ ಸಂಬಂಧಿಸಿದಂತೆ ತಮ್ಮ ಪತ್ರದಲ್ಲಿಉಲ್ಲೇಖಿಸಿದ್ದಾರೆ. ಇದಲ್ಲದೆ, ಈ ಎಲ್ಲಾ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಅವರು ಹೇಳಿದ್ದಾರೆ. ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ಹೇಳಿದ್ದಾರೆ. ಇದಲ್ಲದೆ ಕಂಟೈನ್‌ಮೆಂಟ್ ವಲಯಗಳ ಬಳಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸ್ಥಾಪಿಸಲು ತಿಳಿಸಲಾಗಿದೆ.

ಇದನ್ನೂ ಓದಿ-Coronaಗೆ ಬಲಿಯಾದ China Corona Vaccine ಟ್ರಯಲ್ ನ ಪ್ರಮುಖ ವಿಜ್ಞಾನಿ!

ಲಸಿಕಾಕರಣ ಕಾರ್ಯಕ್ರಮದ ವೇಗ ಹೆಚ್ಚಿಸಲು ಸಲಹೆ
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಚುಚ್ಚುಮದ್ದನ್ನು ಚುರುಕುಗೊಳಿಸಲು ಆದೇಶಿಸಲಾಗಿದೆ. ಗುರುವಾರ ಬೆಳಿಗ್ಗೆ ಪ್ರಕಟಗೊಂಡ ಕಳೆದ 24 ಗಂಟೆಗಳ ಅಂಕಿ ಅಂಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೆ, ಕಳೆದ 55 ದಿನಗಳ ನಂತರ ಮೊದಲ ಬಾರಿಗೆ, ಒಂದು ದಿನದಲ್ಲಿ ಕಂಡುಬರುವ ಹೊಸ ಕರೋನಾ ಪ್ರಕರಣಗಳ ಸಂಖ್ಯೆ (Coronavirus Active Cases in India) ಚೇತರಿಸಿಕೊಂಡ ಪ್ರಕರಣಗಳಿಗಿಂತ ಹೆಚ್ಚಾಗಿದೆ.

ಇದನ್ನೂ ಓದಿ-Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!

111 ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು ಹಾಗೂ ಇದೀಗ ಮತ್ತೆ ಏರಿಕೆ
ಜುಲೈ 6 ರಂದು ದೇಶಾದ್ಯಂತ 34,703 ಹೊಸ ಪ್ರಕರಣಗಳು ಪತ್ತೆಯಾಗಿದ್ದು (Coronavirus India Latest Update), ಇದು ಕಳೆದ 111 ದಿನಗಳ ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ. ಆದರೆ, ನಂತರ ಪ್ರಕರಣಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಬುಧವಾರ ಮತ್ತು ಗುರುವಾರ, ಕರೋನದ ಹೊಸ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕಿಂತ ಹೆಚ್ಚಾಗಿದೆ.  ಅಷ್ಟೇ ಅಲ್ಲ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಬುಧವಾರ 4.59 ಲಕ್ಷ ಸಕ್ರೀಯ ಪ್ರಕರಣಗಳಿದ್ದವು ಮತ್ತು ಅದು ಇದೀಗ, 460,704 ಕ್ಕೆ ಏರಿಕೆಯಾಗಿದೆ. 

ಇದನ್ನೂ ಓದಿ-ಮಕ್ಕಳ ಕಣ್ಣುಗಳ ಮೇಲೆ ಆನ್ಲೈನ್ ಕ್ಲಾಸ್ ನಿಂದ ಪ್ರಭಾವ, ಸ್ಮಾರ್ಟ್ ಫೋನ್ ನಿಂದ ಹೆಚ್ಚು ಹಾನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News