ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ(Kabul Airport)ದಲ್ಲಿ ಸೇರಿದ್ದ ಜನಸಂದಣಿ ಚದುರಿಸಲು ತಾಲಿಬಾನ್ ಕಮಾಂಡರ್‌ಗಳು ಮತ್ತೊಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜಲಾಲಾಬಾದ್‌ನಲ್ಲಿ ಪ್ರತಿಭಟನಾಕಾರರ ಗುಂಪಿನ ಮೇಲೆ ತಾಲಿಬಾನ್ ಉಗ್ರರು ಗುಂಡು ಹಾರಿಸಿದ ಭಯಾನಕ ವಿಡಿಯೋ ಬುಧವಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೆ ಗುಂಡಿನ ದಾಳಿ ನಡೆಸಲಾಗಿದೆ.
ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Hamid Karzai International Airport)ದಲ್ಲಿ ದೇಶ ತೊರೆಯುವ ಉದ್ದೇಶದಿಂದ ಸಾವಿರಾರು ಜನರು ಸೇರಿದ್ದಾರೆ. ಇತರ ದೇಶಗಳ ವಿಮಾನವೇರಲು ಅಫ್ಘಾನ್ ಪ್ರಜೆಗಳು ಪೈಪೋಟಿ ನಡೆಸುತ್ತಿದ್ದಾರೆ. ತಾಲಿಬಾನ್ ಉಗ್ರರ ಕಪಿಮುಷ್ಠಿಯಿಂದ ಪಾರಾಗಿ ಜೀವ ಉಳಿಸಿಕೊಂಡರೆ ಸಾಕು ಎನ್ನುತ್ತಿರುವ ಅಲ್ಲಿನ ಜನರಿಗೆ ಮುಂದೇನು ಮಾಡಬೇಕೆಂಬುದು ತೋಚುತ್ತಿಲ್ಲ. ಹೀಗಾಗಿ ಗುಂಪು-ಗುಂಪಾಗಿ ಸೇರಿಕೊಂಡು ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದಾರೆ. ಗುಂಪು ಚದುರಿಸಲು ತಾಲಿಬಾನ್ ಕಮಾಂಡರ್‌ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದೆ.
Now - Another morning, another gunshot with struggle for escape. Kabul international airport. pic.twitter.com/eScU7ERM5V
— Muslim Shirzad (@MuslimShirzad) August 19, 2021
ಇದನ್ನೂ ಓದಿ: Afghanistan Crisis: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪೋಷಕರಿಂದ ಬೇರ್ಪಟ್ಟ 7 ತಿಂಗಳ ಮುಗ್ಧ ಹಸುಳೆ
ಇನ್ನೊಂದು ಬೆಳವಣಿಗೆಯಲ್ಲಿ ಅಫ್ಘಾನಿಸ್ತಾನ(Afghanistan)ದ ನಗರವಾದ ಅಸದಾಬಾದ್‌ನಲ್ಲಿ ಇಂದು ನಡೆದ ಸ್ವಾತಂತ್ರ್ಯ ದಿನದ ರ್ಯಾಲಿಯಲ್ಲಿ ತಾಲಿಬಾನ್‌ಗಳು ರಾಷ್ಟ್ರಧ್ವಜವನ್ನು ಬೀಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದಾಗ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಪ್ರತಿ ವರ್ಷ ಆಗಸ್ಟ್ 19 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ತಾಲಿಬಾನ್(Taliban)ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಂಡ ನಂತರ ದೇಶದ ರಾಷ್ಟ್ರೀಯ ಧ್ವಜವನ್ನು ಹಿಡಿದು ಹಲವಾರು ಪ್ರಾಂತ್ಯಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪೂರ್ವ ಪ್ರಾಂತ್ಯಗಳಾದ ನಂಗರ್‌ಹಾರ್, ಕುನಾರ್ ಮತ್ತು ಖೋಸ್ಟ್ ನಿವಾಸಿಗಳು ಅಫ್ಘಾನ್ ರಾಷ್ಟ್ರೀಯ ಧ್ವಜವನ್ನು ಹಾರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Viral News: ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ ಪತ್ತೆ..!
ಕಾಬೂಲ್‌ನಲ್ಲಿರುವ ಅಧ್ಯಕ್ಷೀಯ ಅರಮನೆ(Kabul Presidential Palace) ಪ್ರವೇಶಿಸಿದ ನಂತರ ತಾಲಿಬಾನ್ ಭಯೋತ್ಪಾದಕರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ತಾಲಿಬಾನ್ ನಾಯಕರು ದೋಹಾದಲ್ಲಿ ಭವಿಷ್ಯದ ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಅಂತಾರಾಷ್ಟ್ರೀಯ ಸಮುದಾಯ ಮತ್ತು ಅಂತರ್-ಅಫ್ಘಾನ್ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಅಂತಾ ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ